
ಮೂಡುಬಿದಿರೆ: ಆಧಾರ್ ತಿದ್ದುಪಡಿ ಶಿಬಿರಕ್ಕೆ ಚಾಲನೆ
Wednesday, January 29, 2025
ಮೂಡುಬಿದಿರೆ: ಇಲ್ಲಿನ ಪುರಸಭೆ ಮತ್ತು ಆಧಾರ್ ಸೇವಾ ಕೇಂದ್ರ ಮಂಗಳೂರು ಇವುಗಳ ಸಹಯೋಗದೊಂದಿಗೆ ಮೂಡುಬಿದಿರೆ ಪುರಸಭೆಯಲ್ಲಿ ಆಧಾರ್ ತಿದ್ದುಪಡಿ ಶಿಬಿರ ಬುಧವಾರ ಆರಂಭಗೊಂಡಿತು.
ಹದಿನಾರು ದಿನಗಳ ಕಾಲ ನಡೆಯುವ ಶಿಬಿರವನ್ನು ಪುರಸಭಾಧ್ಯಕ್ಷೆ ಜಯಶ್ರೀ ಕೇಶವ್ ಚಾಲನೆ ನೀಡಿದರು.
ಉಪಾಧ್ಯಕ್ಷ ನಾಗರಾಜ ಪೂಜಾರಿ, ಮುಖ್ಯಾಧಿಕಾರಿ ಇಂದು ಎಂ ಮತ್ತು ಸಿಬ್ಬಂದಿಯವರು ಉಪಸ್ಥಿತರಿದ್ದರು.
ಶಿಬಿರವು ಬೆಳಿಗ್ಗೆ 9:3೦ ರಿಂದ ಸಂಜೆ 4:೦೦ರ ವರೆಗೆ ನಡೆಯಲಿದೆ.