
ಜ.13 ರಂದು ಮಂಜೇಶ್ವರ ಹೊಸಬೆಟ್ಟು ಅಳಿವೆ ಬಾಗಿಲಿನಲ್ಲಿ ಉದ್ಯಾವರ ಶ್ರೀ ದೈವಗಳ ಭೇಟಿ ಮತ್ತು ಶ್ರೀ ಬೊಬ್ಬರ್ಯ ದೈವದ ಜಾತ್ರೆ ಹಾಗೂ ಶ್ರೀ ಭಗವತೀ ಮಾತೆಯ ಹೂಮುಡಿ ಮಹೋತ್ಸವ
Thursday, January 9, 2025
ಮಂಜೇಶ್ವರ: ಮಂಜೇಶ್ವರ ಹೊಸಬೆಟ್ಟು ಸಮುದ್ರ ತೀರದ ಅಳಿವೆ ಬಾಗಿಲಿನಲ್ಲಿ ವರ್ಷಂಪ್ರತಿ ಜರಗುವ ಉದ್ಯಾವರ ಶ್ರೀ ದೈವಗಳ ಭೇಟಿ ಮತ್ತು ಶ್ರೀ ಬೊಬ್ಬರ್ಯ ದೈವದ ಜಾತ್ರೆ ಹಾಗೂ ಶ್ರೀ ಭಗವತೀ ಮಾತೆಯ ಹೂಮುಡಿ ಮಹೋತ್ಸವ ಜ.13 ರಂದು ಜರಗಲಿದೆ.
ಅಂದು ಸಂಜೆ 4 ಗಂಟೆಗೆ ಉದ್ಯಾವರ ಮಾಡ ಕ್ಷೇತ್ರದಿಂದ ಭಂಡಾರ ಹೊರಟು ಸಂಜೆ 6 ಗಂಟೆಗೆ ಹೊಸಬೆಟ್ಟು ಅಳಿವೆ ಬಾಗಿಲು ತಲುಪಲಿದೆ. ಬಳಿಕ ಉತ್ಸವ ಪ್ರಾರಂಭಗೊಳ್ಳಲಿದೆ ಎಂದು ಉದ್ಯಾವರ ಮಾಡ ಶ್ರೀ ಅರಸು ಮಂಜೀಷ್ಣಾರ್ ದೈವಗಳ ಕ್ಷೇತ್ರದ ಆಡಳಿತ ಸಮಿತಿ ಅಧ್ಯಕ್ಷ ಕಿರಣ್ ಶೆಟ್ಟಿ ಮಾಡ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಜ.12 ರಂದು ಬೆಳಗ್ಗೆ 8.30ಕ್ಕೆ ನವೀಕರಿಸಿದ ಕಟ್ಟೆಯಲ್ಲಿ ಬೊಬ್ಬರ್ಯ ದೈವದ ಪುನಃ ಪ್ರತಿಷ್ಠೆ ಕಾರ್ಯಕ್ರಮವು ಕೂಡಾ ನಡೆಯಲಿದೆ ಎಂದು ಬ್ರಹ್ಮಶ್ರೀ ಬಡಾಜೆ ಬೂಡು ಗೋಪಾಲಕೃಷ್ಣ ತಂತ್ರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.