ಜೂಜಾಟದ ಸ್ಥಳಕ್ಕೆ ದಾಳಿ: 7 ಮಂದಿ ಬಂಧನ

ಜೂಜಾಟದ ಸ್ಥಳಕ್ಕೆ ದಾಳಿ: 7 ಮಂದಿ ಬಂಧನ

ಮೂಡುಬಿದಿರೆ: ಮೂಡುಬಿದಿರೆ ಪೊಲೀಸ್ ಠಾಣೆ ವ್ಯಾಪ್ತಿಯ ಮಂಜನಕಟ್ಟೆಯ ಆರಂತಬೆಟ್ಟು ಎಂಬಲ್ಲಿನ ಶೆಡ್‌ವೊಂದರಲ್ಲಿ ಅಕ್ರಮ ಜೂಜಾಟವಾದ ಅಂದರ್-ಬಾಹರ್ ಆಟವಾಡುತ್ತಿದ್ದ ಸ್ಥಳಕ್ಕೆ ಗುರುವಾರ ಮಂಗಳೂರು ಸಿಸಿಬಿ ಪೊಲೀಸರು ದಾಳಿ ನಡೆಸಿ 7 ಮಂದಿಯನ್ನು ಬಂಧಿಸಿದ್ದಾರೆ.

ಮೂಡುಬಿದಿರೆ ಸಂಪಿಗೆ ಅಂಚೆ ನಿವಾಸಿ ಶರೀಫ್ (52), ಕಾರ್ಕಳ ಬಜಗೋಳಿಯ ಸತೀಶ್ ಶೆಟ್ಟಿ (46), ಕಾಂತಾವರ ಗ್ರಾಮದ ಜೀವಂಧರ್ (48), ಸಾಣೂರಿನ ಸುನಿಲ್ ಕುಮಾರ್ (43), ಬೆಳುವಾಯಿಯ ಜಗದೀಶ್ ಆಚಾರ್ಯ (43), ತೆಳ್ಳಾರಿನ ಮನೋಹರ ಸಾಲ್ಯಾನ್ (56), ತೋಡಾರಿನ ಜಯರಾಮ ಶೆಟ್ಟಿ (53) ಬಂಧಿತರು.

ಜೂಜಾಟಕ್ಕೆ ಉಪಯೋಗಿಸಿದ ನಗದು ಹಣ 56,170 ರೂ., 8 ಮೊಬೈಲ್ ಫೋನ್‌ಗಳು, 1 ಕಾರು, 6 ಬೈಕ್‌ಗಳು, 1 ಆಟೋರಿಕ್ಷಾ, ಇಸ್ಪೀಟ್ ಕಾರ್ಡ್‌ಗಳು, ಆಟಕ್ಕೆ ಉಪಯೋಗಿಸಿದ ಟೇಬಲ್, ಕುರ್ಚಿಗಳು ಹಾಗೂ ಇತರ ಸೊತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ವಶಪಡಿಸಿಕೊಂಡ ಸೊತ್ತಿನ ಒಟ್ಟು ಮೌಲ್ಯ 9,23,000 ರೂ. ಆಗಿದೆ. ಮೂಡುಬಿದಿರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ಸಿಸಿಬಿ ಘಟಕದ ಎಸಿಪಿ ಮನೋಜ್ ಕುಮಾರ್ ನಾಯ್ಕ್, ಪೊಲೀಸ್ ನಿರೀಕ್ಷಕ ಶ್ಯಾಮ್ ಸುಂದರ್ ಎಚ್.ಎಂ, ಪಿಎಸ್ಐ ಸುದೀಪ್ ಎಂ.ವಿ., ಎಎಸ್ಐ ಸುಜನ್ ಶೆಟ್ಟಿ ಹಾಗೂ ಸಿಸಿಬಿ ಸಿಬ್ಬಂದಿ ಪಾಲ್ಗೊಂಡಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article