ದಕ್ಷಿಣ ಕನ್ನಡ ಸಹಕಾರಿ ನೌಕರರ ಸಹಕಾರ ಸಂಘ: ನಿರ್ದೇಶಕರ ಅವಿರೋಧ ಆಯ್ಕೆ

ದಕ್ಷಿಣ ಕನ್ನಡ ಸಹಕಾರಿ ನೌಕರರ ಸಹಕಾರ ಸಂಘ: ನಿರ್ದೇಶಕರ ಅವಿರೋಧ ಆಯ್ಕೆ

ಮಂಗಳೂರು: ಸಹಕಾರ ರಂಗದ ಅದ್ವಿತೀಯ ನಾಯಕರು , ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳ ಹಾಗೂ ಎಸ್ ಸಿಡಿಸಿಸಿ ಬ್ಯಾಂಕಿನ ಅಧ್ಯಕ್ಷ ಡಾ. ಎಂ.ಎನ್. ರಾಜೇಂದ್ರಕುಮಾರ್ ಅವರ ಮಾರ್ಗದರ್ಶನದಲ್ಲಿ ಮುನ್ನಡೆಸುತ್ತಿರುವ ದಕ್ಷಿಣ ಕನ್ನಡ ಸಹಕಾರಿ ನೌಕರರ ಸಹಕಾರ ಸಂಘದ ಮುಂದಿನ ಐದು ವರ್ಷಗಳ ಅವಧಿಗೆ ನಡೆದ ಆಡಳಿತ ಮಂಡಳಿ ನಿರ್ದೇಶಕರ ಚುನಾವಣೆಯಲ್ಲಿ ನಾಮಪತ್ರ ಸಲ್ಲಿಸಿದ ೧೫ ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಕುಂದಾಪುರ ತಾಲೂಕು ಕ್ಷೇತ್ರದಿಂದ ಕೋಟೇಶ್ವರ ವ್ಯವಸಾಯ ಸೇವಾ ಸಹಕಾರ ಸಂಘದ ಮುಖ್ಯಕಾರ್ಯನಿರ್ಹಣಾಧಿಕಾರಿ ವಿಶ್ವೇಶ್ವರ ಐತಾಳ್ ಎಸ್., ಉಡುಪಿ  ತಾಲೂಕು ಕ್ಷೇತ್ರದಿಂದ ಉಡುಪಿ ಜಿಲ್ಲಾ ಸಹಕಾರಿ ಯೂನಿಯನ್ನ ಅಧಿಕಾರಿ ವಿಶ್ವನಾಥ್ ಎನ್. ಅಮೀನ್, ಕಾರ್ಕಳ ತಾಲೂಕು ಕ್ಷೇತ್ರದಿಂದ ಕಾರ್ಕಳ ಲ್ಯಾಂಪ್ಸ್ ಸೊಸೈಟಿಯ  ಮುಖ್ಯಕಾರ್ಯನಿರ್ಹಣಾಧಿಕಾರಿ ದಿವಾಕರ ಶೆಟ್ಟಿ ಕೆ., ಸುಳ್ಯ ತಾಲೂಕು ಕ್ಷೇತ್ರದಿಂದ ವೆಂಕಟರಮಣ ಸಹಕಾರ ಸಂಘದ ಮುಖ್ಯಕಾರ್ಯನಿರ್ಹಣಾಧಿಕಾರಿ ವಿಶ್ವನಾಥ್ ಕೆ.ಟಿ., ಪುತ್ತೂರು ತಾಲೂಕು ಕ್ಷೇತ್ರದಿಂದ ಮುಂಡೂರು ವ್ಯವಸಾಯ ಸೇವಾ ಸಹಕಾರ ಸಂಘದ ಮುಖ್ಯಕಾರ್ಯನಿರ್ಹಣಾಧಿಕಾರಿ ಜಯಪ್ರಕಾಶ್ ರೈ ಸಿ., ಬೆಳ್ತಂಗಡಿ ತಾಲೂಕು ಕ್ಷೇತ್ರದಿಂದ ಬೆಳ್ತಂಗಡಿ ಪಿಕಾರ್ಡ್ ಬ್ಯಾಂಕಿನ ಕಾರ್ಯದರ್ಶಿ ಗಿರಿಧರ್ ಕೆ., ಬಂಟ್ವಾಳ ತಾಲೂಕು