ಮೂಡುಬಿದಿರೆ: ಕೋಟಿ ಚೆನ್ನಯ ಜೋಡುಕೆರೆ ಕಂಬಳದಲ್ಲಿ ಚಂದ್ರಶೇಖರ ಸ್ವಾಮೀಜಿಯವರಿಗೆ ರಾಣಿ ಅಬ್ಬಕ್ಕ ಪ್ರಶಸ್ತಿ ಪ್ರದಾನ

ಮೂಡುಬಿದಿರೆ: ಕೋಟಿ ಚೆನ್ನಯ ಜೋಡುಕೆರೆ ಕಂಬಳದಲ್ಲಿ ಚಂದ್ರಶೇಖರ ಸ್ವಾಮೀಜಿಯವರಿಗೆ ರಾಣಿ ಅಬ್ಬಕ್ಕ ಪ್ರಶಸ್ತಿ ಪ್ರದಾನ


ಮೂಡುಬಿದಿರೆ: ಇಲ್ಲಿನ ಕೋಟಿ ಚೆನ್ನಯ ಜೋಡುಕೆರೆ ಕಂಬಳ ಸಮಿತಿಯ ವತಿಯಿಂದ ಕಡಲಕೆರೆ ನಿಸರ್ಗಧಾಮದಲ್ಲಿ ಶನಿವಾರ ನಡೆದ 22ನೇ ವರ್ಷದ ಕೋಟಿ ಚೆನ್ನಯ ಜೋಡುಕೆರೆ ಕಂಬಳದ ಸಭಾ ಕಾಯ೯ಕ್ರಮದಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಧನೆಗೈದಿರುವ ಆಧ್ಯಾತ್ಮಿಕ ಗುರು ಅಂತಾರಾಷ್ಟ್ರೀಯ ವಾಸ್ತುತಜ್ಞ ಶ್ರೀ ಚಂದ್ರಶೇಖರ ಸ್ವಾಮೀಜಿ ಅವರಿಗೆ ವೀರರಾಣಿ ಅಬ್ಬಕ್ಕ ಪ್ರಶಸ್ತಿಯನ್ನು  ಪ್ರದಾನ ಮಾಡಲಾಯಿತು.


ಕಂಬಳ ಸಮಿತಿ ಯ ಅಧ್ಯಕ್ಷ ಶಾಸಕ ಉಮಾನಾಥ ಕೋಟ್ಯಾನ್ ನೇತೃತ್ವದಲ್ಲಿ ನಡೆದ ಸಭಾ ಕಾಯ೯ಕ್ರಮದಲ್ಲಿ ಜಿಲ್ಲಾಧಿಕಾರಿ ಮುಲ್ಲೈ ಮುಹಿಲನ್, ಮಾಜಿ ಸಚಿವ ಕೃಷ್ಣ ಜೆ ಪಾಲೆಮಾರ್, ಕಂಬಳ ಸಮಿತಿಯ ಪ್ರ. ಕಾಯ೯ದಶಿ೯ ಗುಣಪಾಲ ಕಡಂಬ, ಕಾಯ೯ದಶಿ೯ ರಂಜಿತ್ ಪೂಜಾರಿ, ಕೋಶಾಧ್ಯಕ್ಷ ಭಾಸ್ಕರ್ ಎಸ್. ಕೋಟ್ಯಾನ್, ಬಿಜೆಪಿ ಮುಲ್ಕಿ-ಮೂಡುಬಿದಿರೆ ಮಂಡಲ ಅಧ್ಯಕ್ಷ ದಿನೇಶ್ ಪುತ್ರನ್, ಬಿಜೆಪಿ ಜಿಲ್ಲಾ ಮಾಜಿ ಅಧ್ಯಕ್ಷ ಸುದಶ೯ನ್ ಎಂ, ಹಾಲು ಉತ್ಪಾದಕರ ಒಕ್ಕೂಟದ ಜಿಲ್ಲಾಧ್ಯಕ್ಷ ಕೆ.ಪಿ. ಸುಚರಿತ ಶೆಟ್ಟಿ ಮತ್ತಿತರ ಗಣ್ಯರು ಸ್ವಾಮೀಜಿಯವರಿಗೆ ಸನ್ಮಾನ ಪತ್ರ, ಫಲಕ ಹಾಗೂ ಬೃಹತ್ ಹಾರವನ್ನು ಅರ್ಪಿಸಿ ಗೌರವಿಸಿದರು.

