
ದ.ಕ. ಜಿಲ್ಲೆಗೆ ಸಿಎಂ ಪ್ರವಾಸ: 2 ಗಂಟೆ ವಿಳಂಬ
ಮಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಗಳೂರು ಪ್ರವಾಸ ಎರಡು ಗಂಟೆ ವಿಳಂಬವಾಗಿದೆ. ಹೀಗಾಗಿ ಸಿಎಂ ಕಾರ್ಯಕ್ರಮಕ್ಕಾಗಿ ಕಾದು ಕುಳಿತ ಅಧಿಕಾರಿಗಳು, ಮಾಧ್ಯಮದವರು, ಜನಸಾಮಾನ್ಯರು ಕಾದು ಕಾದು ಹೈರಾಣಾಗಿದ್ದಾರೆ.
ಮಂಗಳೂರಿನಲ್ಲಿ ಬೆಳಗ್ಗೆ 11.30 ಗಂಟೆಗೆ ಮೇರಿಹಿಲ್‌ನಲ್ಲಿ ರಾಜೀವ ಗಾಂಧಿ ಆರೋಗ್ಯ ವಿಜ್ಞಾನಗಳ ವಿವಿಯ ಪ್ರಾದೇಶಿಕ ಕೇಂದ್ರ ಸ್ಥಾಪನೆಗೆ ಶಿಲಾನ್ಯಾಸ ನೆರವೇರಿಸಬೇಕಿತ್ತು. ಇದಕ್ಕಾಗಿ ರಾಜೀವ ಗಾಂಧಿ ಯೂನಿವರ್ಸಿಟಿ ಒಳಪಟ್ಟ ಮಂಗಳೂರಿನ ಹಲವು ನರ್ಸಿಂಗ್ ಕಾಲೇಜುಗಳ ವಿದ್ಯಾರ್ಥಿಗಳನ್ನು ಕರೆಸಲಾಗಿತ್ತು. ನೂರಾರು ವಿದ್ಯಾರ್ಥಿಗಳು ಸ್ಥಳದಲ್ಲಿ ಸೇರಿದ್ದು ಹಾಕಿರುವ ಶಾಮಿಯಾನ, ಕುರ್ಚಿ ಸಾಕಾಗದೆ ಹೊರಗಡೆಯೂ ನಿಂತಿದ್ದಾರೆ. ಇದಲ್ಲದೆ, ನರ್ಸಿಂಗ್ ಕಾಲೇಜುಗಳ ಉಪನ್ಯಾಸಕರು, ಯು ನಿವರ್ಸಿಟಿ ಅಧಿಕಾರಿಗಳು ಕೂಡ ಸ್ಥಳದಲ್ಲಿದ್ದು ಮುಖ್ಯಮಂತ್ರಿ ಬರುವಿಕೆಯನ್ನು ಕಾಯುತ್ತಿದ್ದಾರೆ. ಇದಲ್ಲದೆ, ಕಾರ್ಯಕ್ರಮಕ್ಕಾಗಿ ವಾರ್ತಾ ಮಾಧ್ಯಮದವರನ್ನೂ ಕರೆದೊಯ್ಯಲಾಗಿತ್ತು. ಈ ಇಲಾಖೆಯಿಂದ 11 ಗಂಟೆಗೆ ಸ್ಥಳಕ್ಕೆ ನರ್ಸಿಂಗ್ ವಿದ್ಯಾರ್ಥಿಗಳನ್ನು ಬೆಳಗ್ಗೆ ಕರೆಸಲಾಗಿತ್ತು.
ಉಡುಪಿಯಿಂದ ವಿದ್ಯಾರ್ಥಿಗಳಿಗೆ ಕನಿಷ್ಠ ಉಪಾಹಾರ ಮಾಡಿಲ್ಲ. ಕೆಲವು ವಿದ್ಯಾರ್ಥಿಗಳು, ಹೊರಗಡೆ ಹೊಟೇಲ್ ಹೋಗಿ 9 ಗಂಟೆಗೇ ಆಗಮಿಸಿರುವ ವ್ಯವಸ್ಥೆಯನ್ನೂ ಉಪ ನ್ಯಾಸಕರು ಬಾಯಾರಿಕೆ ಕುಡಿಯುತ್ತಿದ್ದರು. ಅಧಿಕಾರಿಗಳ ಮಾಹಿತಿ ಪ್ರಕಾರ, ಸಿಎಂ ಸಿದ್ದರಾಮಯ್ಯ ಅವರು 12 ಗಂಟೆ ವೇಳೆಗೆ ಬೆಂಗಳೂರಿನಿಂದ ಹೊರಟಿದ್ದು 12.45 ರ ವೇಳೆಗೆ ಮಂಗಳೂರು ವಿಮಾನ ನಿಲ್ದಾಣ ತಲುಪಬಹುದು. ಮೇರಿಹಿಲ್ ಕಾರ್ಯಕ್ರಮ ಸ್ಥಳಕ್ಕೆ ತಲುಪುವಾಗ 1.20 ಗಂಟೆ ಆಗಬಹುದು ಎನ್ನುತ್ತಿದ್ದಾರೆ. ಸ್ಥಳದಲ್ಲಿ ಸೇರಿದ ಜನರಿಗೆ ಬೋರ್ ಆಗುವುದನ್ನು ತಪ್ಪಿಸಲು ವಿದ್ಯಾರ್ಥಿಗಳನ್ನು ವೇದಿಕೆಗೆ ಕರೆಸಿ ಹಾಡುಗಳನ್ನು ಹಾಡಿಸುವ ಸ್ಥಿತಿಯಾಗಿದೆ. ವೇದಿಕೆ ಖಾಲಿ ಇದ್ದರೂ ಸ್ಪೀಕರ್ ಯು.ಟಿ. ಖಾದರ್, ಕ್ಷೇತ್ರದ ಶಾಸಕ ಭರತ್ ಶೆಟ್ಟಿ ಭಾಷಣ ಮಾಡಿ ಟೈಮ್ ಫಿಲ್ಲಿಂಗ್ ಮಾಡಿದ್ದಾರೆ.
ಇದೇ ವೇಳೆ, ಇತ್ತ ಮಂಗಳೂರು ಪುರಭವನದಲ್ಲಿ ಬಹು ಸಂಸ್ಕೃತಿ ಉತ್ಸವ ಹಮ್ಮಿಕೊಳ್ಳಲಾಗಿದೆ. ತುಳು, ಬ್ಯಾರಿ, ಕೊಂಕಣಿ, ಕೊಡವ, ಯಕ್ಷಗಾನ ಸೇರಿದಂತೆ ದಕ್ಷಿಣ ಕನ್ನಡ ಜಿಲ್ಲಾಡಳಿತ ಮತ್ತು ಮಹಾನಗರ ಪಾಲಿಕೆ ಜಂಟಿ ಸಹಭಾಗಿತ್ವದಲ್ಲಿ ಉತ್ಸವ ಹಮ್ಮಿಕೊಂಡಿದ್ದು, 12 ಗಂಟೆ ವೇಳೆಗೆ ಸಿದ್ದರಾಮಯ್ಯ ಉದ್ಘಾಟನೆ ಮಾಡಬೇಕಿತ್ತು.