
ಕೋಟ ಶಾಂತಮೂರ್ತಿ ಶ್ರೀ ಶನೀಶ್ವರ ದೇವಸ್ಥಾನದ ವಾರ್ಷಿಕ ವರ್ಧಂತಿ ಹಾಗೂ ಸಭಾಭವನ ಲೋಕಾರ್ಪಣೆಯ ಆಮಂತ್ರಣ ಪತ್ರಿಕೆ ಬಿಡುಗಡೆ
Friday, January 10, 2025
ಕೋಟ: ಇಲ್ಲಿನ ಹಾಡಿಕೆರೆ ಬೆಟ್ಟಿನಲ್ಲಿರುವ ಶಾಂತಮೂರ್ತಿ ಶ್ರೀ ಶನೀಶ್ವರ ದೇವಸ್ಥಾನದ ವಾರ್ಷಿಕ ವರ್ಧಂತಿ ಹಾಗೂ ಸಭಾಭವನ ಲೋಕಾರ್ಪಣೆಯ ಆಮಂತ್ರಣ ಪತ್ರಿಕೆ ಬಿಡುಗಡೆ ಸಮಾರಂಭ ಇತ್ತೀಚೆಗೆ ನಡೆಯಿತು.
ಫೆ.12 ರಿಂದ 15 ರ ತನಕ ನಡೆಯಲಿರುವ ದೇವಸ್ಥಾನದ ವಾರ್ಷಿಕ ವರ್ಧಂತಿ ಹಾಗೂ ನೂತನ ಸಭಾಭವನ ಲೋಕಾರ್ಪಣೆ ಕಾರ್ಯಕ್ರಮದ ಪೂರ್ವಭಾವಿ ಸಭೆಯು ಇತ್ತೀಚೆಗೆ ದೇಗುಲದಲ್ಲಿ ಜರುಗಿತು.
ಸುಮಾರು 1.5 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ನೂತನ ಸಭಾಭವನದ ಲೋಕಾರ್ಪಣೆ, ಇನ್ನಿತರ ಕಾರ್ಯಕ್ರಮದ ಬಗ್ಗೆ ಚರ್ಚಿಸಲಾಯಿತು.
ಶ್ರೀ ಕ್ಷೇತ್ರದ ಪಾತ್ರಿ ಕೆ. ಭಾಸ್ಕರ್ ಸ್ವಾಮಿ, ಪಂಚವರ್ಣ ಸಂಸ್ಥೆ ಸ್ಥಾಪಕಧ್ಯಕ್ಷ ಶೇವಧಿ ಸುರೇಶ್ ಗಾಣಿಗ, ಸಾಮಾಜಿಕ ಹೋರಾಟಗಾರ ದಿನೇಶ್ ಗಾಣಿಗ, ಉದ್ಯಮಿ. ಸಿದ್ದಿ ಶ್ರೀನಿವಾಸ, ಪೂಜಾರಿ, ರೈತಧ್ವನಿ ಸಂಘದ ತಿಮ್ಮಣ್ಣ ಕಾಂಚನ್, ಅರ್ಚಕರಾದ ಜಯರಾಜ್ ಪಡುಕರೆ. ಸಂತೋಷ್ ಸಾಲಿಯಾನ್, ರವಿ ಕೋಟ, ಪ್ರವೀಣ್, ಶ್ರೀಕಾಂತ್ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಕೋಟ ಅಮೃತೇಶ್ವರೀ ದೇಗುಲದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಆನಂದ ಸಿ. ಕುಂದರ್ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿದರು.