.jpg)
ಮೂಡುಬಿದಿರೆ ಪುರಸಭೆಗೆ KSWAN ಇಂಟರ್ ನೆಟ್ ಸೌಲಭ್ಯವನ್ನು ಒದಗಿಸಲು ಕೊಟೇಷನ್ ಆಹ್ವಾನ
Tuesday, January 14, 2025
ಮೂಡುಬಿದಿರೆ: ಬೆಂಗಳೂರಿನ ಪೌರಾಡಳಿತ ನಿರ್ದೇಶನಾಲಯದ ನಿರ್ದೇಶಕರ ಕಛೇರಿಯ ಸುತ್ತೋಲೆಯಂತೆ ಹಾಗೂ ಯೋಜನಾ ನಿರ್ದೇಶಕರು, ಜಿಲ್ಲಾ ನಗರಾಭಿವೃದ್ಧಿ ಕೋಶ, ಜಿಲ್ಲಾಧಿಕಾರಿಯವರ ಕಛೇರಿ, ಮಂಗಳೂರು ಇವರ ನಿರ್ದೇಶನದಂತೆ ಮೂಡುಬಿದಿರೆ ಪುರಸಭೆಗೆ KSWAN ಇಂಟರ್ ನೆಟ್ ಸೌಲಭ್ಯವನ್ನು ಒದಗಿಸುವ ಬಗ್ಗೆ ಕೊಟೇಷನನ್ನು ಆಹ್ವಾನಿಸಲಾಗಿದೆ.
ಮೊಹರು ಮಾಡಲ್ಪಟ್ಟ ಕೊಟೇಷನನ್ನು ಮೂಡುಬಿದಿರೆ ಪುರಸಭೆಯ ಪೌರಾಯುಕ್ತರಿಗೆ ಜ.16 ರ ಸಂಜೆ 4 ಗಂಟೆಯ ಒಳಗೆ ಸಲ್ಲಿಸುವಂತೆ ಪ್ರಕಟಣೆ ತಿಳಿಸಿದೆ.
ನಂತರ ಬಂದಿರುವ ಕೊಟೇಷನ್‌ಗಳನ್ನು ಸ್ವೀಕರಿಸಲಾಗುವುದಿಲ್ಲ ಬಂದಿರುವ ಕೊಟೇಷನ್‌ಗಳನ್ನು ಅದೇ ದಿನ ಸಂಜೆ 4:30ಗಂಟೆಗೆ ಹಾಜರಿರುಕೊಟೇಷನ್ ಹಾಕಿದವರ ಸಮಕ್ಷಮದಲ್ಲಿ ತೆರೆಯಲಾಗುವುದು. ಕೊಟೇಷನ್ ಷರತ್ತುಗಳು ಇನ್ನಿತರೇ ಮಾಹಿತಿಗಳನ್ನು ಕಛೇರಿ ವೇಳೆಯಲ್ಲಿ ಪಡೆಯಬಹುದು ಎಂದು ಪೌರಾಯುಕ್ತರ ಪ್ರಕಟಣೆ ತಿಳಿಸಿದೆ.