
ಸ್ವಾಮಿ ವಿವೇಕಾನಂದ ಜಯಂತಿ: ಯುವಮೊಚಾ೯ ವತಿಯಿಂದ ಮುಲ್ಕಿಯಲ್ಲಿ ಯುವನಡಿಗೆ
Sunday, January 12, 2025
ಮೂಡುಬಿದಿರೆ: ಸ್ವಾಮಿ ವಿವೇಕಾನಂದ ಜಯಂತಿ ಪ್ರಯುಕ್ತ ಜಿಲ್ಲಾ ಬಿಜೆಪಿ ಯುವ ಮೊಚಾ೯ ಮತ್ತು ಮುಲ್ಕಿ ಮೂಡುಬಿದಿರೆ ಯುವಮೊಚಾ೯ದ ಸಹಯೋಗದಲ್ಲಿ "ವಿವೇಕ ನಡಿಗೆಯು" ಮುಲ್ಕಿಯ ಕೆ.ಎಸ್. ರಾವ್ ನಗರದ ಲಿಂಗಪ್ಪಯ್ಯ ಕಾಡು ಇಲ್ಲಿ ಭಾನುವಾರ ನಡೆಯಿತು.
ಕಾರ್ಯಕ್ರಮದಲ್ಲಿ ಮುಲ್ಕಿ ಮೂಡುಬಿದಿರೆ ಶಾಸಕ ಉಮಾನಾಥ್ ಕೋಟ್ಯಾನ್, ಯುವಮೊಚಾ೯ ಅಧ್ಯಕ್ಷ ಕುಮಾರ್ ಪ್ರಸಾದ್, ಜಿಲ್ಲಾ ಯುವಮೊಚಿ೯ ಉಪಾಧ್ಯಕ್ಷ ಅಭಿಲಾಶ್ ಶೆಟ್ಟಿ,ಮುಲ್ಕಿ ನಗರ ಅಧ್ಯಕ್ಷ ಶೈಲೇಶ್ ಮುಲ್ಕಿ, ಕಾರ್ಯದರ್ಶಿ ಪ್ರಶಾಂತ್, ಜಿಲ್ಲಾ ಯುವಮೊರ್ಚ ಕಾರ್ಯದರ್ಶಿ ನವೀನ್ ರಾಜ್, ಮಂಡಲ ಉಪಾಧ್ಯಕ್ಷ ಉಮೇಶ್ ಮುಲ್ಕಿ, ಪ್ರಮುಖರಾದಂತಹ ಈರಣ್ಣ,ಅಶೋಕ್, ಹರಿಶ್ಚಂದ್ರ ಕೋಟ್ಯಾನ್, ಸುನಿಲ್ ಹಾಗೂ ಪಕ್ಷದ ಕಾರ್ಯಕರ್ತರು ಹಾಜರಿದ್ದರು.