ದಾಮಸ್ಕಟ್ಟೆ-ಪಟ್ಟೆಕ್ರಾಸ್ ರಸ್ತೆ ಅಗಲೀಕರಣಕ್ಕೆ ಶಾಸಕ ಕೋಟ್ಯಾನ್ ಶಿಲಾನ್ಯಾಸ

ದಾಮಸ್ಕಟ್ಟೆ-ಪಟ್ಟೆಕ್ರಾಸ್ ರಸ್ತೆ ಅಗಲೀಕರಣಕ್ಕೆ ಶಾಸಕ ಕೋಟ್ಯಾನ್ ಶಿಲಾನ್ಯಾಸ


ಮೂಡುಬಿದಿರೆ: ರಾಜ್ಯ ಹೆದ್ದಾರಿ ಅಭಿವೃದ್ದಿ ಯೋಜನೆಯಡಿ ಲೋಕೋಪಯೋಗಿ ಇಲಾಖೆಯಿಂದ ಐಕಳ ಪಂಚಾಯತ್ ವ್ಯಾಪ್ತಿಯ ದಾಮಸ್ಕಟ್ಟೆಯಿಂದ ಪಟ್ಟೆಕ್ರಾಸ್ ವರೆಗೆ ರಸ್ತೆ ಅಗಲೀಕರಣಕ್ಕೆ ಕ್ಷೇತ್ರದ ಶಾಸಕ ಉಮಾನಾಥ ಎ.ಕೋಟ್ಯಾನ್ ಬುಧವಾರ  ಶಿಲಾನ್ಯಾಸ ನೆರವೇರಿಸಿದರು .

ನಂತರ ಮಾತನಾಡಿದ ಕೋಟ್ಯಾನ್ ಅವರು ಮೂರುಕಾವೇರಿಯಿಂದ ದಾಮಸ್ಕಟ್ಟೆವರೆಗೆ ರಸ್ತೆ ಅಗಲೀಕರಣಗೊಂಡಿದ್ದು, ದಾಮಸ್ಕಟ್ಟೆಯಿಂದ ಪಟ್ಟೆ ಕ್ರಾಸ್ ವರೆಗೆ ರಸ್ತೆ ಸಂಪೂರ್ಣ ಹದಗೆಟ್ಟಿತ್ತು ಈ ಕಾರಣದಿಂದ ಈ ಹಿಂದಿನ ಸರಕಾರವಿದ್ದ ಸಂದರ್ಭ ಈ ರಸ್ತೆಗೆ 10 ಕೋಟಿ ಅನುದಾನವನ್ನು ಬಿಡುಗಡೆ ಮಾಡಲಾಗಿದೆ.

ಗ್ರಾಮೀಣ ಭಾಗವಾದ ಈ ಪ್ರದೇಶದಲ್ಲಿ ಕಳೆದ ಸರಕಾರವಿದ್ದ ಸಂದರ್ಭ  ಈ ಭಾಗದಲ್ಲಿ ಅನೇಕ ಅಭಿವೃದ್ದಿ ಕಾರ್ಯಗಳು  ನಡೆದಿದೆ, ಮುಂದಿನ ದಿನದಲ್ಲೂ ಕ್ಷೇತ್ರದಲ್ಲಿ ಇನ್ನು ಹೆಚ್ಚಿನ ಅಭಿವೃದ್ದಿ‌ಕಾರ್ಯ ನಡೆಸಲಾಗುವುದು ಎಂದರು. 

ಈ ಸಂದರ್ಭ ಐಕಳ ಪಂಚಾಯತ್ ಅಧ್ಯಕ್ಷ ದಿವಾಕರ ಚೌಟ, ಉಪಾಧ್ಯಕ್ಷೆ ಜಯಲಕ್ಷೀ ಪೂಜಾರಿ, ಸದಸ್ಯರಾದ ರಾಜೇಶ್ ಶೆಟ್ಟಿ, ಜಯಂತಿ ಶೆಟ್ಟಿ, ಅನಿತಾ ಡಿ ಕೊಸ್ತಾ, ರವೀಂದ್ರ ಪೂಜಾರಿ, ಪ್ರಕಾಶ್ ಶೆಟ್ಟಿ, ಬಿಜೆಪಿ ಮಂಡಲಾಧ್ಯಕ್ಷ ದಿನೇಶ್ ಪುತ್ರನ್, ಬಾಸ್ಕರ ಶೆಟ್ಟಿ ಏಳಿಂಜೆ, ಹರೀಶ್ ಶೆಟ್ಟಿ  ತಾಮಣಿಗುತ್ತು,  ಸುದೀರ್ ಶೆಟ್ಟಿ ಏಳಿಂಜೆ, ಸ್ವರಾಜ್ ಶೆಟ್ಟಿ ಮುಂಡ್ಕೂರು, ದೇವಿಪ್ರಸಾದ್ ಶೆಟ್ಟಿ, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ವಿನೋದ್ ಬೊಳ್ಳೂರು, ವಿಜಯ್ ಅಮೀನ್ ಪಟ್ಟೆ, ಜಯಶ್ರೀ, ಸುರೇಖ, ರಮಣಿ, ಗುತ್ತಿಗೆದಾರರಾದ ವಿನೇಶ್ ಕಾರ್ಕಳ, ಪ್ರಬಂಧಕ ಮಂಜುನಾಥ್ ಮತ್ತಿತರರು ಉಪಸ್ಥಿತರಿದ್ದರು.

ಏಳಿಂಜೆ ಗಣೇಶ್ ಭಟ್ ಮತ್ತು ವರುಣ್ ಭಟ್ ಧಾರ್ಮಿಕ ವಿಧಿವಿಧಾನ ನೆರವೇರಿಸಿದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article