
ಕಿಡಿಗೇಡಿಗಳಿಂದ ಲಾಡಿ ಬ್ರಹ್ಮಕಲಶೋತ್ಸವಕ್ಕೆ ಶುಭಕೋರಿದ ಬ್ಯಾನರ್ ಗೆ ಹಾನಿ: ಇಬ್ಬರ ಬಂಧನ
Thursday, February 13, 2025
ಮೂಡುಬಿದಿರೆ: ಲಾಡಿ ಶ್ರೀ ಚತುರ್ಮುಖ ಬ್ರಹ್ಮ ದೇವಸ್ಥಾನದ ಬ್ರಹ್ಮಕಲಶೋತ್ಸವಕ್ಕೆ ಶುಭಕೋರಿ ಅಳವಡಿಸಿರುವ ಬ್ಯಾನರ್ ನ್ನು ಕಿಡಿಗೇಡಿಗಳು ಹರಿದು ಹಾನಿ ಮಾಡಿದ ಪ್ರಕರಣಕ್ಕೆ ಸಂಬಂಧಿದಂತೆ ಇಬ್ಬರನ್ನು ಮೂಡುಬಿದಿರೆ ಪೊಲೀಸರು ಬಂಧಿಸಿದ್ದಾರೆ.
ಪುರಸಭಾ ಸದಸ್ಯ ಇಕ್ಬಾಲ್ ಕರೀಂ ಅವರು ಲಾಡಿ ಶ್ರೀ ಚತುಮು೯ಖ ಬ್ರಹ್ಮ ದೇವಸ್ಥಾನದ ಬ್ರಹ್ಮಕಲಶೋತ್ಸವಕ್ಕೆ ಶುಭಕೋರಿ ಹಾಕಿರುವ ಬ್ಯಾನರ್ ನ್ನು ಹರಿದು ಹಾನಿಗೊಳಿಸಿದ್ದು ಈ ಬಗ್ಗೆ ಮೂಡುಬಿದಿರೆ ಪೊಲೀಸ್ ಠಾಣೆಗೆ ಕರೀಂ ಅವರು ದೂರು ನೀಡಿ ಒಂದು ಗಂಟೆಯಲ್ಲಿ ಕಿಡಿಗೇಡಿಗಳನ್ನು ಬಂಧಿಸಬೇಕೆಂದು ಆಗ್ರಹಿಸಿದ್ದರು.
ತಕ್ಷಣ ಕಾಯ೯ಪ್ರವೃತ್ತರಾದ ಪೊಲೀಸ್ ನಿರೀಕ್ಷಕ ಸಂದೇಶ್ ಪಿಜಿ ಹಾಗೂ ತಂಡವು ಹೊಟೇಲ್ ಕಾಮಿ೯ಕರಾದ ಬಿಹಾರ ಮೂಲದ ಮಹಮ್ಮದ್ ಕಾಮ್ಡು ಝಮಾನ್ ಮತ್ತು ಜಾಖಾ೯ಂಡ್ ನ ಮಹಮ್ಮದ್ ಸಿರಾಜ್ ಅನ್ಸಾರಿ ಎಂಬವರನ್ನು ಬಂಧಿಸಿ ಬೆಂಡೆತ್ತಿದ್ದಾರೆ.
ದೂರು ನೀಡಿ ಗಂಟೆಗೂ ಮೊದಲೇ ಕಿಡಿಗೇಡಿಗಳನ್ನು ಬಂಧಿಸಿರುವುದಕ್ಕೆ ಪೊಲೀಸರ ಕಾಯ೯ಕ್ಕೆ ಶ್ಲಾಘನೆ ವ್ಯಕ್ತವಾಗಿದೆ.