
ಏ.18-26 ರವರೆಗೆ ತೋಡಾರು ಉರೂಸ್
Thursday, January 30, 2025
ಮೂಡುಬಿದಿರೆ: ಬದ್ರಿಯಾ ಸುನ್ನೀ ಜುಮ್ಮಾ ಮಸೀದಿ ತೋಡಾರು ಇದರ ವಲಿಯುಲ್ಲಾಹಿ ದರ್ಗಾ ಶರೀಫ್ ರ ಉರೂಸ್ ಸಮಾರಂಭವು ಎಪ್ರಿಲ್ 18 ರಿಂದ 26 ರ ವರೆಗೆ ನಡೆಯಲಿದೆ ಎಂದು ಉರೂಸ್ ಸಮಿತಿಯ ಅಧ್ಯಕ್ಷ ಟಿ.ಎಚ್. ಇಸ್ಮಾಯಿಲ್ ಅವರು ಗುರುವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಒಂಭತ್ತು ದಿನಗಳ ಕಾಲ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿದ್ದು ಈ ಕಾರ್ಯಕ್ರಮದಲ್ಲಿ ಧಾರ್ಮಿಕ ವಿದ್ವಾಂಸರು, ನೇತಾರರು ಹಾಗೂ ರಾಜಕೀಯ ಮುಖಂಡರು ಭಾಗವಹಿಸಲಿದ್ದಾರೆ ಎಂದು ಅವರು ಮಾಹಿತಿ ನೀಡಿದರು.
ಎರಡು ವರ್ಷಕ್ಕೊಮ್ಮೆ ನಡೆಯುತ್ತಾ ಬಂದಿರುವ ತೋಡಾರ್ ಉರೂಸ್ ಕಾರ್ಯಕ್ರಮ ಅತ್ಯಂತ ವಿಜೃಂಭಣೆಯಿಂದ ನಡೆಯಲಿದ್ದು ಸಮಾರೋಪ ಸಮಾರಂಭದಲ್ಲಿ ಸೌಹಾರ್ದ ಕೂಟ ನಡೆಯಲಿದೆ ಎಂದರು.
ಮಸೀದಿ ಕಮಿಟಿಯ ಅಧ್ಯಕ್ಷ ಎಂ.ಎ.ಎಸ್.ಆಸಿಫ್ ಇಕ್ಬಾಲ್, ಉರೂಸ್ ಕಮಿಟಿಯ ಉಪಾಧ್ಯಕ್ಷ ಎಮ್.ಎ. ರಝಾಕ್, ಕಾರ್ಯದರ್ಶಿ ಹಿದಾಯತ್ ಹೊಸಮನೆ, ಖಜಾಂಚಿ ಇಬ್ರಾಹಿಂ ಬೂಟ್ ಬಝಾರ್, ಜತೆ ಕಾರ್ಯದರ್ಶಿ ಹಾಶಿರ್ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.