
ಒಳ ಮೀಸಲಾತಿ ಜಾರಿಗೆ ಒತ್ತಾಯಿಸಿ ಅಹವಾಲು ಸಲ್ಲಿಕೆ
Friday, February 7, 2025
ಮಂಗಳೂರು: ನ್ಯಾಯಮೂರ್ತಿ ಹೆಚ್.ಎನ್. ನಾಗಮೋಹನ್ ದಾಸ್ ಏಕ ಸದಸ್ಯ ವಿಚಾರಣಾ ಆಯೋಗ ಬೆಂಗಳೂರು ಅವರಿಗೆ ಕರಾವಳಿ ಆದಿ ಜಾಂಬವ ಅಭಿವೃದ್ಧಿ ಸಮಿತಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ವತಿಯಿಂದ ಒಳ ಮೀಸಲಾತಿ ಜಾರಿಗೆ ಒತ್ತಾಯಿಸಿ ಅಹವಾಲು ಸಲ್ಲಿಸಲಾಯಿತು.
ಅಧ್ಯಕ್ಷ ಅಶೋಕ್ ಪೂಜಾರಿ, ಉಪಾಧ್ಯಕ್ಷ ವಿಠಲ್ ಎನ್.ಎಂ., ಪ್ರಧಾನ ಕಾರ್ಯದರ್ಶಿಯಾದ ರಮೇಶ್ ಹಂಗರಗಿ, ಶರಣು ಬಿಸ್ನಾಳ್, ಹುಲಿಗೇಶ್ ಎಂ., ಸಿದ್ದು ಆರ್., ಶಿವಾನಂದ ಆರ್.ಕೆ., ಹೈ ಕೋರ್ಟ್ ನ್ಯಾಯವಾದಿಗಳಾದ ಟಿ.ಎಂ. ಮಂಜುನಾಥ್, ಮಹಿಳಾ ನ್ಯಾಯವಾದಿ ಅರುಣ ನರಸಾಪುರ್ ಮತ್ತಿತರರು ಉಪಸ್ಥಿತರಿದ್ದರು.