
ಮುಸ್ಲಿಂ ಬಾಂಧವ್ಯ ವೇದಿಕೆಯಿಂದ ಮೋಹನ್ ಆಳ್ವರಿಗೆ "ಸೌಹಾರ್ದ ಸಿರಿ" ಪ್ರಶಸ್ತಿ ಪ್ರದಾನ
ಮೂಡುಬಿದಿರೆ: ಮುಸ್ಲಿಂ ಬಾಂಧವ್ಯ ವೇದಿಕೆ ಕನಾ೯ಟಕ ಇದರ ವತಿಯಿಂದ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ ಆಳ್ವರಿಗೆ "ಸೌಹಾದ೯ ಸಿರಿ" ಪ್ರಶಸ್ತಿ ಪ್ರದಾನ ಸಮಾರಂಭವು ಗುರುವಾರ ಆಳ್ವಾಸ್ ಕಾಲೇಜಿನ ಕುವೆಂಪು ಸಭಾಂಗಣದಲ್ಲಿ ನಡೆಯಿತು.
ಯಕ್ಷಗಾನ ಅರ್ಥದಾರಿ ಜಬ್ಬಾರ್ ಸಮೊ ಸಂಪಾಜೆ ಅಭಿನಂದನಾ ಮಾತನಾತುಗಳನ್ನಾಡಿ ಆಧುನಿಕ ಕಾಲಕ್ಕೆ ಅಗತ್ಯವಿರುವ ಶಿಕ್ಷಣ ವ್ಯವಸ್ಥೆಯ ಮೂಲಕನೂತನ ಪ್ರಯೋಗಗಳನ್ನು ಹಳ್ಳಿಗಳಿಗೂ ತಲುಪಿಸುವ ಕಾರ್ಯ ಆಳ್ವಾಸ್ ಸಂಸ್ಥೆಯಿಂದ ಆಗುತ್ತಿದೆ. ಅಲ್ಲದೇ ನಮ್ಮ ಸಂಸ್ಕೃತಿ, ಪರಂಪರೆಯನ್ನು ಮುಂದುವರಿಸಲು ಮೋಹನ್ ಆಳ್ವರು ಸೌಹಾರ್ದಯುತವಾಗಿ ಶ್ರಮಿಸುತ್ತಿದ್ದು ಇವರು ನಾಡಿನ ಅಸ್ಮಿತೆಯನ್ನು ಮೈಗೂಡಿಸಿಕೊಂಡು ವಿಶ್ವವ್ಯಾಪಕವಾಗಿ ಅಂಗೀಕೃತ ಹೊಂದಿರುವ ಓರ್ವ ಮಹಾನ್ ಸಾಧಕ ಎಂದರು.
ನಿವೃತ್ತ ನ್ಯಾಯಮೂತಿ೯ ನಬಿರಸೂಲ್ ಮಹಮದಾಪುರ್ ಅತಿಥಿಯಾಗಿ ಭಾಗವಹಿಸಿ ಮಾತನಾಡಿ ವೇದಿಕೆಯು ಸಮಾಜದಲ್ಲಿರುವ ಒಳ್ಳೆ ವ್ಯಕ್ತಿಗಳನ್ನು ಗುರುತಿಸುವುದು ಮತ್ತು ಸ್ವಸ್ಥ್ಯ ಸಮಾಜವನ್ನು ನಿಮಾ೯ಣ ಮಾಡುವಲ್ಲಿ ಶ್ರಮಿಸುತ್ತಿದೆ. ಕರಾವಳಿ ಭಾಗದಲ್ಲಿ ಒಳ್ಳೆಯ ಜನರಿದ್ದಾರೆ. ಕೆಲವೊಂದು ಸಲ ಕೋಮು ಸಂಘಷ೯ಗಳು ನಡೆಯುತ್ತಿರುವುದು ಬೇಸರದ ಸಂಗತಿ. ಒಟ್ಟಾರೆಯಾಗಿ ಸಮಾಜ ಮಾನವ ಧಮ೯ದಲ್ಲಿ ಉಳಿಯಲಿ ಎಂದು ಶುಭ ಹಾರೈಸಿದರು.
ಮುಸ್ಲಿಂ ಬಾಂಧವ್ಯ ವೇದಿಕೆ ಕನಾ೯ಟಕ ಇದರ ಅಧ್ಯಕ್ಷ ಸುಹೈಲ್ ಅಹಮ್ಮದ್ ಮರೂರ್ ಅಧ್ಯಕ್ಷತೆ ವಹಿಸಿದ್ದರು.
ಪ್ರಶಸ್ತಿಯನ್ನು ಸ್ವೀಕರಿಸಿ ಮಾತನಾಡಿದ ಆಳ್ವರುಮನಸ್ಸು ಹಾಗೂ ಜೀವನ ಪದ್ಧತಿಯನ್ನು ಉತ್ತಮಗೊಳಿಸುವ ಮೂಲಕ ಸೌಹಾರ್ದ ಜೀವನ ನಡೆಸಲು ಸಾಧ್ಯ. ಬದುಕಿನ ಪ್ರತಿ ಹಂತದಲ್ಲೂ ಮೌಲ್ಯಯುತವಾಗಿರುವುದು ಬಹಳ ಅಗತ್ಯ. ತನ್ನ 73 ವರ್ಷಗಳ ಬದುಕಿನ ರೀತಿಗೆ ಸೌಹಾರ್ದ ಸಿರಿ ಪ್ರಶಸ್ತಿ ಸಂದಿರುವುದು ಬಹಳ ಸಂತೋಷದ ವಿಚಾರ ಎಂದರು.
ಕಾರ್ಯಕ್ರಮದಲ್ಲಿ ಆಳ್ವಾಸ್ ಶಿಕ್ಷಣ ಮಹಾವಿದ್ಯಾಲಯದ ವಿದ್ಯಾರ್ಥಿ ಮಹಮ್ಮದ್ ರಿಯಾಝ್ ಅವರ `ತುಳುನಾಡಿನ ಕೋಮು ಸಾಮರಸ್ಯ ಪರಂಪರೆ' ಪುಸ್ತಕವನ್ನು ಬಿಡುಗಡೆಗೊಳಿಸಲಾಯಿತು.
ವೇದಿಕೆಯ ಕಾಯ೯ದಶಿ೯ ಮುಸ್ತಾಕ್ ಹೆನ್ನಾಬೈಲ್, ಗೌರವಾಧ್ಯಕ್ಷ ಕೋಟಾ ಇಬ್ರಾಹಿಂ ಸಾಹೇಬ್, ಅನುಪಮ ಮಾಸಿಕ ಪತ್ರಿಕೆಯ ಸಂಪಾದಕಿ ಶಹನಾಝ್ ಎಂ., ಉಪಸ್ಥಿತರಿದ್ದರು.
ಮಾಜಿ ಅಧ್ಯಕ್ಷ ಅನೀಸ್ ಪಾಷಾ ಸ್ವಾಗತಿಸಿದರು. ಡಾ. ನಿಝಾಮುದ್ದೀನ್ ಕಾರ್ಯಕ್ರಮ ನಿರೂಪಿಸಿ, ಡಾ. ಹಕೀಂ ತೀರ್ಥಹಳ್ಳಿ ವಂದಿಸಿದರು.