
ಸ್ಥಾಯಿ ಸಮಿತಿ ಅಧ್ಯಕ್ಷರಾಗಿ ಸ್ವಾತಿ ಎಸ್.ಪ್ರಭು
Thursday, January 30, 2025
ಮೂಡುಬಿದಿರೆ: ಪುರಸಭೆಗೆ ನೂತನ ಸ್ಥಾಯಿ ಸಮಿತಿಯನ್ನು ರಚಿಸಿದ್ದು, ನೂತನ ಸ್ಥಾಯಿ ಸಮಿತಿಯ ಅಧ್ಯಕ್ಷೆಯಾಗಿ ಆಯ್ಕೆಯಾದ ಸ್ವಾತಿ ಪ್ರಭು ಅವರನ್ನು ಪುರಸಭೆ ಅಧ್ಯಕ್ಷೆ ಜಯಶ್ರೀ ಕೇಶವ್, ಉಪಾಧ್ಯಕ್ಷ ನಾಗರಾಜ ಪೂಜಾರಿ, ಮುಖ್ಯಾಧಿಕಾರಿ ಇಂದು ಎಂ. ಅಭಿನಂದಿಸಿದರು.
ಸದಸ್ಯರಾಗಿ ಸುಜಾತ ಶಶಿಕಿರಣ್, ಸೌಮ್ಯ ಸಂದೀಪ್ ಶೆಟ್ಟಿ, ದಿವ್ಯಾ ಜಗದೀಶ್, ಧನಲಕ್ಷ್ಮೀ, ಶ್ವೇತಾ ಪ್ರವೀಣ್, ಕುಶಲ ಯಶೋಧರ ದೇವಾಡಿಗ, ನವೀನ್ ಶೆಟ್ಟಿ, ಮಮತಾ ಆನಂದ ಕುಮಾರ್ ಆಯ್ಕೆಯಾಗಿದ್ದಾರೆ.