
ಫೆ.16 ರವರೆಗೆ ಡರ್ಟ್ ಪ್ರಿಕ್ಸ್ ಕಾರು ರೇಸ್, ಅಟೊ ಎಕ್ಸ್‌ಪೊ
ಮಂಗಳೂರು: ಮಂಗಳೂರು ಮೋಟರ್ ಸ್ಪೋರ್ಟ್ಸ್ ಅಸೋಸಿಯೇಶನ್ ಹಾಗೂ ಅಬ್ಲೇಝ್ ಮೋಟರ್‌ಸ್ಪೋರ್ಟ್ಸ್ ಕ್ಲಬ್ ವತಿಯಿಂದ ನಗರದಲ್ಲಿ ಫೆ.14ರಿಂದ 16ರ ವರೆಗೆ ಡರ್ಟ್ ಪ್ರಿಕ್ಸ್ 8 ಕಾರ್ ರೇಸ್ ಹಾಗೂ ಅಟೊ ಎಕ್ಸ್‌ಪೊ ಹಮ್ಮಿಕೊಳ್ಳಲಾಗಿದೆ.
ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅಸೋಸಿಯೇಶನ್ ಅಧ್ಯಕ್ಷ ಸುಧೀರ್ ಬಿ.ಕೆ., ಈ ಕಾರ್ ರೇಸ್ ಹಲವು ವಿಭಾಗಗಳಲ್ಲಿ ನಡೆಯಲಿದ್ದು 150ರಷ್ಟು ಮಂದಿ ರಾಷ್ಟ್ರದ ವಿವಿಧೆಡೆಯಿಂದ ಭಾಗವಹಿಸಲಿದ್ದಾರೆ ಎಂದರು.
ಫೆ.14ರಂದು ಫಿಜಾ ಬ ನೆಕ್ಸಸ್ ಮಾಲ್‌ನಲ್ಲಿ ಸಂಜೆ 3.30ಕ್ಕೆ ಉದ್ಘಾಟನೆ ನಡೆಯಲಿದ್ದು, ತಂಡಗಳ ಪರಿಚಯ, ರೇಸ್‌ಕಾರು, ಬಕ್ ಪ್ರದರ್ಶನ, ಮೋಟರ್ ಸ್ಪೋರ್ಟ್ಸ್ ತಜ್ಞರು, ಗಣ್ಯರು ಪಾಲ್ಗೊಳ್ಳಲಿದ್ದಾರೆ. ಫೆ.15ರಂದು ನಗರದ ಗೋಲ್ಡ್‌ಫಿಂಚ್ ಸಿಟಿಯಲ್ಲಿ ಅಟೊ ಎಕ್ಸ್‌ಪೊ ಹಾಗೂ ತಜ್ಞರಿಂದ ರೇಸ್ ತರಬೇತಿ ಶಾಲೆ ನಡೆಯಲಿದೆ.
ಫೆ.16ರಂದು ಬೆಳಗ್ಗೆ 8ರಿಂದಲೇ ಕಾರುಗಳ ಡರ್ಟ್ ಟ್ರ್ಯಾಕ್ ರೇಸ್ ನಡೆಯಲಿದ್ದು, 3000 ಸಿಸಿ, 1600 ಸಿಸಿ, 1400 ಸಿಸಿ, 800 ಸಿಸಿ ಸಾಮರ್ಥ್ಯದ ವಿವಿಧ ವಿಭಾಗಗಳಲ್ಲಿ ಹಮ್ಮಿಕೊಳ್ಳಲಾಗಿದೆ. ದೇಶದ ವಿವಿಧೆಡೆಗಳಿಂದ ಮುಖ್ಯವಾಗಿ ಮೇಘಾಲಯ, ಬೆಂಗಳೂರು, ಗೋವಾ, ಮೈಸೂರು, ಚಿಕ್ಕಮಗಳೂರು ಮುಂತಾದೆಡೆಯಿಂದ ಕಾರ್ ರೇಸ್ ಪ್ರಿಯರು ಆಗಮಿಸುವರು ಎಂದು ಅಟೊ ಬ್ಲೇಝ್‌ನ ಧನುಶ್ ತಿಳಿಸಿದರು.
1.5 ಕಿ.ಮೀ ಉದ್ದದ ಲೂಪ್ ಟ್ರ್ಯಾಕ್ ಅನ್ನು ಇದಕ್ಕಾಗಿಯೇ ಗೋಲ್ಡ್ ಫಿಂಚ್ ಸಿಟಿಯಲ್ಲಿ ನಿರ್ಮಿಸಲಾಗುತ್ತಿದೆ. ಇದರಲ್ಲಿ ರೇಸ್ ನಡೆಯಲಿದೆ. ಅತಿ ವೇಗದ ಚಾಲಕ, ಉತ್ತಮ ಚಾಲಕ ಪ್ರಶಸ್ತಿಗಳೊಂದಿಗೆ ಟೀಂ ಟ್ರೋಫಿ, ಕರಾವಳಿಯ ಉತ್ತಮ ಚಾಲಕರಿಗಾಗಿ ಕಿಂಗ್ ಆಫ್ ಕೋಸ್ಟ್ ಮತ್ತಿತರ ಬಹುಮಾನಗಳನ್ನು ಆಯೋಜಿಸಲಾಗಿದೆ. 20ಕ್ಕು ಅಽಕ ವಿಭಾಗಗಳಲ್ಲಿ ರೇಸ್ ನಡೆಯಲಿದೆ ಎಂದರು.
ಮಂಗಳೂರಿನ ರೇಸರ್ ಆರೂರು ವಿಕ್ರಂ ರಾವ್, ಅಟೊ ಬ್ಲೇಝ್‌ನ ಪೂರ್ಣಚಂದ್ರ ಉಪಸ್ಥಿತರಿದ್ದರು.