ಕ್ಷೇತ್ರದಿಂದ ಕಾವಳಪಡೂರು ವ್ಯವಸಾಯ ಸೇವಾ ಸಹಕಾರ ಸಂಘದ ಮುಖ್ಯಕಾರ್ಯನಿರ್ಹಣಾಧಿಕಾರಿ ಶಿವಾನಂದ ಪಿ., ಮಂಗಳೂರು ತಾಲೂಕು ಕ್ಷೇತ್ರದಿಂದ ಎಸ್ ಸಿಡಿಸಿಸಿ ಬ್ಯಾಂಕಿನ ವಲಯ ಮೇಲ್ವಿಚಾರಕ ಕಿರಣ್ ಕುಮಾರ್ ಶೆಟ್ಟಿ , ಮತ್ತು ಶ್ರೀ  ಭಗವತಿ ಸಹಕಾರ ಬ್ಯಾಂಕ್ ನ ವ್ಯವಸ್ಥಾಪಕ ರಾಘವ ಆರ್ ಉಚ್ಚಿಲ್ , ಮಹಿಳಾ ಮೀಸಲು ಸ್ಥಾನಕ್ಕೆ ಎಸ್ ಸಿಡಿಸಿಸಿ ಬ್ಯಾಂಕ್ ಮೈದಾನ್ ಕ್ರಾಸ್ ಶಾಖೆಯ ವ್ಯವಸ್ಥಾಪಕಿ  ಚಂದ್ರಕಲಾ ಕೆ., ಮತ್ತು ಎಸ್ ಸಿಡಿಸಿಸಿ ಬ್ಯಾಂಕಿನ ಪ್ರಧಾನ ಕಛೇರಿಯ ಬ್ಯಾಂಕ್ ನಿರೀಕ್ಷಕಿ ನಿಶಿತಾ ಜಯರಾಮ್, ಪರಿಶಿಷ್ಟ ಜಾತಿ ಮೀಸಲು ಸ್ಥಾನಕ್ಕೆ ಎಸ್ ಸಿಡಿಸಿಸಿ ಬ್ಯಾಂಕಿನ ಪ್ರಧಾನ ಕಛೇರಿಯ ಬ್ಯಾಂಕ್ ನಿರೀಕ್ಷಕ ಜಗದೀಶ್ಚಂದ್ರ ಎಸ್., ಪರಿಶಿಷ್ಟ ಪಂಗಡ ಮೀಸಲು ಸ್ಥಾನಕ್ಕೆ ಮಂಗಳೂರು ಸಹಕಾರಿ ಗೃಹ ನಿರ್ಮಾಣ ಸಹಕಾರ ಸಂಘದ ನೌಕರ ಮೋಹನ್ ಎಸ್., ಹಿಂದುಳಿದ ವರ್ಗ ಪ್ರವರ್ಗ ’ಎ’ ಮೀಸಲು ಸ್ಥಾನಕ್ಕೆ ಶ್ರೀ ಗೋಕರ್ಣನಾಥ ಕೋಆಪರೇಟಿವ್ ಬ್ಯಾಂಕಿನ ವ್ಯವಸ್ಥಾಪಕಿ ಗೀತಾಕ್ಷಿ ಹಾಗೂ ಹಿಂದುಳಿದ ವರ್ಗ ಪ್ರವರ್ಗ ’ಬಿ’ ಮೀಸಲು ಸ್ಥಾನಕ್ಕೆ ದಕ್ಷಿಣ ಕನ್ನಡ ಕೃಷಿ ಅಭಿವೃದ್ಧಿ ಸಹಕಾರ ಸಂಘ (ಸ್ಕ್ಯಾಡ್ಸ್ ) ದ ಮುಖ್ಯಕಾರ್ಯನಿರ್ಹಣಾಧಿಕಾರಿ  ಪ್ರೇಮರಾಜ್ ಭಂಡಾರಿ ಅವಿರೋಧವಾಗಿ ಆಯ್ಕೆಗೊಂಡಿದ್ದಾರೆ ಎಂದು ಚುನಾವಣಾ ರಿಟರ್ನಿಂಗ್ ಅಧಿಕಾರಿ ಹಾಗೂ ದಕ್ಷಿಣ ಕನ್ನಡ ಸಹಕಾರ ಸಂಘಗಳ ಉಪನಿಬಂಧಕರ ಕಛೇರಿಯ ಸಹಕಾರ ಅಭಿವೃದ್ಧಿ ಅಧಿಕಾರಿ ಶಿವಲಿಂಗಯ್ಯ ಎಂ. ಅವರು ಜನವರಿ 12ರಂದು ಘೋಷಿಸಿದ್ದಾರೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article