
ಬ್ರಹ್ಮರಕೊಟ್ಲು ಟೋಲ್‌ಗೇಟ್ ತೆರವಿಗೆ ಆಗ್ರಹಿಸಿ ಧರಣಿ ಸತ್ಯಾಗ್ರಹ
Wednesday, February 26, 2025
ಬಂಟ್ವಾಳ: ವಿವಾದಿತ ಬ್ರಹ್ಮರಕೊಟ್ಲು ಟೋಲ್‌ಗೇಟ್ ತೆರವುಗೊಳಿಸುವಂತೆ ಆಗ್ರಹಿಸಿ ಎಸ್‌ಡಿಪಿಐ ಮಂಗಳೂರು ಗ್ರಾಮಾಂತರ ಜಿಲ್ಲಾ ಸಮಿತಿಯ ನೇತೃತ್ವದಲ್ಲಿ ಬ್ರಹ್ಮರಕೊಟ್ಲು ಟೋಲ್‌ಗೇಟ್ ಬಳಿ ಧರಣಿ ಸತ್ಯಾಗ್ರಹವನ್ನು ನಡೆಸಲಾಯಿತು.
ನ್ಯಾಯವಾದಿ ಜೆರಾಲ್ಡ್ ಸಿಕ್ವೇರಾ ಅವರು ಬ್ಯಾಂಡ್ ಬಾರಿಸುವ ಮೂಲಕ ಸತ್ಯಾಗ್ರಹಕ್ಕೆ ಅಧಿಕೃತ ಚಾಲನೆ ನೀಡಿದರು.
ಎಸ್‌ಡಿಪಿಐ ಮಂಗಳೂರು ಗ್ರಾಮಾಂತರ ಜಿಲ್ಲಾಧ್ಯಕ್ಷ ಅನ್ವರ್ ಸಾದತ್ ಬಜತ್ತೂರು, ಪ್ರಮುಖರಾದ ಆಲ್ಫೋನ್ಸ್ ಫ್ರಾಂಕೋ, ಬಿ. ಗಂಗಾಧರ್, ಸಿದ್ದೀಕ್ ಅಲೆಕ್ಕಾಡಿ ಇನಾಸ್ ರೋಡ್ರಿಗಸ್, ಮೂನಿಶ್ ಅಲಿ ಬಂಟ್ವಾಳ ಹಾಗೂ ಜಿಲ್ಲಾ ಸಮಿತಿ ನಾಯಕರು, ಕಾರ್ಯಕರ್ತರು, ಸಾಮಾಜಿಕ ಹೋರಾಟಗಾರರು, ವಿದ್ಯಾರ್ಥಿಗಳು, ವಾಹನ ಚಾಲಕ, ಮಾಲಕರು ಸಹಿತ ಹಲವರು ಸತ್ಯಾಗ್ರಹದಲ್ಲಿ ಭಾಗವಹಿಸಿದ್ದರು.