
ಕಾರ್ಮಿಕ ಮುಂದಾಳು ಕೆ. ಗಂಗಯ್ಯ ಅಮೀನ್ ನೆನಪಿನಲ್ಲಿ ವಾಮಂಜೂರು ರಕ್ತದಾನ ಶಿಬಿರ
Sunday, January 26, 2025
ಮಂಗಳೂರು: ಭಾರತ ಪ್ರಜಾಸತ್ತಾತ್ಮಕ ಯೋಜನ ಫೆಡರೇಶನ್ ಡಿವೈಎಫ್‌ಐ ಆಯೋಜನೆಯಲ್ಲಿ ಜೈ ಶಂಕರ ಮಿತ್ರ ಮಂಡಳಿ ತಿರುವೈಲು ವಾಮಂಜೂರು ಮತ್ತು ಆಲ್-ಕಸ್ವಾ ಫೌಂಡೇಶನ್ ಮಂಗಳೂರು ಇದರ ಸಹಯೋಗದೊಂದಿಗೆ ಕಾರ್ಮಿಕ ಮುಂದಾಳು ಕೆ. ಗಂಗಯ್ಯ ಅಮೀನ್ ರವರ ನೆನಪಿನಲ್ಲಿ ರಕ್ತದಾನ ಶಿಬಿರವು ಇಂದು ಜೈ ಶಂಕರ್ ಮಿತ್ರ ಮಂಡಳಿ ತಿರುವೈಲು ವಾಮಂಜೂರು ಇಲ್ಲಿ ನಡೆಯಿತು.
ಈ ಸಭೆಯನ್ನುದ್ದೇಶಿಸಿ ಹಿರಿಯ ಕಾರ್ಮಿಕ ಮುಖಂಡ ಸದಾಶಿವದಾಸ್ ಮಾತನಾಡಿ, ಕೃತಕವಾಗಿ ತಯಾರಿಸಲಾಗದ ವಸ್ತು ಒಂದಿದ್ದರೆ ಅದು ರಕ್ತ ಇಂತಹ ರಕ್ತದ ಅವಶ್ಯಕತೆ ಇರುವವರಿಗೆ ದಾನಿಗಳು ಮುಕ್ತ ಮನಸ್ಸಿನಿಂದ ರಕ್ತದಾನ ಮಾಡಬೇಕು. ಇದು ಅನೇಕರ ಜೀವ ಉಳಿಸಬಲ್ಲದು. ರಕ್ತದಾನದ ಕುರಿತು ಇರುವಂತಹ ಭಯ ಜನತೆಯ ನಡುವೆ ತೊಲಗಬೇಕು ಎಂದು ಹೇಳಿದರು.
ಡಿವೈಎಫ್‌ಐನ ಜಿಲ್ಲಾ ಕಾರ್ಯದರ್ಶಿ ಸಂತೋಷ್ ಬಜಾಲ್ ಮಾತನಾಡಿ, ಇಂದು ಸಮಾಜದಲ್ಲಿ ಆರೋಗ್ಯ ಎನ್ನುವುದು ದುಬಾರಿ ವಾಸ್ತುವಾಗಿದೆ. ಜನರ ಆರೋಗ್ಯದ ಹೆಸರಿನ ಲಾಭಿಗಳು ಹೆಚ್ಚಾಗಿದ್ದು ದಕ್ಷಿಣ ಕನ್ನಡ ಜಿಲ್ಲೆಯಲ್ಲಂತೂ ಆರೋಗ್ಯದ ವ್ಯಾಪಾರಿಕರಣವು ಎಗ್ಗಿಲ್ಲದೆ ಸಾಗಿದೆ. ಆರೋಗ್ಯವನ್ನು ಉಳಿಸಿಕೊಳ್ಳುವಲ್ಲಿ ದುಬಾರಿ ಶುಲ್ಕವನ್ನು ಬರಿಸಲಾಗದೆ ಅನೇಕರು ಪರಿತಪಿಸುವಂತಹ ಸ್ಥಿತಿ ಇಂದು ನಮ್ಮ ಸಮಾಜದಲ್ಲಿ ಇದ್ದರೂ ಕೂಡ ಯಾವುದೇ ಸರ್ಕಾರಗಳು ಈ ಕುರಿತು ಗಮನಹರಿಸುತ್ತಿಲ್ಲ. ಬಡ ಮಧ್ಯಮ ವರ್ಗದ ಜನರಿಗಂತೂ ಮೆಡಿಕಲ್ ಶಿಕ್ಷಣವನ್ನು ಕೂಡ ಪಡೆಯಲಾಗದ ಸ್ಥಿತಿ ಇಂದು ನಮ್ಮ ನಡುವೆ ಇರುವ ಸಂದರ್ಭದಲ್ಲಿ ಆರೋಗ್ಯಯುತ ಜೀವನದ ಕುರಿತಾಗಿ ಸಂವಿಧಾನ ನೀಡಿದ ಹಕ್ಕು ಬರೀ ಕನಸಾಗಿಯೇ ಉಳಿದಿದೆ ಎಂದರು.
ಭಾರತ ಪ್ರಜಾಸತ್ತಾತ್ಮಕ ಯುವಜನ ಫೆಡರೇಷನ್‌ನ ವಾಮಂಜೂರು ಪ್ರದೇಶ ಸಮಿತಿಯ ಅಧ್ಯಕ್ಷ ದಿನೇಶ್ ಬೊಂಡಂತಿಲ ಸಭಾಧ್ಯಕ್ಷತೆ ವಹಿಸಿದ್ದರು.
ಶಿಬಿರದಲ್ಲಿ ಜೈ ಶಂಕರ್ ಮಿತ್ರ ಮಾಡಲಿಯ ಗೌರವಾಧ್ಯಕ್ಷ ಲಿಂಗಪ್ಪ ಸಾಲ್ಯಾನ್, ಮಂಗಳೂರು ಮಹಾನಗರ ಪಾಲಿಕೆಯ ಸದಸ್ಯರಾದ ಹೇಮಲತಾ ರಘು ಸಾಲ್ಯಾನ್, ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿಯ ಮುಖಂಡರಾದ ಕೆ. ಕರಿಯ, ಅಲ್-ಕಸ್ವಾ ಫೌಂಡೇಶನ್‌ನ ಅಧ್ಯಕ್ಷ ನಝೀರ್ ಕುದ್ರೋಳಿ, ಮಹಾಕಾಳಿ ಸೇವಾ ಸಮಿತಿ ಸಂತೋಷ್ ನಗರ ಇದರ ಸಂಚಾಲಕರಾದ ಸಜಿತ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.