
ಬೋರ್‌ವೆಲ್‌ಗೆ ಬಿದ್ದ ನಾಯಿ ಮರಿಯ ರಕ್ಷಣೆ
Tuesday, January 14, 2025
ಮಂಗಳೂರು: ಬೋರ್‌ವೆಲ್‌ಗೆ ಬಿದ್ದ ನಾಯಿ ಮರಿಯನ್ನು ಪಾಂಡೇಶ್ವರ ಅಗ್ನಿಶಾಮಕ ದಳ ಕಾರ್ಯಾಚರಣೆ ನಡೆಸಿ, ಜೀವಂತವಾಗಿ ಮೇಲಕ್ಕೆತ್ತಿದ ಘಟನೆ ಮಂಗಳೂರಿನ ಕೋಟೆಕಾರ್ನಲ್ಲಿ ಸೋಮವಾರ ನಡೆಯಿತು.
ಕೋಟೆಕಾರಿನಲ್ಲಿ ನಾಯಿ ಮರಿಯೊಂದು ಬೋರ್‌ವೆಲ್‌ಗೆ ಬಿದ್ದಿದೆ ಎಂದು ಪಾಂಡೇಶ್ವರ ಅಗ್ನಿಶಾಮಕ ಠಾಣೆಗೆ ಕರೆ ಬಂದಿತ್ತು. ತಕ್ಷಣ ಠಾಣಾಧಿಕಾರಿ ಹಾಗೂ ಸಿಬ್ಬಂದಿ ಸ್ಪಂದಿಸಿ ಸ್ಥಳಕ್ಕೆ ಆಗಮಿಸಿದ್ದಾರೆ. ನಾಯಿ ಮರಿ ಸುಮಾರು 25 ಅಡಿ ಆಳದ, ಅರ್ಧ ಅಡಿ ವ್ಯಾಸವಿದ್ದ ಬೋರ್‌ವೆಲ್‌ಗೆ ಬಿದ್ದಿತ್ತು. ನಾಯಿಮರಿಯ ಮೇಲೆ ಒಂದು ಚಿಕ್ಕ ಮರದ ತುಂಡು ಕೂಡ ಬಿದ್ದಿತ್ತು.
ಆದ್ದರಿಂದ ಅಗ್ನಿಶಾಮಕದಳ ಸಿಬ್ಬಂದಿ ಮೊದಲು ಮೀನು ಹಿಡಿಯುವ ಕೊಕ್ಕೆಯನ್ನು ಬಳಸಿ ಮರದ ತುಂಡನ್ನು ನಿಧಾನವಾಗಿ ಮೇಲೆ ತೆಗೆದರು. ಆ ಬಳಿಕ ಅದೇ ಕೊಕ್ಕೆಯಿಂದ ನಾಯಿ ಮರಿಯನ್ನು ಸುರಕ್ಷಿತವಾಗಿ ಮೇಲಕ್ಕೆತ್ತಿ ರಕ್ಷಿಸಿದರು. ಅಗ್ನಿಶಾಮಕದಳದ ಕಾರ್ಯವನ್ನು ಸ್ಥಳೀಯರು ಶ್ಲಾಘಿಸಿದ್ದಾರೆ.