ಅಪರೂಪದ ವಿದ್ಯಮಾನ ಗ್ರಹಗಳ ದರ್ಶನ

ಅಪರೂಪದ ವಿದ್ಯಮಾನ ಗ್ರಹಗಳ ದರ್ಶನ


ಮಂಗಳೂರು: ಪಿಲಿಕುಳ ಪ್ರಾದೇಶಿಕ ವಿಜ್ಞಾನ ಕೇಂದ್ರದ ಆವರಣ ಜ.25 ರಂದು ಅಪರೂಪದ ವಿದ್ಯಮಾನ ‘ಗ್ರಹಗಳ ದರ್ಶನ’ಕ್ಕೆಂದು ಬಂದ ಬಹುಸಂಖ್ಯೆಯ ಕುತೂಹಲಿಗರ ಭೇಟಿಗೆ ಸಾಕ್ಷಿಯಾಯಿತು.

‘ಪ್ರಥಮ ಬಾರಿಗೆ ಆಕಾಶದ ಅದ್ಭುತ ಆನಂದ ಅನುಭವಿಸಿದೆ’, ‘ಗ್ರಹಗಳನ್ನು ಹತ್ತಿರದಿಂದ ಕಂಡಂತೆನಿಸಿತು’ ಎನ್ನುವ ಉದ್ಗಾರಗಳ ನಡುವೆ ವೀಕ್ಷಕರು ನಕ್ಷತ್ರಗಳ, ಗ್ರಹಗಳ ಈಗಿನ ಈ ವಿದ್ಯಮಾನದ ವಿಶೇಷತೆಯನ್ನು ಚರ್ಚಿಸುತ್ತಾ ವೀಕ್ಷಿಸಿದರು. ಅವಕಾಶಕ್ಕಾಗಿ ಕೇಂದ್ರವನ್ನು ಅಭಿನಂದಿಸಿದರು.

 ಮುಖ್ಯವಾಗಿ ಯುರೇನಸ್ ಮತ್ತು ನೆಪ್ಚೂನ್‌ಗಳ ಬಗ್ಗೆ ಮತ್ತು ಹೇಗೆ ಈ ಗ್ರಹಗಳು ಒಟ್ಟಾಗಿ ಕಾಣಸಿಗುತ್ತವೆ ಎಂಬ ವಿಷಯಗಳ ಬಗ್ಗೆ ಬಂದ ಪ್ರಶ್ನೆಗಳಿಗೆ ಉತ್ತರಿಸಲಾಯಿತು. ಇಂತಹ ವೀಕ್ಷಣಾ ಕಾರ್ಯಕ್ರಮಗಳನ್ನು ಏರ್ಪಡಿಸುವುದರಿಂದ ವಿದ್ಯಾರ್ಥಿಗಳಿಗೆ ತುಂಬ ಅನುಕೂಲ, ದೂರದರ್ಶಕಗಳ ಬಗ್ಗೆ ತಿಳಿಯುವುದು ಎಂದು ವಿದ್ಯಾರ್ಥಿಗಳ ಅನಿಸಿಕೆ. ಒಟ್ಟಿನಲ್ಲಿ ಪೂರ್ತಿ ಕಾರ್ಯಕ್ರಮ ಆಸಕ್ತರಿಗೆ ಹೊಸ ಅನುಭವ ನೀಡಿತು.

ಕಾರ್ಯಕ್ರಮ ಆಯೋಜಿಸುವಲ್ಲಿ ಕೇಂದ್ರದ ವೈಜ್ಞಾನಿಕಾಧಿಕಾರಿ ವಿಘ್ನೇಶ್ ಭಟ್, ಶೈಕ್ಷಣಿಕ ಸಹಾಯಕಿ ರಶ್ಮಿ, ಮೆಂಟರ‍್ಗಳಾದ ಹೃತಿಕ್, ಆದರ್ಶ್, ಅಂಬಿಕಾ, ಸಹನಾ, ತಾಂತ್ರಿಕ ಸಿಬ್ಬಂದಿಗಳಾದ ಯತೀಶ್, ತುಕಾರಾಮ್, ಮಂಜುನಾಥ್, ಶರತ್, ಶಿವರಾಮ್ ಸಹಕಾರವನ್ನು ನೀಡಿದರು. ಭದ್ರತಾ ಅಧಿಕಾರಿ ದಯಾಸಾಗರ್ ತಮ್ಮ ತಂಡದೊಡನೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಸಾರ್ವಜನಿಕರಿಗೆ ಬೇಕಾದ ಅನುಕೂಲತೆಯನ್ನು ಒದಗಿಸಿದರು ಎಂದು ಪಿಲಿಕುಳ ಪ್ರಾದೇಶಿಕ ವಿಜ್ಞಾನ ಕೇಂದ್ರದ ನಿರ್ದೇಶಕರ ಪ್ರಕಟಣೆ ತಿಳಿಸಿದೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article