ಕುದ್ಮುಲ್ ರಂಗರಾವ್ ಪುಣ್ಯಸ್ಮರಣೆಯಂದು ಸ್ಮಾರಕಕ್ಕೆ ಗೌರವ ನಮನ

ಕುದ್ಮುಲ್ ರಂಗರಾವ್ ಪುಣ್ಯಸ್ಮರಣೆಯಂದು ಸ್ಮಾರಕಕ್ಕೆ ಗೌರವ ನಮನ


ಮಂಗಳೂರು: ದಲಿತೋದ್ಧಾರಕ, ಸಾಮಾಜಿಕ ಸುಧಾರಣೆಯ ಹರಿಕಾರ, ಕುದ್ಮುಲ್ ರಂಗರಾವ್ ಅವರ ಪುಣ್ಯಸ್ಮರಣೆಯ ಅಂಗವಾಗಿ ಕುದ್ಮುಲ್ ರಂಗರಾವ್ ಎಜುಕೇಶನ್ ಟ್ರಸ್ಟ್, ಬಿಜೆಪಿ ಮಂಗಳೂರು ನಗರ ದಕ್ಷಿಣ ಹಾಗೂ ಎಸ್ಸಿ ಮೋರ್ಚಾ ವತಿಯಿಂದ ಅತ್ತಾವರ ಬಾಬುಗುಡ್ಡೆಯಲ್ಲಿರುವ ಸ್ಮಾರಕಕ್ಕೆ ಭೇಟಿ ನೀಡಿ ಪುಷ್ಪ ನಮನಗಳನ್ನು ಸಲ್ಲಿಸಲಾಯಿತು.


ಈ ವೇಳೆ ಮಾತನಾಡಿದ ಶಾಸಕ ವೇದವ್ಯಾಸ ಕಾಮತ್ ಅವರು, ಸಾರಸ್ವತ ಬ್ರಾಹ್ಮಣ ಕುಟುಂಬದಲ್ಲಿ ಜನಿಸಿದ್ದ ರಂಗರಾಯರು ಶೋಷಿತರ ಅಭಿವೃದ್ಧಿಗಾಗಿ ತಮ್ಮ ಇಡೀ ಬದುಕನ್ನು ಮುಡಿಪಾಗಿಟ್ಟ ಮಹಾನ್ ಮಾನವತಾವಾದಿಗಳು. ಸಮಾಜದಲ್ಲಿ ಎಲ್ಲರಂತೆ ದಲಿತರೂ ಸಹ ಸ್ವಾಭಿಮಾನ, ಆತ್ಮ ಗೌರವದಿಂದ ಬದುಕಬೇಕು. ಅವರೂ ಸಹ ಉನ್ನತ ಶಿಕ್ಷಣ ಪಡೆದು ಸಮಾಜದ ಮುನ್ನಲೆಗೆ ಬರಬೇಕೆಂದು ತೀವ್ರ ಕಾಳಜಿ ವಹಿಸಿ ವಿರೋಧದ ನಡುವೆಯೂ ವಿಶೇಷ ಶಾಲೆಗಳನ್ನು ತೆರೆದರು. ಅಸ್ಪೃಶ್ಯತೆ ಹಾಗೂ ಶೋಷಣೆಯ ವಿರುದ್ಧ ಹೋರಾಡಿದ ಅವರ ಶ್ರೇಷ್ಠ ಬದುಕು ನಮ್ಮೆಲ್ಲರಿಗೂ ಸದಾ ಆದರ್ಶ ಎಂದು ಹೇಳಿದರು.


ಈ ಸಂದರ್ಭದಲ್ಲಿ ಕುದ್ಮುಲ್ ರಂಗರಾವ್ ಎಜುಕೇಶನ್ ಟ್ರಸ್ಟ್ ನ ಅಧ್ಯಕ್ಷ ಬಿ.ಆರ್. ಹೃದಯನಾಥ್, ಉಪಾಧ್ಯಕ್ಷ ಶಾಮ ಕರ್ಕೇರ, ಕುದ್ಮುಲ್ ರಂಗರಾವ್ ಸ್ಮಾರಕ ಸೇವಾ ಸಂಘದ ಗೌರವಾಧ್ಯಕ್ಷ ದೇವೇಂದ್ರ ಕಾಪಿಕಾಡ್, ಲೇಖಕ ಡಾ. ಕೆ.ಪಿ. ಮಹಾಲಿಂಗ ಕಲ್ಕುಂದ, ಪ್ರವೀಣ್ ಕೋಡಿಕಲ್, ರವಿ ಕಾಪಿಕಾಡ್, ಪ್ರದೀಪ್ ಕಾಪಿಕಾಡ್, ಮಂಡಲದ ಬಿಜೆಪಿ ಅಧ್ಯಕ್ಷ ರಮೇಶ್ ಕಂಡೆಟ್ಟು, ಮೇಯರ್ ಮನೋಜ್ ಕುಮಾರ್ ಕೋಡಿಕಲ್, ಉಪಮೇಯರ್ ಭಾನುಮತಿ, ಪಾಲಿಕೆ ಸದಸ್ಯ ಭರತ್ ಕುಮಾರ್, ಬಿಜೆಪಿ ಪ್ರಮುಖರಾದ ರಘುವೀರ್ ಬಾಬುಗುಡ್ಡೆ, ಮೋಹನ್ ಪೂಜಾರಿ, ಪ್ರವೀಣ್ ನಿಡ್ಡೇಲ್, ನಿತಿನ್ ಕುಮಾರ್, ಭಾಸ್ಕರ ಚಂದ್ರ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article