ಶಕ್ತಿನಗರ ನಾಲ್ಯಪದವಿನ ಪಿಎಂಶ್ರೀ ಶಾಲೆಗೆ ಅಭಿನಂದನೆಗಳು:  ಶಾಸಕ ಕಾಮತ್

ಶಕ್ತಿನಗರ ನಾಲ್ಯಪದವಿನ ಪಿಎಂಶ್ರೀ ಶಾಲೆಗೆ ಅಭಿನಂದನೆಗಳು: ಶಾಸಕ ಕಾಮತ್


ಮಂಗಳೂರು: ದೆಹಲಿಯಲ್ಲಿ ನಡೆದ ರಾಷ್ಟ್ರೀಯ ಮಟ್ಟದ National conference on school leadership 2025: examplars of change and innovation ಗೆ ಕರ್ನಾಟಕ ರಾಜ್ಯದಿಂದ ಅತ್ಯುತ್ತಮ ಶಾಲೆಯಾಗಿ ಶಕ್ತಿನಗರದ ನಾಲ್ಯಪದವಿನ ಪಿಎಂ ಶ್ರೀ ಕುವೆಂಪು ಶತಮಾನದ ಉನ್ನತೀಕರಿಸಿದ ಸರಕಾರಿ ಮಾ.ಹಿ.ಪ್ರಾ. ಶಾಲೆಯು ನಾಮನಿರ್ದೇಶನಗೊಂಡಿದ್ದು ಶಾಸಕ ವೇದವ್ಯಾಸ ಕಾಮತ್ ಅವರು ಶಾಲೆಗೆ ಅಭಿನಂದನೆಗಳನ್ನು ಸಲ್ಲಿಸಿದರು.

ಪ್ರಧಾನಮಂತ್ರಿ ನರೇಂದ್ರ ಮೋದಿಜಿ ಅವರ ಕನಸಿನ ಯೋಜನೆಯಾದ ಪಿಎಂ ಶ್ರೀ ಯೋಜನೆಯನ್ನು ಈ ಹಿಂದೆ ಇದೇ ಶಾಲೆಯಲ್ಲಿ ನಾನೇ ಉದ್ಘಾಟಿಸಿದ್ದೆ. ಕೇಂದ್ರ ಸರ್ಕಾರದ ಅನುದಾನದಡಿಯಲ್ಲಿ ಜಾರಿಗೊಳ್ಳಲಿರುವ ಈ ಯೋಜನೆಯು ಶಾಲೆಗಳಲ್ಲಿ ಪ್ರಯೋಗಾಲಯ, ಸ್ಮಾರ್ಟ್ ಕ್ಲಾಸ್‌ ರೂಂ, ಗ್ರಂಥಾಲಯಗಳು, ಕ್ರೀಡಾ ಸಲಕರಣೆಗಳು, ಕಲಾ ಕೊಠಡಿ ಸಹಿತ ಅತ್ಯಾಧುನಿಕ ಶಿಕ್ಷಣವನ್ನು ಒದಗಿಸಿ ಶಾಲೆಗಳನ್ನು ಅಭಿವೃದ್ಧಿಪಡಿಸುವ ಮತ್ತು ಮೇಲ್ದರ್ಜೆಗೇರಿಸುವ ಗುರಿ ಹೊಂದಿದೆ. ಸರಕಾರಿ ಶಾಲೆಗಳು ಹೆಚ್ಚು ಹೆಚ್ಚು ಅಭಿವೃದ್ಧಿಯಾಗಬೇಕು, ಇಲ್ಲಿನ ಮಕ್ಕಳು ರಾಷ್ಟ್ರಮಟ್ಟದಲ್ಲಿ ಬೆಳೆಯಬೇಕು ಎಂಬುದೇ ಪ್ರಧಾನಿಗಳ ಸಹಿತ ನಮ್ಮೆಲ್ಲರ ಆಶಯವಾಗಿದೆ ಎಂದರು.

ಕೇಂದ್ರ ಸರ್ಕಾರದ ಆಶಯಕ್ಕೆ ತಕ್ಕಂತೆ ರಾಷ್ಟ್ರ ಮಟ್ಟದಲ್ಲಿ ಸಾಧನೆ ತೋರಿರುವ ಕಾರಣಕ್ಕೆ ಶಾಲೆಯ ಮುಖ್ಯೋಪಾಧ್ಯಾಯರು, ಶಿಕ್ಷಕರು, ವಿದ್ಯಾರ್ಥಿಗಳು ಹಾಗೂ ಸಮಸ್ತ ಆಡಳಿತ ಮಂಡಳಿ ಅಭಿನಂದನೆಗೆ ಅರ್ಹರು ಎಂದು ಶಾಸಕರು ಹೇಳಿದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article