ಚರಂಡಿಗೆ ಬಿದ್ದ ಬಸ್: ಹಲವರಿಗೆ ಗಾಯ

ಚರಂಡಿಗೆ ಬಿದ್ದ ಬಸ್: ಹಲವರಿಗೆ ಗಾಯ

ಬೆಳ್ತಂಗಡಿ: ಧರ್ಮಸ್ಥಳದಿಂದ ಕಡಿರುದ್ಯಾವರ ಗ್ರಾಮದ ಆಲಂದಡ್ಕ ಸಾಗುವ ಸಾರಿಗೆ ಬಸ್‌ವೊಂದು ಮುಂಡಾಜೆ ಸಮೀಪದ ಸೋಮಂತಡ್ಕ ಸಮೀಪ ಚರಂಡಿಗೆ ಸರಿದ ಘಟನೆ ಇಂದು ನಡೆದಿದೆ.

ಧರ್ಮಸ್ಥಳದಿಂದ ಉಜಿರೆ ಮಾರ್ಗವಾಗಿ ಮುಂಡಾಜೆ ಮೂಲಕ ಕಡಿರುದ್ಯಾವರದಿಂದ ಆಲಂದಡ್ಕ ಸಾಗುವ ಬಸ್ ಸುಮಾರು 4.30 ಕ್ಕೆ ಅಪಘಾತ ಸಂಭವಿಸಿದೆ.

ಬಸ್‌ನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳೇ ಇದ್ದು ಬಹುತೇಕ ಮಂದಿಗೆ ಗಾಯವಾಗಿವೆ. ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ನಡೆಯುತ್ತಿರುವುದರಿಂದ ಮೋರಿ ಅಳವಡಿಸಲಾಗಿದೆ. ಈ ಸ್ಥಳದಲ್ಲಿ ಬಸ್ ನ ಸ್ಟೇರಿಂಗ್ ಕಟ್ ಅಥವಾ ಬ್ರೇಕ್ ಫೈಲ್ ನಿಂದಾಗಿ ಬಸ್ ಸಮೀಪದ ಮೋರಿಗೆ ತಾಗಿ ನಿಂತಿದೆ.

ಕೆಳಭಾಗದಲ್ಲಿ ಮನೆಯೊಂದಿದ್ದು, ಅಲ್ಲಿ ಅಂಗಳದಲ್ಲಿ ಮಕ್ಕಳು ಆಟವಾಡುತ್ತಿದ್ದರು. ಬಸ್ ಜಾರಿ ಮನೆ ಮೇಲೆ ಬೀಳುತ್ತಿದ್ದರೆ ಮತ್ತಷ್ಟು ಅಪಾಯಕ್ಕೆ ಕಾರಣವಾಗುತ್ತಿತ್ತು.

ಹಲವು ವಿದ್ಯಾರ್ಥಿಗಳಿಗೆ, ಬಸ್ ಪ್ರಯಾಣಿಕರಿಗೆ ಗಾಯವಾಗಿದ್ದು, ತಕ್ಷಣವೇ ಸ್ಥಳೀಯ ಆಸ್ಪತ್ರೆಗೆ ಸಾಗಿಸಲಾಗಿದೆ. ಹೆದ್ದಾರಿ ಸಮೀಪದ ಕಾಮಗಾರಿಯಾಗುತ್ತಿದ್ದು, ಕಬ್ಬಿಣದ ಸರಳುಗಳು ತೆರೆದಿದ್ದವು. ವಿದ್ಯಾರ್ಥಿಗಳು ಮುಂಬದಿಯ ಗಾಜು ಒಡೆದು ಇಬ್ಬರು ಮಕ್ಕಳು ಚರಂಡಿಗೆ ಬಿದ್ದಿದ್ದಾರೆ. ಆದರೆ ಕಬ್ಬಿಣದ ಸರಳು ಮಕ್ಕಳಿಗೆ ತಾಗಿಲ್ಲ. ಇಲ್ಲವಾದಲ್ಲಿ ದೊಡ್ಡ ಜೀವ ಹಾನಿ ಸಂಭವಿಸುವ ಸಾಧ್ಯತೆಯಿತ್ತು.

ಸ್ಥಳದಲ್ಲಿ ನೆರೆದಿದ್ದ ಸಾರ್ವಜನಿಕರು ಹಾಗೂ ಹೆದ್ದಾರಿ ಕಾಮಗಾರಿ ಸಿಬಂದಿ  ತುರ್ತು ಸ್ಪಂದನೆ ನೀಡಿ ಆಸ್ಪತ್ರೆಗೆ ಸಾಗಿಸಲು ಸಹಕರಿಸಿದ್ದಾರೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article