ಸನ್ಮಾನ ಸ್ವೀಕರಿಸಿದ ಚಂದ್ರಶೇಖರ ಸ್ವಾಮೀಜಿ ಮಾತನಾಡಿ, ಅಬ್ಬಕ್ಕ ತುಳುನಾಡಿನ ವೀರ ವನಿತೆ ಆಕೆಯ ಹೆಸರಲ್ಲಿ ನೀಡುತ್ತಿರುವ ಪ್ರಶಸ್ತಿಯನ್ನು ಸ್ವೀಕರಿಸಿರುವುದು ನನ್ನ ಪಾಲಿನ ಯೋಗ ಮತ್ತು ಭಾಗ್ಯವಾಗಿದೆ. ಹಲವು ಪ್ರಶಸ್ತಿ ಸನ್ಮಾನಗಳನ್ನು ಸ್ವೀಕರಿಸಿದ್ದರು. ತಾಯಿ ನೆಲದಲ್ಲಿ ಮಾಡಿದ ಸನ್ಮಾನ ಧನ್ಯತಾ ಭಾವ ಮೂಡಿದೆ. ಈ ಸನ್ಮಾನ ಈ ಜಿಲ್ಲೆಯ ಜನತೆಗೆ ಸಂದ ಗೌರವವಾಗಿದೆ ಎಂದರು.

ಮಾಜಿ ಸಚಿವ ಕೃಷ್ಣ ಜೆ ಪಾಲೆಮಾರ್ ಮಾತನಾಡಿ, ಜಗತ್ತಿನಲ್ಲಿ ಅಸಂತುಷ್ಠಿ ಹೆಚ್ಚುತ್ತಿದ್ದು ತಮ್ಮ ಆಧ್ಯಾತ್ಮಿಕ ಚಿಂತನೆ ಬೋದನೆಗಳಿಂದ ಜನರನ್ನು ಸಂತುಷ್ಠಿಗೊಳಿಸುವ ಕೆಲಸವನ್ನು ಚಂದ್ರಶೇಖರ ಸ್ವಾಮೀಜಿ ಮಾಡುತ್ತಿದ್ದಾರೆ. ಆಧ್ಯಾತ್ಮಿಕ ಸಾಧನೆಯ ಮೂಲಕ ಜಗತ್ತಿನಲ್ಲಿ ಗೌರವಿಸಲ್ಪಡುವ ಸ್ವಾಮೀಜಿಯವರು ಜೆಲ್ಲೆಗೆ ರಾಜ್ಯಕ್ಕೆ ಕೀರ್ತಿ ತಂದಿದ್ದಾರೆ ಎಂದರು.

ಅಭಿನಂದನಾ ಭಾಷಣ ಮಾಡಿದ ಮೂಡುಬಿದಿರೆ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ವೇಣುಗೋಪಾಲ ಶೆಟ್ಟಿ ಚಂದ್ರಶೇಖರ ಸ್ವಾಮೀಜಿ ಅವರು ಭಾರತೀಯ ಸಂಸ್ಕೃತಿ ತತ್ವಶಾಸ್ತ್ರ ಶಿಲ್ಯ ತಂತ್ರವನ್ನು ಅಧ್ಯಯನ ಮಾಡಿ ಆ ಜ್ಞಾನಧಾರೆಯನ್ನು ಸಮಾಜಕ್ಕೆ ಎರೆದವರು. ವೈಜ್ಞಾನಿಕ ದೃಷ್ಟಿಕೋನ ದ ಮೂಲಕ ಜನರ ಸಂಕಷ್ಟಗಳಿಗೆ ಪರಿಹಾರ ಸೂಚಿಸಿದವರು ಎಂದರು.

ಇದೇ ಸಂದರ್ಭದಲ್ಲಿ ಚಂದ್ರಶೇಖರ ಸ್ವಾಮೀಜಿ ಅವರು ಶಾಸಕ ಉಮಾನಾಥ ಕೋಟ್ಯಾನ್ ಅವರನ್ನು ವೈಯುಕ್ತಿಕ ನೆಲೆಯಲ್ಲಿ ಸನ್ಮಾನಿಸಿದರು. 

ಜಿಲ್ಲಾ ಕಂಬಳ ಸಮಿತಿಯ ಅಧ್ಯಕ್ಷ ಬೆಳಪು ದೇವಿಪ್ರಸಾದ್ ಶೆಟ್ಟಿ ಅಭಿನಂದನಾ ನುಡಿಗಳನ್ನಾಡಿದರು. ಯೋಗೀಶ್ ಶೆಟ್ಟಿ ಕಾಯ೯ಕ್ರಮ ನಿರೂಪಿಸಿದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article