
ಜ.7 ರಿಂದ ಉಜಿರೆಯಲ್ಲಿ ನಾಟಕೋತ್ಸವ
Sunday, January 5, 2025
ಉಜಿರೆ: ಬೆಳ್ತಂಗಡಿ ತಾಲ್ಲೂಕಿನ ಸಾಂಸ್ಕೃತಿಕ ಸಂಘಟನೆ ‘ಸಮೂಹ ಉಜಿರೆ’ ಆಶ್ರಯದಲ್ಲಿ ಉಜಿರೆಯಲ್ಲಿರುವ ‘ವನರಂಗ’ ಬಯಲು ರಂಗಮಂದಿರದಲ್ಲಿ ಜ.7, 8 ಮತ್ತು 9 ರಂದು ಪ್ರತಿ ದಿನ ಸಂಜೆ ಗಂಟೆ 9.30 ರಿಂದ ನಾಟಕ ಪ್ರದರ್ಶನ ಆಯೋಜಿಸಲಾಗಿದೆ.
ಜ.7 ರಂದು ಮುದ್ದಣ ಮನೋರಮೆ (ಧರ್ಮಸ್ಥಳದ ಸಿಬ್ಬಂದಿ ಅವರಿಂದ), ಜ.8 ರಂದು ಚಾರುವಸಂತ (ಮೂಡಬಿದ್ರೆ ಆಳ್ವಾಸ್ ಶಿಕ್ಷಣಪ್ರತಿಷ್ಠಾನದ ರಂಗಅಧ್ಯಯನ ಕೇಂದ್ರದ ಕಲಾವಿದರಿಂದ), ಜ.9 ರಂದು ಭೀಷ್ಮಾಸ್ತಮಾನ (ಎಸ್.ಡಿ.ಎಂ. ರಂಗ ತರಬೇತಿ ಕೇಂದ್ರದ ಕಲಾವಿದರಿಂದ).