
ತಂಡ್ರಕೆರೆ ಸರಕಾರಿ ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳಿಗೆ ಗ್ರಾಮೀಣ ಸೌಲಭ್ಯಗಳ ಬಗ್ಗೆ ಮಾಹಿತಿ
Saturday, January 18, 2025
ಮೂಡುಬಿದಿರೆ: ಮೂಡುಬಿದಿರೆ ತಾಲೂಕು ಪಡುಮಾರ್ನಾಡು ಗ್ರಾಮದ ತಂಡ್ರಕೆರೆ ಸರಕಾರಿ ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳಿಗೆ ಜನವರಿ 18 ರಂದು ಗ್ರಾಮೀಣ ಸೌಲಭ್ಯಗಳ ವಿಶೇಷ ಮಾಹಿತಿಯನ್ನು ನೀಡಲಾಯಿತು.
ಬೆಂಗಳೂರು ಸೂರ್ಯ ಫೌಂಡೇಶನ್ ನ ಜಿಲ್ಲಾ ಸಂಯೋಜಕ, ಸ್ಪಾರ್ಕ್ ಅಕಾಡೆಮಿಯ ತರಬೇತುದಾರ, ರಾಜ್ಯ ಸಂಪನ್ಮೂಲ ವ್ಯಕ್ತಿ ರಾಯಿ ರಾಜಕುಮಾರ ಮೂಡುಬಿದಿರೆ ಯವರು ಮಾಹಿತಿಯನ್ನು ನೀಡಿದರು.
ಅವರು ತಮ್ಮ ಭಾಷಣದಲ್ಲಿ ಸರ್ಕಾರದಿಂದ ದೊರಕುವ ಹಲವಾರು ಸೌಲಭ್ಯಗಳನ್ನು ಸದುಪಯೋಗ ಪಡಿಸಿಕೊಂಡು ತಮ್ಮ ಹಾಗೂ ಮನೆಯವರ ಅಭಿವೃದ್ಧಿ ಮಾಡಿಕೊಳ್ಳಲು ವಿನಂತಿಸಿದರು. ಪರಿಸರವನ್ನು ಶುದ್ಧವಾಗಿ, ಸ್ವಚ್ಛವಾಗಿ ಇಡುವುದರಿಂದ ಆಗುವ ಹಲವಾರು ಆರೋಗ್ಯ ಕರ ಅಂಶಗಳನ್ನು ಮನವರಿಕೆ ಮಾಡಿಕೊಟ್ಟರು. ಮುಖ್ಯ ಶಿಕ್ಷಕಿ ಶ್ರೀಮತಿ ಅರುಣ ಸ್ವಾಗತಿಸಿ ವಂದಿಸಿದರು.