ಅಕ್ರಮ ಗೋವುಗಳ ಸಾಗಾಟ: ಇಬ್ಬರನ್ನು ಪೊಲೀಸರಿಗೆ ಒಪ್ಪಿಸಿದ ಹಿಂ.ಸಂ. ಕಾಯ೯ಕತ೯ರು

ಅಕ್ರಮ ಗೋವುಗಳ ಸಾಗಾಟ: ಇಬ್ಬರನ್ನು ಪೊಲೀಸರಿಗೆ ಒಪ್ಪಿಸಿದ ಹಿಂ.ಸಂ. ಕಾಯ೯ಕತ೯ರು

ಬೆಳಿಗ್ಗೆ ಡೈರಿಗೆ ಹಾಲು ತಂದ ಗೋ ಸಾಗಾಟಗಾರರು


ಮೂಡುಬಿದಿರೆ: ಕಸಾಯಿಖಾನೆಗೆ ಅಕ್ರಮವಾಗಿ ದನಗಳನ್ನು ಸಾಗಾಟ ಮಾಡುತ್ತಿರುವ ಬಗ್ಗೆ ಖಚಿತ ಪಡೆದ ಹಿಂದೂ ಸಂಘಟನೆಗಳ ಕಾರ್ಯಕರ್ತರು ಕಾಯ೯ಚರಣಿ ನಡೆಸಿ ವಾಹನ ಸಹಿತ ಗೋ ಸಾಗಾಟಗಾರರನ್ನು ಪೊಲೀಸರಿಗೆ ಒಪ್ಪಿಸಿದ ನಿನ್ನೆ ರಾತ್ರಿ ನಡೆದಿದೆ.

ತೆಂಕಮಿಜಾರು ಗ್ರಾ.ಪಂ.ವ್ಯಾಪ್ತಿಯ ನಿವಾಸಿಗಳಾದ ಪ್ರವೀಣ್ ಡಿಸೋಜ ಮತ್ತು ಭಾಸ್ಕರ್ ಶೆಟ್ಟಿ ಎಂಬವರು ತಾಲೂಕಿನ ತೋಡಾರು ಶಾಂತಿಗಿರಿಯಲ್ಲಿ ಅಕ್ರಮವಾಗಿ ಪಿಕಪ್ ವಾಹನದಲ್ಲಿ ಎರಡು ಗೋವುಗಳನ್ನು ತೋಡಾರಿನ ಅದ್ದು ಎಂಬವರ ಕಸಾಯಿಖಾನೆಗೆ ಸಾಗಿಸುತ್ತಿದ್ದರು. ಈ ಸಂದಭ೯ ಬಜರಂಗದಳ, ಹಿಂ.ಜಾ.ವೇ. ಕಾರ್ಯಕರ್ತರು ವಾಹನಗಳನ್ನು ತಡೆದು ನಿಲ್ಲಿಸಿ ಪೊಲೀಸರಿಗೆ ಒಪ್ಪಿಸಿ ಕೇಸು ದಾಖಲು ಮಾಡಿಸಿದ್ದರು.

 ಅಕ್ರಮ ಗೋ ಸಾಗಾಟದ ವಿಷಯದಲ್ಲಿ ನಿನ್ನೆ ರಾತ್ರಿ ಕೇಸು ದಾಖಲಾಗಿದ್ದರೂ ಇಂದು ಬೆಳಿಗ್ಗೆ 7.20 ರ ವೇಳೆಗೆ ಇಬ್ಬರೂ ಆರೋಪಿಗಳು ಅಶ್ವತ್ಥ್ ಪುರದಲ್ಲಿರುವ ಹಾಲಿನ ಡೈರಿಗೆ ಹಾಲು ಹಾಕಿ ಬಂದಿದ್ದಾರೆನ್ನಲಾಗಿದೆ. ಇವರಿಬ್ಬರೂ ಹೊರ ಬರಲು ಹಾಲು ಉತ್ಪಾದಕರ ಒಕ್ಕೂಟದ ಕೃಪಾ ಕಟಾಕ್ಷ ಇರಬಹುದು ಎಂಬ ಮಾತು ಸಂಘಟನೆಯವರಿಂದ ಕೇಳಿ ಬಂದಿದೆ.

ಭಾಸ್ಕರ ಶೆಟ್ಟಿ ಅವರು ತೆಂಕಮಿಜಾರು ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷರಾಗಿದ್ದಾರೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article