
ಸಮುದ್ರದ ಅಲೆಗೆ ಮೀನುಗಾರಿಕಾ ಸಾಮಾಗ್ರಿ ಸಮುದ್ರ ಪಾಲು
Sunday, January 12, 2025
ಉಳ್ಳಾಲ: ಇಬ್ಬರು ಮೀನುಗಾರರು ಕೋಟೆಪುರ ಅಳಿವೆ ಬಾಗಿಲು ಮೂಲಕ ಮೀನುಗಾರಿಕೆ ನಡೆಸುತ್ತಿದ್ದ ವೇಳೆ ಸಮುದ್ರದ ಅಲೆಗೆ ಮೀನಿನ ಬಲೆ ಸಹಿತ ಮೀನು ಗಾರಿಕೆ ನಡೆಸುವ ಸಾಮಗ್ರಿಗಳು ಸಮುದ್ರ ಪಾಲಾದ ಘಟನೆ ಅಳಿವೆ ಬಾಗಿಲು ಬಳಿ ನಡೆದಿದೆ.
ತ್ವಾಹಿರಾ ಕೋಟೆಪುರ ಅವರ ಮಾಲೀಕತ್ವದ ರಫಾನ್ ಗಿಲ್ ನೆಟ್ ದೋಣಿಯಲ್ಲಿ ಮೀನುಗಾರರಾದ ಜುಬೇರ್ ಹಾಗೂ ಸಲೀಂ ಎಂಬವರು ಮೀನುಗಾರಿಕೆಗೆಂದು ಕೋಟೆಪುರ ಅಳಿವೆಬಾಗಿಲು ಮೂಲಕ ತೆರಳಿದ್ದರು.
ಅಳಿವೆ ಬಾಗಿಲಿನಿಂದ ಸುಮಾರು 10 ನಾಟಿಕಲ್ ದೂರದಲ್ಲಿರುವ ಪಣಂಬೂರು ಸಮೀಪದ ಸಮುದ್ರದಲ್ಲಿ ಮೀನುಗಾರಿಕೆ ನಡೆಸುತ್ತಿದ್ದ ವೇಳೆ ಮೀನುಗಾರಿಕೆಗೆ ಉಪಯೋಗಿಸುತ್ತಿದ್ದ ಬಲೆ, ರೋಪ್ ಮತ್ತು ಬೋಯ್ ಗಳು ಸಮುದ್ರ ಪಾಲಾಗಿವೆ. ಇದನ್ನು ಟ್ರಾಲರ್ ಬೋಟು ಎಳೆದುಕೊಂಡು ಹೋಗಿದ್ದು, ಇದರಿಂದ 1,75,000 ನಷ್ಟ ಸಂಭವಿಸಿರಬೇಕು ಎಂದು ಅಂದಾಜಿಸಲಾಗಿದೆ. ಈ ಬಗೆ ಮಾಲಕ ತ್ವಾಹಿರಾ ನೀಡಿದ ದೂರಿನಂತೆ ಮಂಗಳೂರು ಕರಾವಳಿ ಕಾವಲು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.