ವೇಟ್‌ಲಿಫ್ಟಿಂಗ್ ಪಂದ್ಯದಲ್ಲಿ ಜಿಲ್ಲೆಗೆ 2 ಜಿನ್ನ

ವೇಟ್‌ಲಿಫ್ಟಿಂಗ್ ಪಂದ್ಯದಲ್ಲಿ ಜಿಲ್ಲೆಗೆ 2 ಜಿನ್ನ

ಮಂಗಳೂರು: ಮಂಗಳೂರಿನಲ್ಲಿ ಶುಕ್ರವಾರದಿಂದ ಆರಂಭವಾಗಿರುವ ಕರ್ನಾಟಕ ಕ್ರೀಡಾಕೂಟದ ಮೊದಲ ದಿನ ಮಂಗಳೂರಿನಲ್ಲಿ ನಡೆದ ವೇಟ್‌ಲಿಫ್ಟಿಂಗ್ ಪಂದ್ಯದಲ್ಲಿ ದ.ಕ. ಜಿಲ್ಲೆಗೆ ಎರಡು ಚಿನ್ನದ ಪದಕ ಲಭಿಸಿದೆ. ಉಜಿರೆ ಎಸ್‌ಡಿಎಂ ಕಾಲೇಜು ಹಾಗೂ ಮೂಡುಬಿದಿರೆ ಆಳ್ವಾಸ್ ಕಾಲೇಜಿನ ವಿದ್ಯಾರ್ಥಿಗಳು ಚಿನ್ನ ಪದಕ ಗೆದ್ದುಕೊಂಡಿದ್ದಾರೆ. 

ಉಜಿರೆ ಎಸ್‌ಡಿಎಂ ಕಾಲೇಜಿನ ಮನೋಜ್ ಆರ್.ಜಿ. ಮತ್ತು ಮೂಡುಬಿದಿರೆ ಆಳ್ವಾಸ್ ಕಾಲೇಜಿನ ನಾಗರಾಜ್ ಕಣ್ಣಿ ಎಸ್. ಇವರು ಪುರುಷರ ವೇಟ್‌ಲಿಫ್ಟಿಂಗ್‌ನಲ್ಲಿ  ಕ್ರಮವಾಗಿ 55 ಕೆಜಿ ಮತ್ತು 61 ಕೆಜಿ ವಿಭಾಗದ ಚಿನ್ನದ ಪದಕ ತಮ್ಮದಾಗಿಸಿಕೊಂಡರು. 

ಮನೋಜ್ ಅವರು ಕ್ಲೀನ್ ಆಂಡ್ ಜರ್ಕ್‌ನಲ್ಲಿ 110 ಕೆಜಿ ಒಳಗೊಂಡಂತೆ ಒಟ್ಟು 192 ಕೆಜಿ ಭಾರ ಎತ್ತಿದರು. ನಾಗರಾಜ್ ಒಟ್ಟು 125 ಕೆಜಿ ಒಳಗೊಂಡಂತೆ 220 ಕೆಜಿ ಭಾರ ಎತ್ತಿ ಸಾಧನೆ ಮಾಡಿದರು.

55 ಕೆಜಿ ವಿಭಾಗದಲ್ಲಿ ಬೆಳಗಾವಿ ಡಿವೈಇಎಸ್‌ನ ರೋನಿತ್ ಮುರುಕುಟೆ (170 ಕೆಜಿ) ಮತ್ತು ಮೂಡುಬಿದಿರೆ ಆಳ್ವಾಸ್ ಕಾಲೇಜಿನ ಮೊಹಮ್ಮದ್ ಅಮೀರ್ (167 ಕೆಜಿ)  ಕ್ರಮವಾಗಿ ಬೆಳ್ಳಿ ಮತ್ತು ಕಂಚಿನ ಪದಕ ಗಳಿಸಿದರು. 61 ಕೆಜಿ ವಿಭಾಗದಲ್ಲಿ ಮಂಗಳ ಥೋರವರ್ಸ್ ಅಕಾಡೆಮಿಯ ರಹೀಫನ್ ಜೆ (138 ಕೆಜಿ) ಹಾಗೂ ಜೈನ್ ಜೂ ನಿಯರ್ ಕಾಲೇಜಿನ ರಂಜನ್ ಆರ್.ಕೆ (120 ಕೆಜಿ) ಕ್ರಮವಾಗಿ ಬೆಳ್ಳಿ ಮತ್ತು ಕಂಚಿನ ಪದಕ ಗಳಿಸಿದರು.

49 ಕೆಜಿ ಮಹಿಳಾ ವಿಭಾಗದಲ್ಲಿ ಸಂಜೀವಿ ಶೆಟ್ಟಿ ಬೆಂಗಳೂರು ಕ್ಲಬ್‌ನ ಲಕ್ಷ್ಮಿ ಬಿ.(156 ಕೆಜಿ) ಚಿನ್ನ, ಎಸ್‌ಡಿಎಂ ಉಜಿರೆಯ ಅಮೃತಾ ಎಸ್.ಆರ್.(90 ಕೆಜಿ) ಬೆಳ್ಳಿ ಹಾಗೂ ಮೈಸೂರು ಜಿಲ್ಲಾ ವೇಟ್‌ಲಿಫ್ಟಿಂಗ್ ಎಸೋಸಿಯೇಷನ್‌ನ ಹರ್ಷಿತಾ ಎಂ.(76 ಕೆಜಿ) ಕಂಚು ಪದಕ ಗಳಿಸಿದರು.

