ಸಾಲ ತೀರಿಸಿದರೂ ದಾಖಲೆ ಮರಳಿಸದ ಸೊಸೈಟಿ ನೌಕರರ ವಿರುದ್ಧ ದೂರು ದಾಖಲು

ಸಾಲ ತೀರಿಸಿದರೂ ದಾಖಲೆ ಮರಳಿಸದ ಸೊಸೈಟಿ ನೌಕರರ ವಿರುದ್ಧ ದೂರು ದಾಖಲು

ಕುಂದಾಪುರ: ಸೊಸೈಟಿಯಲ್ಲಿ ಮಾಡಿದ್ದ ಸಾಲವನ್ನು ತೀರಿಸಿ, ಸಾಲ ಚುಕ್ತಾ ಪತ್ರವನ್ನು ಪಡೆದ ಮೇಲೆಯೂ ಸಾಲಕ್ಕೆ ಅಡಮಾನವಿರಿಸಿದ್ದ ಆಸ್ತಿ ಪತ್ರ ಕೊಡದೆ ಮೋಸ ಮಾಡಿದರು ಎಂದು ಗ್ರಾಹಕರೊಬ್ಬರು ಸೊಸೈಟಿ ನೌಕರರ ವಿರುದ್ಧ ಪೊಲೀಸರಿಗೆ ದೂರು ಸಲ್ಲಿಸಿದ್ದಾರೆ. 

ಕುಂಭಾಶಿಯಲ್ಲಿ ಸೆಲೂನ್ ವ್ಯವಹಾರ ನಡೆಸುತ್ತಿರುವ ವಕ್ವಾಡಿಯ ನಿವಾಸಿ ಸುಜಯ್ ಸುವರ್ಣ ಎಂಬವರೇ ಸೊಸೈಟಿಯಿಂದ ತೊಂದರೆಗೊಳಗಾಗಿ ದೂರು ಸಲ್ಲಿಸಿದವರು.  ಅವರು ಕುಂದಾಪುರ ಪೊಲೀಸರಿಗೆ ನೀಡಿದ ದೂರಿನ ಪ್ರಕಾರ ಪ್ರಕರಣದ ವಿವರ ಹೀಗಿದೆ: 

ಸುಜಯ್ ಸುವರ್ಣ ಕೋಟೇಶ್ವರದಲ್ಲಿ ಕಾರ್ಯಾಚರಿಸುತ್ತಿರುವ ಕುಂದಾಪುರ ಸೌಹಾರ್ದ ಕ್ರೆಡಿಟ್ ಕೋ ಆಪರೇಟಿವ್ ಲಿ. ಎಂಬ ಹೆಸರಿನ ಸೊಸೈಟಿಯಲ್ಲಿ 2019ರಲ್ಲಿ 20 ಲಕ್ಷ ರೂ. ಸಾಲ ತೆಗೆದುಕೊಂಡಿದ್ದರು. ಸಾಲದ ಭದ್ರತೆಗಾಗಿ ಅವರು ತನ್ನ ಕುಂಭಾಶಿಯಲ್ಲಿನ 5.5 ಸೆಂಟ್ಸ್ ಹಾಗೂ ವಕ್ವಾಡಿಯಲ್ಲಿನ 10ಸೆಂಟ್ಸ್ ಭೂಮಿಯನ್ನು ಅಡಮಾನವಿರಿಸಿದ್ದರು. 

ಹೀಗೆ ಪಡೆದ ಸಾಲವನ್ನು ಹಂತ ಹಂತವಾಗಿ ಆನ್ ಲೈನ್ ಮತ್ತು ನಗದು ರೂಪದಲ್ಲಿ ಕಟ್ಟಿ ಚುಕ್ತಾ ಮಾಡಿದರು. ಸೊಸೈಟಿಯವರು 2020 ರಲ್ಲಿ ಸುವರ್ಣರಿಗೆ ಸಾಲ ಚುಕ್ತಾ ಸರ್ಟಿಫಿಕೇಟ್ ಕೂಡಾ ನೀಡಿದರು. ಆದರೆ, ಕುಂಭಾಶಿಯ ಐದೂವರೆ ಸೆಂಟ್ಸ್ ಭೂಮಿಯ ಮೂಲದಾಖಲೆಗಳನ್ನು ಮಾತ್ರ ಹಿಂದಿರುಗಿಸಿ, ವಕ್ವಾಡಿಯ 10 ಸೆಂಟ್ಸ್ ಭೂಮಿಯ ಮೂಲ ದಾಖಲೆಗಳನ್ನು ಮರಳಿಸಲಿಲ್ಲ. 

ಸುಜಯ್ ಸುವರ್ಣ ಕೇಳಿದಾಗ, ವಕ್ವಾಡಿ ಜಾಗದ ಮೂಲ ದಾಖಲೆ ಪತ್ರಗಳು ಕೇಂದ್ರ ಕಚೇರಿಯಲ್ಲಿರುವುದಾಗಿಯೂ, ಶೀಘ್ರ ತರಿಸಿ ಕೊಡುವುದಾಗಿಯೂ ತಿಳಿಸಿದರು. ಆದರೆ ಬಹು ಸಮಯವಾದರೂ ದಾಖಲೆ ಹಿಂದಿರುಗಿಸದೆ ಇನ್ನೂ 10 ಲಕ್ಷ ರೂಪಾಯಿಗಳನ್ನು ಕಟ್ಟಬೇಕೆಂತಲೂ, ಇಲ್ಲವಾದರೆ ಮುಂದೆ ಸುವರ್ಣರಿಗೆ ಸಮಸ್ಯೆಯಾಗುತ್ತದೆ ಎಂದೂ ಹೇಳಿದರು. 

ಈ ನಡುವೆ ರಾಜು ಪೂಜಾರಿ ಬೇರೆಡೆಗೆ ವರ್ಗಾವಣೆಗೊಂಡು ಅವರ ಸ್ಥಾನಕ್ಕೆ ರಾಘವೇಂದ್ರ ಶೆಟ್ಟಿ ಎಂಬವರು ಬಂದಿದ್ದರು. ಅವರು ಕೂಡಾ ಸುವರ್ಣರಿಗೆ ದಾಖಲೆಗಳನ್ನು ಹಸ್ತಾಂತರಿಸದೆ ಹತ್ತು ಲಕ್ಷ ರೂ. ಕಟ್ಟಲು ಹೇಳಿದರು. ಬೇರೆ ದಾರಿ ಕಾಣದೆ ಸುಜಯ್ ಸುವರ್ಣ ಎರಡು ಕಂತುಗಳಲ್ಲಿ ಇನ್ನೂ 8ಲಕ್ಷದ 67ಸಾವಿರ ರೂ.ಗಳನ್ನು ಸೊಸೈಟಿಗೆ ಕಟ್ಟಿದರು. 

ಇಷ್ಟಾದರೂ ಸೊಸೈಟಿಯವರು ಅವರ ಜಮೀನಿನ ಮೂಲ ದಾಖಲೆಗಳನ್ನು ಹಿಂದಿರುಗಿಸದೆ ಬೆದರಿಕೆ ಒಡ್ಡಿದ್ದಾರೆ ಎಂದು ಅವರು ಪೊಲೀಸರಿಗೆ ದೂರು ಸಲ್ಲಿಸಿದ್ದಾರೆ. ಕುಂದಾಪುರ ಪೊಲೀಸರು ದೂರು ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article