ವಿಶ್ವದ ಮೊದಲ ಸಂಪೂರ್ಣ ಬೆನ್ನುಮೂಳೆಯ ಗೆಡ್ಡೆ ತೆರೆವು ಶಸ್ತ್ರಚಿಕಿತ್ಸೆ ಬಗ್ಗೆ ಡಾ. ಡಿ. ವೀರೇಂದ್ರ ಹೆಗ್ಗಡೆ ಶ್ಲಾಘನೆ

ವಿಶ್ವದ ಮೊದಲ ಸಂಪೂರ್ಣ ಬೆನ್ನುಮೂಳೆಯ ಗೆಡ್ಡೆ ತೆರೆವು ಶಸ್ತ್ರಚಿಕಿತ್ಸೆ ಬಗ್ಗೆ ಡಾ. ಡಿ. ವೀರೇಂದ್ರ ಹೆಗ್ಗಡೆ ಶ್ಲಾಘನೆ


ಉಜಿರೆ: ಉಜಿರೆಯಂತಹ ಗ್ರಾಮೀಣ ಪ್ರದೇಶದ ಆಸ್ಪತ್ರೆಯಲ್ಲಿ ಅಪೂರ್ವ ಸಾಧನೆ ಮಾಡಿರುವುದು ಸಂತಸ ತಂದಿದೆ. ಹಿಂದೆ ಬೆನ್ನುಮೂಳೆ ಗೆದ್ದೇ ತೆರವು ಶಸ್ತ್ರಚಿಕಿತ್ಸೆಗೆ ಕನಿಷ್ಠ 10-12 ತಾಸು ಅನಶ್ತೇಶಿಯದಲ್ಲಿರಿಸಬೇಕಾಗಿತ್ತು. ಇಂದು ಕೇವಲ ಮೂರು ತಾಸು ಸಾಕಾಗಿದೆ. ಇಂತಹ ಸುಧಾರಿತ ಪ್ರಯೋಗ ಉಜಿರೆಯ ಆಸ್ಪತ್ರೆಯಲ್ಲಿ ಮಾಡಿದ ಅಪೂರ್ವ ಸಾಧನೆ ಅಭಿನಂದನೀಯ ಎಂದು ಧರ್ಮಸ್ಥಳ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಹೇಳಿದರು.

ಅವರು ಜ.26 ರಂದು ಉಜಿರೆ ಎಸ್‌ಡಿಎಂ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯು ವಿಶ್ವದ ಮೊದಲ ಇಂಟ್ರಾ ಡ್ಯೂರಲ್ ಸ್ಪೈನಲ್ ಟ್ಯೂಮರ್ ತೆಗೆದು ಯಶಸ್ವಿ ಡ್ಯೂರಲ್ ದುರಸ್ತಿ ಶಸ್ತ್ರಚಿಕಿತ್ಸೆ ಮಾಡಿ ಜಾಗತಿಕ ಮೈಲಿಗಲ್ಲನ್ನು ಸೃಷ್ಟಿಸಿದ್ದು, ವೈದ್ಯಕೀಯ ಲೋಕದಲ್ಲಿ ವಿಶೇಷ ಸಾಧನೆಯಾಗಿರುವ ಹಿನ್ನೆಲೆ ಜ.26 ರಂದು ಆಸ್ಪತ್ರೆಯಲ್ಲಿ ವೈದ್ಯರ ವಿಶೇಷ ಸಾಧನೆಯನ್ನು ಶ್ಲಾಘಿಸಿ ಅವರನ್ನು ಅಭಿನಂದಿಸಿ ಮಾತನಾಡಿದರು.

ಇದು ವಿಶ್ವಕ್ಕೆ ಅನುಕರಣೀಯ, ನುರಿತ ತಂಡದ ಕಾರ್ಯದಿಂದಾಗಿರುವಂತಹ ಸಾಧನೆಯಾಗಿದೆ. ಪ್ರಯತ್ನ ಮತ್ತು ಪ್ರಯೋಗ ಮಾಡುವಲ್ಲಿ ರಿಸ್ಕ್ ಇದೆ. ಇಲ್ಲಿ ದೇವರ ಅನುಗ್ರಹವೂ ಇದೆ. ಮುಂದೆ ಆಸ್ಪತ್ರೆಯಲ್ಲಿ ಎಂ.ಆರ್.ಐ. ಸ್ಕ್ಯಾನಿಂಗ್ ಯಂತ್ರ ಅಳವಡಿಸುವ ಕಾರ್ಯ ಮಾಡಲಾಗುವುದು ಎಂದು ಹೇಳಿದರು.