45 ಕೆಜಿ ಮಹಿಳಾ ವಿಭಾಗದಲ್ಲಿ ಡಯಸಿಸ್ ಬೆಂಗಳೂರಿನ ಪಲ್ಲವಿ(136 ಕೆಜಿ) ಚಿನ್ನ, ಪುತ್ತೂರು ಫಿಲೋಮಿನಾ ಕಾಲೇಜಿನ ಸ್ಪಂದನಾ(133 ಕೆಜಿ) ಬೆಳ್ಳಿ ಹಾಗೂ ಅದೇ  ಕಾಲೇಜಿನ ಶಿವಾನಿ ಮಾಚಯ್ಯ(89 ಕೆಜಿ) ಕಂಚಿನ ಪದಕ ಪಡೆದರು.

ವುಶು ಪಂದ್ಯದಲ್ಲಿ ಮೂರು ಜಿಲ್ಲೆಗೆ ಚಿನ್ನ:

ವುಶು ಪಂದ್ಯದಲ್ಲಿ ಬಾಗಲಕೋಟೆ, ದ.ಕ. ಹಾಗೂ ಬೆಂಗಳೂರಿಗೆ ಚಿನ್ನದ ಪದಕ ಲಭಿಸಿದೆ.

ಮಹಿಳೆಯರ 60 ಕೆಜಿ ವಿಭಾಗದಲ್ಲಿ ಬಾಗಲಕೋಟೆಯ ನಾಗರತ್ನ(ಚಿನ್ನ), ಬೆಂಗಳೂರಿನ ಮೈತ್ರ(ಬೆಳ್ಳಿ), ಬೆಳಗಾವಿಯ ಜ್ಯೋತಿ ಘಾಟಗೆ ಹಾಗೂ ಕಲಬುರಗಿಯ ಪವಿತ್ರ  ಅಸಂಗಿ(ಕಂಚು) ಪದಕ ಪಡೆದರು.

56 ಕೆಜಿ ವಿಭಾಗದಲ್ಲಿ ದ.ಕ. ಜಿಲ್ಲೆಯ ಅಂಜಲಿ ಕೆ.ಜೋಗಿ(ಚಿನ್ನ), ಚಿತ್ರದುರ್ಗದ ಅನು(ಬೆಳ್ಳಿ), ಬಾಗಲಕೋಟೆ ಪ್ರಿಯಾಂಕ ಸೊನ್ನದ್ ಮತ್ತು ವಿಜಯಪುರದ ತನುಶ್ರೀ ವಿ.ಕಾಳೆ(ಕಂಚು) ಪದಕ ಪಡೆದರು.

52 ಕೆಜಿ ವಿಭಾಗದಲ್ಲಿ ಬಾಗಲಕೋಟೆಯ ಸಾಬಲ್ವ ಮಾದಾರ್(ಚಿನ್ನ), ಗದಗ್‌ನ ಸವಿತಾ ಕಡಕೋಳ್(ಬೆಳ್ಳಿ), ವಿಜಯಪುರದ ಆರತಿ ಎಸ್. ಸೊನ್ನದ್ ಹಾಗೂ ಕೊಪ್ಪಳದ  ಆಶಾ(ಕಂಚು) ಪದಕ ವಿಜೇತರು.

48 ಕೆಜಿ ವಿಭಾಗದಲ್ಲಿ ಬಾಗಲಕೋಟೆಯ ಸುಷ್ಮಿತಾ ಕಾವಡಿಮಟ್ಟಿ(ಚಿನ್ನ), ದ.ಕ. ಜಿಲ್ಲೆಯ ಜೋಸ್ಲಿನ್ ಸೋನಾ ಡಿಸೋಜಾ(ಬೆಳ್ಳಿ), ವಿಜಯಪುರದ ಶ್ರೀವರ್ಧಿನಿ ಅನಿಲ್  ಕೊರಬು ಮತ್ತು ಕೊಪ್ಪಳದ ಪ್ರಮೀಳಾ(ಕಂಚು) ಪದಕ ಗಳಿಸಿದರು.

45 ಕೆಜಿ ವಿಭಾಗದಲ್ಲಿ ಬೆಂಗಳೂರಿನ ಮೇಘಾ ರಘುನಾಥ್(ಚಿನ್ನ), ಬಾಗಲಕೋಟೆಯ ಲಕ್ಷ್ಮಯ ಹನಮಾರ್(ಬೆಳ್ಳಿ), ಕೊಪ್ಪಳದ ಐಶ್ವರ್ಯ ಹಾಗೂ ಧಾರವಾಡದ ಚಿತ್ರಾ  ಬಿ.ಕಕಂದಕಿ(ಕಂಚು) ಪದಕ ಪಡೆದಿದ್ದಾರೆ.

ವೇಟ್‌ಲಿಫ್ಟಿಂಗ್ ಪಂದ್ಯ ಉರ್ವಸ್ಟೋರ್‌ನ ಅಂಬೇಡ್ಕರ್ ಭವನದಲ್ಲಿ ನಡೆದರೆ, ಫುಟ್‌ಬಾಲ್ ಪಂದ್ಯ ನೆಹರೂ ಮೈದಾನದಲ್ಲಿ ಹಾಗೂ ವುಶು ಪಂದ್ಯ ಸರ್ಕಾರಿ ನೌಕರರ ಸಭಾಂಗಣದಲ್ಲಿ ಮುಂದುವರಿದಿದೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article