ರಾ. ಶಿರೂರು ಅವರು ಜ್ಞಾನ ಸಿಂಧು ಪ್ರಶಸ್ತಿಗೆ ಆಯ್ಕೆ: ಎಸ್.ವಿ. ನಾಗರಾಜ್

ರಾ. ಶಿರೂರು ಅವರು ಜ್ಞಾನ ಸಿಂಧು ಪ್ರಶಸ್ತಿಗೆ ಆಯ್ಕೆ: ಎಸ್.ವಿ. ನಾಗರಾಜ್


ಮೂಡುಬಿದಿರೆ: ಮೂಡುಬಿದಿರೆಯ ಹೋಲಿ ರೋಸರಿ ಪ್ರೌಢಶಾಲೆಯ ಕನ್ನಡ ಅಧ್ಯಾಪಕ ಡಾ. ರಾಮಕೃಷ್ಣ ಶಿರೂರು ಅವರು ರಾಜ್ಯಮಟ್ಟದ ಜ್ಞಾನ ಸಿಂಧು-2025 ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

2025 ಜನವರಿ 12ರಂದು ಬಾಗಲಕೋಟೆ ಜಿಲ್ಲೆಯ ಬೀಳಗಿ ತಾಲೂಕಿನ ಸ್ವಾಮಿ ವಿವೇಕಾನಂದ ವಿದ್ಯಾಸಂಸ್ಥೆಯಲ್ಲಿ ನಡೆಯುವ ರಾಜ್ಯ ಮಟ್ಟದ ಶೈಕ್ಷಣಿಕ ಸಮಾವೇಶದಲ್ಲಿ ಈ ಪ್ರಶಸ್ತಿ ನೀಡಿ ಗೌರವಿಸಲಾಗುತ್ತದೆ ಎಂದು ಕರ್ನಾಟಕ ಶಿಕ್ಷಣ ಜ್ಞಾನ ಸಂಘಟನೆಯ ರಾಜ್ಯಾಧ್ಯಕ್ಷ ಮತ್ತು ಶಿಕ್ಷಣ ಜ್ಞಾನ ಮಾಸಪತ್ರಿಕೆ ಬೆಂಗಳೂರು ಇದರ ಸಂಪಾದಕ ಎಸ್.ವಿ. ನಾಗರಾಜ್, ಗೌರವ ಸಂಪಾದಕ ಎಚ್. ರಾಮಚಂದ್ರಪ್ಪ ಸ್ವಾಮಿ ಮತ್ತು ಉಡುಪಿ ಜಿಲ್ಲಾ ಸಂಚಾಲಕ ಹೆಂಗವಳ್ಳಿ ಮೆಟ್ನಗದ್ದೆ ರಾಜೀವ ಶೆಟ್ಟಿ ಅವರು ತಿಳಿಸಿರುತ್ತಾರೆ.

ಎಂ.ಎ. ಬಿ.ಎಡ್. ಪದವೀಧರರಾದ ಡಾ. ರಾಮಕೃಷ್ಣ ಶಿರೂರು ಹಿಂದಿ ಭಾಷೆಯಲ್ಲಿ ರಾಜಭಾಷಾ ವಿದ್ವಾನ್ ಪದವಿಯನ್ನು ಪಡೆದಿರುತ್ತಾರೆ. ಇವರು ಮೂಲತ ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ಶಿರೂರು ಮೇಲ್ಪಂಗ್ತಿಯ ಶಾನುಭೋಗರ ಮನೆತನಕ್ಕೆ ಸೇರಿದ ಭವಾನಿ ಶಂಕರ ಶಾನುಭೋಗ ಮತ್ತು ಸರೋಜಿನಿ ಶಾನುಭೋಗ ಅವರ ಪುತ್ರ. 

1994ರಲ್ಲಿ ಕೊಡಗು ಜಿಲ್ಲೆಯ ವಿರಾಜಪೇಟೆ ತಾಲೂಕಿನ ಶ್ರೀಮಂಗಲ ಪದವಿ ಪೂರ್ವ ಕಾಲೇಜಿನಲ್ಲಿ ಒಂದು ವರ್ಷ ಕನ್ನಡ ಅಧ್ಯಾಪಕರಾಗಿ ಸೇವೆ ಸಲ್ಲಿಸಿ, 1995 ರಿಂದ ಮೂಡುಬಿದಿರೆಯ ಹೋಲಿ ರೋಸರಿ ಪ್ರೌಢಶಾಲೆಯಲ್ಲಿ ಕನ್ನಡ ಆಧ್ಯಾಪಕರಾಗಿ ಕರ್ತವ್ಯ ನಿರ್ವಹಿಸುತ್ತಾ ಬಂದಿರುವ ಇವರು ಮೂಡುಬಿದಿರೆ ಹೋಬಳಿ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಸಾಹಿತ್ಯ, ಸಂಗೀತ, ಸಾಂಸ್ಕೃತಿಕ ಮತ್ತು ಶಿಕ್ಷಕ ಸಂಘಟನಾ ಕ್ಷೇತ್ರದಲ್ಲಿ ತಮ್ಮನ್ನು ತೊಡಗಿಸಿಕೊಂಡ ಇವರಿಂದ ಮೂಡುಬಿದಿರೆಯಲ್ಲಿ ಇನ್ನಷ್ಟು ಸಾಹಿತ್ಯ ಮತ್ತು ಸಾಂಸ್ಕೃತಿಕ ಚಟುವಟಿಕೆಗಳು ನಿರಂತರವಾಗಿ ಮುಂದುವರೆಯಲಿ ಎಂದು ಎಸ್.ವಿ. ನಾಗರಾಜ್ ಮತ್ತು ಹೆಂಗವಳ್ಳಿ ಮೆಟ್ನಗದ್ದೆ ರಾಜೀವ ಶೆಟ್ಟಿ ಅವರು ರಾಮಕೃಷ್ಣ ಶಿರೂರು ಅವರಿಗೆ ಅಭಿನಂದನೆ ಸಲ್ಲಿಸಿರುತ್ತಾರೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article