ಮುಲ್ಕಿ ವಿಜಯ ರೈತ ಸೇವಾ ಸಹಕಾರಿ ಸಂಘ: ನೂತನ ಅಧ್ಯಕ್ಷರಾಗಿ ರಂಗನಾಥ ಶೆಟ್ಟಿ ಆಯ್ಕೆ

ಮುಲ್ಕಿ ವಿಜಯ ರೈತ ಸೇವಾ ಸಹಕಾರಿ ಸಂಘ: ನೂತನ ಅಧ್ಯಕ್ಷರಾಗಿ ರಂಗನಾಥ ಶೆಟ್ಟಿ ಆಯ್ಕೆ


ಮೂಡುಬಿದಿರೆ: ಮುಲ್ಕಿಯ ಪ್ರತಿಷ್ಠಿತ ವಿಜಯ ರೈತ ಸೇವಾ ಸಹಕಾರಿ ಸಂಘದ 2025-29ರ ಸಾಲಿನ ನೂತನ ಅಧ್ಯಕ್ಷರಾಗಿ ರಂಗನಾಥ ಶೆಟ್ಟಿ ಆಯ್ಕೆಯಾಗಿದ್ದಾರೆ.

ಆಡಳಿತ ಮಂಡಳಿಯ ಉಪಾಧ್ಯಕ್ಷರಾಗಿ ಪ್ರಸಾದ್ ಶೆಟ್ಟಿ ಹಾಗೂ ನಿರ್ದೇಶಕರುಗಳಾಗಿ ಗಂಗಾಧರ ವಿ ಶೆಟ್ಟಿ, ನರಸಿಂಹ ಪೂಜಾರಿ, ದೇವಪ್ರಸಾದ್ ಕೆಂಪುಗುಡ್ಡೆ, ಅಶೋಕ್ ಕುಮಾರ್ ಚಿತ್ರಾಪು, ನಂಜುಂಡ ಆರ್ ಕೆ, ರಾಮ ನಾಯ್ಕ್, ರಾಜೇಶ್ ಶೆಟ್ಟಿ ಉಳೆಪಾಡಿ,

ಪದ್ಮಿನಿ ವಿಜಯ ಶೆಟ್ಟಿ ಶಿಮಂತೂರು, ಮಮತಾ ಡಿ ಪೂಂಜ, ಪ್ರಭಾಕರ ದೇವಾಡಿಗ, ಸಚಿನ್ ಹೆಗ್ಡೆ(ಶಾಖಾಧಿಕಾರಿ , ಬ್ಯಾಂಕ್ ಆಫ್ ಬರೋಡ ಮುಲ್ಕಿ) ಆಯ್ಕೆಯಾಗಿದ್ದಾರೆ. ಆಡಳಿತ ನಿರ್ದೇಶಕರಾಗಿ  ಶಿವರಾಮ ಶೆಟ್ಟಿ, ಪ್ರಬಂಧಕರಾಗಿ ಚಂದ್ರಕಾಂತ ಶೆಟ್ಟಿ ಉಪಸ್ಥಿತರಿದ್ದರು.


ಪದಗ್ರಹಣ: ಸಮಾರಂಭದಲ್ಲಿ ಶಾಸಕ ಉಮಾನಾಥ ಕೋಟ್ಯಾನ್ ಅವರು ಮುಲ್ಕಿ ಸುಂದರ್ ರಾಮ್ ಶೆಟ್ಟಿ ಪ್ರತಿಮೆಗೆ ಮಾಲಾರ್ಪಣೆ ಸಲ್ಲಿಸಿ ಮಾತನಾಡಿ  ನೂತನ ಅಧ್ಯಕ್ಷರ ಆಡಳಿತದಲ್ಲಿ ಸಮಾಜದ ಕಟ್ಟ ಕಡೆಯ ವ್ಯಕ್ತಿಗೆ ಸರಕಾರದ ಸವಲತ್ತುಗಳನ್ನು ದೊರಕಿಸಿಕೊಡಲು ಪ್ರಯತ್ನಿಸಿ ಯಶಸ್ವಿಯಾಗಿ ಎಂದು ಶುಭ ಹಾರೈಸಿದರು. 