ಡಾ. ಹೇಮಾವತಿ ವೀ. ಹೆಗ್ಗಡೆ ಮಾತನಾಡಿ, ಆಸ್ಪತ್ರೆಯ ಬೆಳವಣಿಗೆ ನೋಡಿ ಅದನ್ನು ಸ್ಥಾಪಿಸಿದವರಿಗೆ ಸಂತೋಷವಾಗುತ್ತದೆ. ವೈದ್ಯರ ವಿಶೇಷ ಸಾಧನೆ ಇದೊಂದು ಪವಾಡವೇ ಸರಿ. ನ್ಯಾಚುರೋಪತಿಯಲ್ಲಿ ಅನೇಕ ರೋಗಗಳು ಪಂಚತತ್ವದಡಿ ಗುಣಮುಖವಾಗಿದ್ದಿದೆ. ಅದೇ ರೀತಿ ಎಸ್‌ಡಿಎಂ ಆಸ್ಪತ್ರೆಯ ಈ ಸಾಧನೆಗೆ ವೈದ್ಯರನ್ನು  ವಿಶೇಷವಾಗಿ ಅಭಿನಂದಿಸುತ್ತೇನೆ ಎಂದರು.

ಖ್ಯಾತ ಬೆನ್ನು ಮೂಳೆ ಶಸ್ತ್ರಚಿಕಿತ್ಸಾ ತಜ್ಞ ಡಾ. ಮಹೇಶ್ ಕೆ. ಮಾತನಾಡಿ, ಒಂದು ವರ್ಷದಲ್ಲಿ 50ಕ್ಕೂ ಮಿಕ್ಕಿ ಎಂಡೋಸ್ಕೊಪಿ ಸರ್ಜರಿ ಮಾಡಿದ್ದೆವು. ಹಿಂದೆ ಶೇ.5 ರಿಂದ 10 ರವರೆಗೆ ತೆರೆದ ಸರ್ಜರಿ ಆಗುತ್ತಿತ್ತು. ಆದರೆ ಇತ್ತೀಚೆಗೆ ಅದು ಸಂಪೂರ್ಣ ನಿಲ್ಲಿಸಲಾಗಿದೆ. ಉಜಿರೆ ಎಸ್‌ಡಿಎಂ ಆಸ್ಪತ್ರೆಯಲ್ಲಿ ಎಲ್ಲ ಗುಣಮಟ್ಟದ ಸೌಲಭ್ಯಗಳಿಂದಾಗಿ ರೋಗಿಗಳಿಗೆ ಸರ್ಜರಿ ಕಡಿಮೆ ವೆಚ್ಚದಲ್ಲಿ ನಡೆಸಲು ಸಾಧ್ಯವಾಗಿದೆ  ಎಂದು ಹೇಳಿದರು.

ಡಾ. ಶತಾನಂದ ಪ್ರಸಾದ್ ರಾವ್ ಮಾತನಾಡಿ, ಶಿಶಿಲ ಗ್ರಾಮದ 65 ವರ್ಷದ ಧರ್ಣಮ್ಮ ಎಂಬವರು ಸೊಂಟ ನೋವಿಗೆಂದು ಪರೀಕ್ಷೆಗೆ ಬಂದಾಗ ಎಂ.ಆರ್.ಐ. ಮಾಡಿಸಿದಾಗ ಬೆನ್ನುಮೂಳೆಯಲ್ಲಿ ಟ್ಯೂಮರ್ ಪತ್ತೆಯಾಗಿತ್ತು. ಅದನ್ನು ಕಠಿನ ಪರಿಶ್ರಮದಿಂದ ತೆರವುಗೊಳಿಸಿ ಅಲ್ಲಿನ ನರದೊಳಗೆ ನಮ್ಮ ವೈದ್ಯರೇ ಸಿದ್ಧಪಡಿಸಿದ ಯಂತ್ರದ ಮೂಲಕ ಹೊಲಿಗೆ ಹಾಕಿರುವುದು ವಿಶ್ವದಲ್ಲೇ ಮೊದಲಾಗಿದೆ ಎಂದು ಹೇಳಿದರು.

