
ರಾಷ್ಟ್ರಮಟ್ಟದ ಈಜು ಪ್ರತಿಭೆ: ಸಹೋದರಿಯರಿಗೆ ಸನ್ಮಾನ
Friday, February 7, 2025
ಬಂಟ್ವಾಳ: ತಾಲೂಕಿನ ಬರಿಮಾರು ಗ್ರಾಮದ ಶಿವಾಜಿನಗರ ಶ್ರೀಶಿವಾಜಿ ಪ್ರೆಂಡ್ಸ್ ಇದರ ಆಶ್ರಯದಲ್ಲಿ ನಡೆದ ಆಹ್ವಾನಿತ ತಂಡಗಳ ವಾಲಿಬಾಲ್ ಪಂದ್ಯಾಟದಲ್ಲಿ ರಾಷ್ಟ್ರಮಟ್ಟದ ಈಜು ಪ್ರತಿಭೆಗಳಾದ ಸಹೋದರಿಯರನ್ನು ಸನ್ಮಾನಿಸಲಾಯಿತು.
ಕಲ್ಲಡ್ಕ ಶ್ರೀರಾಮ ವಿದ್ಯಾಸಂಸ್ಥೆಯ ವಿದ್ಯಾರ್ಥಿನಿಯರು ಸಹೋದರಿಯರಾದ ಅನರ್ಘ್ಯ ಎ.ಆರ್. ಮತ್ತು ಅನನ್ಯ ಎ.ಆರ್. ಅವರನ್ನು ರಾಷ್ಟ್ರಮಟ್ಟದ ಕ್ರೀಡಾಪಟು, ಮಂಗಳೂರು ಗಣಪತಿ ಹೈಸ್ಕೂಲ್‌ನ ದೈಹಿಕ ಶಿಕ್ಷಣ ಶಿಕ್ಷಕ ಶಶಿಧರ್ ಸೇರ ಅವರು ಸನ್ಮಾನಿಸಿ ಶುಭಹಾರೈಸಿದರು.
ಐಡಿಯಲ್ ಕ್ಯಾಶು ಇಂಡಸ್ಟ್ರೀಸ್‌ನ ಪಾಲುದಾರ ನೂತನ್, ಕಡೇಶಿವಾಲಯ ವ್ಯವಸಾಯ ಸಹಕಾರಿ ಬ್ಯಾಂಕ್‌ನ ನಿರ್ದೇಶಕರಾದ ಆನಂದ ಪಾಪೆತ್ತಿಮಾರು, ಬರಿಮಾರು ಗ್ರಾಮ ಪಂಚಾಯತ್ ಮಾಜಿ ಸದಸ್ಯ ಜಯಂತ ಎಂ. ಶಿವಾಜಿ ಫ್ರೆಂಡ್ಸ್‌ನ ಅಧ್ಯಕ್ಷ ರಾದ ದಿನೇಶ್, ಸ್ಥಾಪಕರಾದ ಅಶ್ವತ್, ಸದಸ್ಯರಾದ ಮನೋಜ್, ಡೀಕಯಗೋಪುಕೋಡಿ ಮತ್ತಿತರರು ಉಪಸ್ಥಿತರಿದ್ದರು.