ನೂತನ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿ ರಂಗನಾಥ ಶೆಟ್ಟಿ ಮಾತನಾಡಿ ಸಂಘವು ಕಳೆದ ತಮ್ಮ ಆಡಳಿತದ ಅವಧಿಯಲ್ಲಿ ಪ್ರಗತಿ ಸಾಧಿಸಿದ್ದು ಮುಂದಿನ ದಿನಗಳಲ್ಲಿ ನೂತನ ಸ್ವಂತ ಕಟ್ಟಡ ನಿರ್ಮಾಣಕ್ಕೆ ಆದ್ಯತೆ ನೀಡುವುದಾಗಿ ತಿಳಿಸಿದರು.

ಈ ಸಂದರ್ಭ, ಮುಲ್ಕಿ ನಗರ ಪಂಚಾಯತ್ ಅಧ್ಯಕ್ಷ ಸತೀಶ್ ಅಂಚನ್, ಸದಸ್ಯರಾದ ಹರ್ಷರಾಜ ಶೆಟ್ಟಿ, ಸುಭಾಷ್ ಶೆಟ್ಟಿ, ವಿಶ್ವನಾಥ್ ಬಪ್ಪನಾಡು,ಮುಲ್ಕಿ ಬಿಲ್ಲವ ಸಂಘದ  ಮಾಜಿ ಅಧ್ಯಕ್ಷ ರಮೇಶ್ ಅಮೀನ್ ಕೊಕ್ಕರಕಲ್, ಬಿಜೆಪಿ ಮಂಡಲಾಧ್ಯಕ್ಷ ದಿನೇಶ್ ಪುತ್ರನ್,ಪುನರೂರು ಪ್ರತಿಷ್ಠಾನದ ಅಧ್ಯಕ್ಷ ದೇವ ಪ್ರಸಾದ್ ಪುನರೂರು, ಅತಿಕಾರಿಬೆಟ್ಟು ಗ್ರಾಪಂ ಉಪಾಧ್ಯಕ್ಷ ಮನೋಹರ ಕೋಟ್ಯಾನ್, ದಿನೇಶ್ ಶೆಟ್ಟಿ ಹೊಸಲಕ್ಕೆ, ಉದಯ ಅಮೀನ್ ಮಟ್ಟು, ಕಿಶೋರ್ ಶೆಟ್ಟಿ ಬಪ್ಪನಾಡು, ಉದಯಕುಮಾರ್ ಶೆಟ್ಟಿ ಕಾರ್ನಾಡ್ ಬೈಪಾಸ್, ವಕೀಲ ರವೀಶ್ ಕಾಮತ್, ರಾಜೇಶ್ ಅಮೀನ್ ಕಿಲ್ಪಾಡಿ, ಮಂಜುನಾಥ ಆರ್ ಕೆ, ಎಸ್ ರಾವ್ ನಗರ, ಮುಲ್ಕಿ ರೋಟರಿ ಕ್ಲಬ್ ಮಾಜಿ ಅಧ್ಯಕ್ಷ ಶಿವರಾಮ್ ಜಿ ಅಮೀನ್, ಮಂಜುನಾಥ ಶೆಟ್ಟಿ ಕಡವಿನಬಾಗಿಲು, ಸಾಧು ಅಂಚನ್ ಮಟ್ಟು, ವಿಜಯ ಶೆಟ್ಟಿ ಹೆಜ್ಮಾಡಿ ಮತ್ತಿತರರು ಉಪಸ್ಥಿತರಿದ್ದು ಶುಭ ಹಾರೈಸಿದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article