
ಕೋಟೆಕಾರು ದರೋಡೆ: ಆರೋಪಿಗಳು ನ್ಯಾಯಾಲಯಕ್ಕೆ
Thursday, January 23, 2025
ಮಂಗಳೂರು: ಮಂಗಳೂರುಳ ಕೋಟೆಕಾರು ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್ ದರೋಡೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇಬ್ಬರು ಆರೋಪಿಗಳನ್ನು ಇಂದು ತಮಿಳುನಾಡಿನ ತಿರುನೆಲ್ವೆಲಿ ಜಿಲ್ಲೆಯ ಅಂಬಸಮುತ್ರಮ್ ಕೋರ್ಟ್ಗೆ ಹಾಜರುಪಡಿಸಲಾಯಿತು.ಆರೋಪಿಗಳಾದ ಮುರುಗಂಡಿ ಥೇವರ್, ಯೋಸುವಾ ರಾಜೇಂದ್ರನ್ ಅವರನ್ನು ನ್ಯಾಯಮೂರ್ತಿ ಅಚ್ಯುತನ್ ಅವರ ಎದುರು ಹಾಜರುಪಡಿಸಲಾಯಿತು.
ಅಲ್ಲದೇ ಆರೋಪಿಗಳನ್ನು ಹಾಜರುಪಡಿಸಿ ಫಿಯೇಟ್ ಕಾರು, ಎರಡು ಪಿಸ್ತೂಲು, 4 ಲೈವ್ ಬುಲೆಟ್ಸ್, ಮೂರು ಲಕ್ಷ ಹಣ, 2 ಕೆ. ಜಿ ಚಿನ್ನ ವಶಕ್ಕೆ ಪಡೆಯಲಾಗಿದೆ ಎಂದು ಕೋರ್ಟ್‌ಗೆ ಪೊಲೀಸರು ಮಾಹಿತಿ ನೀಡಿದರು. ಕೋರ್ಟ್‌ಗೆ ಹಾಜರುಪಡಿಸಿದ ಬಳಿಕ ಆರೋಪಿಗಳ ಹೆಚ್ಚಿನ ತನಿಖೆಗಾಗಿ ಪೊಲೀಸರು ಮಂಗಳೂರಿಗೆ ಕರೆ ತರಲಾಗುತ್ತಿದೆ.