
ನಮಿತಾ ಆರ್. ಶೆಟ್ಟಿ ಅವರಿಗೆ ಪಿಎಚ್‌ಡಿ ಪದವಿ
Sunday, January 12, 2025
ಶಂಕರಘಟ್ಟ: ಕುವೆಂಪು ವಿಶ್ವವಿದ್ಯಾಲಯದ ಕಂಪ್ಯೂಟರ್ ಸೈನ್ಸ್ ವಿಷಯದಲ್ಲಿ ನಮಿತಾ ಆರ್. ಶೆಟ್ಟಿ ಅವರು ಪಿಎಚ್‌ಡಿ ಪದವಿಯನ್ನು ಪಡೆದುಕೊಂಡಿದ್ದಾರೆ.
ಇವರು ‘ಡೆವಲಪ್‌ಮೆಂಟ್ ಆಫ್ ರಿವರ್ಸಿಬಲ್ ಡಾಟಾ ಹೈಡಿಂಗ್ ಟೆಕ್‌ನಿಕ್ಸ್ ಫಾರ್ ಡಿಜಿಟಲ್ ಇಮೇಜಸ್’ ವಿಷಯದ ಕುರಿತು ಅಧ್ಯಯನ ನಡೆಸಿದ್ದರು. ಇವರು ಕಂಪ್ಯೂಟರ್ ಸೈನ್ಸ್ ವಿಭಾಗದ ಪ್ರಾಧ್ಯಾಪಕ ಡಾ. ಯೋಗೀಶ್ ನಾಯಕ್ ಇವರ ಮಾರ್ಗದರ್ಶನದಲ್ಲಿ ಸಂಶೋಧನೆ ನಡೆಸಿದ್ದರು.
ಇವರು ಶಂಕರಘಟ್ಟದ ರೂಪ ರಮೇಶ್ ಶೆಟ್ಟಿ ದಂಪತಿಗಳ ಪುತ್ರಿಯಾಗಿದ್ದು, ಶಿವಮೊಗ್ಗದ ಕ್ಲಿಫ್ ಎಂಬೆಸ್ಸಿ ಮಾಲೀಕ ಆರ್. ರೋಹಿತ್ ಅವರ ಪತ್ನಿ.