
ಕೋಟೆಕಾರು ಬ್ಯಾಂಕ್ ದರೋಡೆ ಪ್ರಕರಣ: ಹೆಚ್ಚಿದ ಅನುಮಾನ
ಮಂಗಳೂರು: ಕೆ.ಸಿ ರೋಡ್ ಜಂಕ್ಷನ್‌ನಲ್ಲಿರುವ ಕೋಟೆಕಾರು ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್ ಶಾಖೆಯಿಂದ ಕೋಟ್ಯಂತರ ರೂಪಾಯಿ ಮೌಲ್ಯದ ನಗ ನಗದು ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬ್ಯಾಂಕ್ ಸಿಸಿ ಟಿವಿ ಸರ್ವಿಸ್ ನಡೆಯುತ್ತಿರುವ ದಿನವೇ ಬ್ಯಾಂಕ್ ಲೂಟಿ ಮಾಡಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಈ ಹಿನ್ನೆಲೆಯಲ್ಲಿ ಬ್ಯಾಂಕ್ ಸಿಬ್ಬಂದಿಯ ಮೇಲೆಯೇ ಸ್ಥಳೀಯರು ಅನುಮಾನ ವ್ಯಕ್ತಪಡಿಸುತ್ತಿದ್ದಾರೆ.
ಸಿಸಿ ಕ್ಯಾಮರಾದ ತಂತಿ ತುಂಡರಿಸಿದ ತಕ್ಷಣವೇ ಕೃತ್ಯ ಎಸಲಾಗಿದೆ. ಬ್ಯಾಂಕ್ ಇರುವ ಇಡೀ ರಸ್ತೆಯ ಉದ್ದಕೂ ಒಂದೇ ಒಂದು ಸಿಸಿಟಿವಿ ಇಲ್ಲ. ಈ ಎಲ್ಲವನ್ನು ಗಮನಿಸಿಯೇ ಬ್ಯಾಂಕ್ ದರೋಡೆ ಮಾಡಿದ್ದಾರೆ. ಬ್ಯಾಂಕಿಗೆ ಒಬ್ಬ ಭದ್ರತಾ ಸಿಬಂದಿ ಕೂಡ ಇಲ್ಲ.
ಇದು ಮೊದಲಲ್ಲ..:
ಐದು ವರ್ಷಗಳ ಹಿಂದೆಯೇ ಇದೇ ಬ್ಯಾಂಕ್‌ನಲ್ಲಿ ಗನ್,ತಲ್ವಾರ್, ಚಾಕು ತೋರಿಸಿ ದರೋಡೆ ಪ್ರಕರಣ ನಡೆದಿತ್ತು. ಇದೀಗ ಮತ್ತೊಮ್ಮೆ ಅದೇ ಮಾದರಿಯಲ್ಲಿ ಮಾರಕಾಸ್ತ್ರಗಳನ್ನು ತೋರಿಸಿ ದರೋಡೆ ಮಾಡಲಾಗಿದೆ. ದರೋಡೆಕೋರರ ಪತ್ತೆಗೆ ಪೊಲೀಸರ ಎರಡು ತಂಡಗಳನ್ನು ರಚಿಸಲಾಗಿದೆ.
ಮಂಗಳೂರಿನಲ್ಲಿ ಮುಖ್ಯಮಂತ್ರಿ ಕಾರ್ಯಕ್ರಮದ ಹಿನ್ನಲೆಯಲ್ಲಿ ಮಂಗಳೂರು ನಗರದಲ್ಲಿ ಪೊಲೀಸರು ಹೆಚ್ಚಿನ ಸಂಖ್ಯೆಯಲ್ಲಿ ಭದ್ರತೆಯಲ್ಲಿದ್ದರು. ಬ್ಯಾಂಕ್ ಇರುವ ಜಾಗದಲ್ಲಿ ಮುಸ್ಲಿಂ ಬಂಧುಗಳು ಹೆಚ್ಚಿನ ಸಂಖ್ಯೆಯಲ್ಲಿರುವ ಕಾರಣ ಶುಕ್ರವಾರ ಮಧ್ಯಾಹ್ನ ನಮಾಜ್‌ಗೆ ತೆರಳಿದ್ದರು. ಈ ಜಾಗದಲ್ಲಿ ಯಾರು ಇಲ್ಲ ಎಂಬುದನ್ನು ಖಚಿತ ಪಡಿಸಿಸಿಕೊಂಡೇ ಈ ಕೃತ್ಯವನ್ನು ಎಸಗಲಾಗಿದೆ.