ಶಸ್ತ್ರಚಿಕಿತ್ಸೆ ನಡೆಸಿದ ತಂಡ ಅರಿ ವಳಿಕೆ ತಜ್ಞೆ ಡಾ. ಚೈತ್ರಾ, ಎಸ್‌ಡಿಎಂ ಆಸ್ಪತ್ರೆ ಮೆಡಿಕಲ್ ಸೂಪರಿಡೆಂಟ್ ಡಾ. ದೇವೇಂದ್ರ ಉಪಸ್ಥಿತರಿದ್ದರು. ಶಸ್ತ್ರಚಿಕಿತ್ಸೆಯಿಂದ ಸಂಪೂರ್ಣ ಗುಣಮುಖರಾದ ಧರ್ಣಮ್ಮ ಉಪಸ್ಥಿತರಿದ್ದರು.

ಆಸ್ಪತ್ರೆಯ ಎಂ.ಡಿ. ಜನಾರ್ದನ್ ಎಂ. ಸ್ವಾಗತಿಸಿ, ಪ್ರಸ್ತಾವಿಸಿದರು. ಸಿಬ್ಬಂದಿ ಚಿದಾನಂದ ಡಿ. ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

ದಕ್ಷಿಣ ಕೊರಿಯಾದ ವೈದ್ಯರಿಂದ ಮೆಚ್ಚುಗೆ:

ಬೆನ್ನುಮೂಳೆ ಗೆಡ್ಡೆಯ ಶಸ್ತ್ರಚಿಕಿತ್ಸೆ ಬಹುತೇಕ ಎಲ್ಲಾ ಕಡೆ ಮಾಡಲಾಗುತ್ತದೆ. ಆದರೆ ಸರ್ಜರಿ ಸಮಯದಲ್ಲಿ ಆಗುವ ಬೆನ್ನು ಹುರಿಯನ್ನು ಸುತ್ತುವರೆದಿರುವ ಮತ್ತು ರಕ್ಷಿಸುವ ಅಂಗಾಂಶದ ದಪ್ಪ ಪದರವಾಗಿರುವ ಬಹಳ ಮುಖ್ಯವಾದ ಡ್ಯೂರಲ್ ಹಾನಿಯನ್ನು ಸರಿಪಡಿಸುವ ಹೊಲಿಗೆ ಮಾಡುವಲ್ಲಿ ಇದುವರೆಗೆ ಎಲ್ಲಿಯೂ ಯಶಸ್ವಿಯಾಗಿರಲಿಲ್ಲ. ಡೆಹರಾಡೂನ್‌ನಲ್ಲಿ ಇತ್ತೀಚೆಗೆ ನಡೆದ ಅಂತರರಾಷ್ಟ್ರೀಯ ಸೈನ್ ಸರ್ಜರಿ ವೈದ್ಯರ ಸಮಾವೇಶದಲ್ಲಿ ನಮ್ಮ ಆಸ್ಪತ್ರೆಯಲ್ಲಿ ನಡೆದ ಈ ಯಶಸ್ವಿ ಶಸ್ತ್ರಚಿತ್ಸೆಯ ವಿಷಯ ಪ್ರಸ್ತಾಪ ಮಾಡಲಾಗಿ  ಬೆನ್ನುಮೂಳೆ ಸರ್ಜರಿಯಲ್ಲಿ ಇದು ವಿಶ್ವದಲ್ಲೇ ಪ್ರಥಮವೆಂದು ದಕ್ಷಿಣ ಕೊರಿಯಾದ ಸೈನ್ ಸರ್ಜರಿ ವೈದ್ಯರೇ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. -ಎಂ. ಜನಾರ್ದನ್, ಎಂ.ಡಿ. ಎಸ್‌ಡಿಎಂ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ, ಉಜಿರೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article