
ಕದ್ರಿ ಮಂಜುನಾಥ ದೇವಸ್ಥಾನದ ಉತ್ಸವದ ವೇದಿಕೆಯಲ್ಲಿ ಯೋಗಾಸನ ಪ್ರದರ್ಶನ
Thursday, January 16, 2025
ಮಂಗಳೂರು: ಕದ್ರಿ ಶ್ರೀ ಮಂಜುನಾಥ ದೇವಸ್ಥಾನದ ಆಶ್ರಯ ಮತ್ತು ಪ್ರೋತ್ಸಾಹದಿಂದ ಮಲ್ಲಿಕಾ ಕಲಾವೃಂದ ಶ್ರೀ ಕ್ಷೇತ್ರ ಕದ್ರಿ, ಮಂಗಳೂರು ಇಲ್ಲಿ 75ನೇ ವರ್ಷದ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ದ.ಕ. ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ, ಯೋಗರತ್ನ ಗೋಪಾಲಕೃಷ್ಣ ದೇಲಂಪಾಡಿ ಮತ್ತು ಬಳಗದವರಿಂದ ಜ.13 ರಂದು ಸಂಜೆ 4 ಗಂಟೆಗೆ ಆರೋಗ್ಯ ಮತ್ತು ಶಾಂತಿಯುತ ಜೀವನಕ್ಕಾಗಿ ಯೋಗ ಕುರಿತಾದ ಯೋಗಾಸನ ಪ್ರದರ್ಶನ ಕಾರ್ಯಕ್ರಮವು ಕದ್ರಿ ಮಂಜುನಾಥ ದೇವಸ್ಥಾನದ ಉತ್ಸವದ ನೂತನ ವೇದಿಕೆಯಲ್ಲಿ ಜರುಗಿತು.
ದೇಲಂಪಾಡಿ ಶಿಷ್ಯರಾದ ನೀನಾ ಪೈ, ಸುಮಾ, ರೋಶನಿ ಶೆಣೈ, ಕಾರ್ತಿಕ್ ಹಾಗೂ ಹಾಗೂ ಶ್ರೀಲಕ್ಷ್ಮೀ ಇವರು ಯೋಗ ಪ್ರದರ್ಶನ ನೀಡಿದರು. ಯೋಗ ಪ್ರದರ್ಶನ ನೀಡಿದ ದೇಲಂಪಾಡಿ ಬಳಗದವರನ್ನು ಮಲ್ಲಿಕಾ ಕಲಾವೃಂದದ ವತಿಯಿಂದ ಗೌರವಿಸಿ ಸನ್ಮಾಸಿದರು.