
ವಿಶ್ರಾಂತ ಮುಖ್ಯ ಶಿಕ್ಷಕ ಫಣಿರಾಜ್ ಜೈನ್ ನಿಧನ
Tuesday, January 14, 2025
ಮೂಡುಬಿದಿರೆ: ತಾಲೂಕಿನ ಪಡುಮಾರ್ನಾಡು ಪ್ರೀತಿ ನಿವಾಸದ ವಿಶ್ರಾಂತ ಮುಖ್ಯ ಶಿಕ್ಷಕ ಫಣಿರಾಜ ಜೈನ್ (67) ಜ.13 ರಂದು ರಾತ್ರಿ ನಿಧನರಾದರು.
ಮೃತರು ಪತ್ನಿ ಮೂವರು ಪುತ್ರಿಯರು ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.
ಬೆಳುವಾಯಿ ಬಂಗ್ಲೆ ಶಾಲೆ ಕೆಸರ್ ಗದ್ದೆ ಮೈನ್ ಶಾಲೆ ಮುಖ್ಯೋಪಾಧ್ಯಾಯರಾಗಿ ಗುರುಪುರ, ಸುಳ್ಯ, ಮಡಿಕೇರಿ ಪ್ರೌಢಶಾಲೆ ಶಿಕ್ಷಕ ರಾಗಿ, ಸಾಕ್ಷರತ ಅಂದೋಲನ, ಮುಂದುವರಿಕ ಶಿಕ್ಷಣ ಕೇಂದ್ರಗಳಲ್ಲಿ ಸೇವೆ ಸಲ್ಲಿಸಿದ್ದರು. ಮಾರ್ನಾಡು ಶ್ರೀ ವರ್ಧಮಾನ ಸ್ವಾಮಿ ಜಿನ ಚೈತ್ಯಾಲಯ ಆಡಳಿತ ಮಂಡಳಿ ಕಾರ್ಯದರ್ಶಿಯಾಗಿದ್ದರು.