
ರಾಜ್ಯದ ಮೊದಲ ಪಿಡಬ್ಲ್ಯೂಡಿ ಕಾಂಪ್ಲೆಕ್ಸ್ ಪುತ್ತೂರಲ್ಲಿ ನಿರ್ಮಾಣ
Tuesday, February 18, 2025
ಮಂಗಳೂರು: ಪುತ್ತೂರಿನ ಬಸ್ ನಿಲ್ದಾಣ ಬಳಿ ರಾಜ್ಯದ ಮೊದಲ ಬೃಹತ್ ಪಿಡಬ್ಲ್ಯುಡಿ ಕಾಂಪ್ಲೆಕ್ಸ್ ನಿರ್ಮಾಣಕ್ಕೆ ಲೋಕೋಪಯೋಗಿ ಇಲಾಖೆ ಸಚಿವ ಸತೀಶ್ ಜಾರಕಿಹೊಳಿ ಒಪ್ಪಿಗೆ ಸೂಚಿಸಿದರು.
ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಶಾಸಕ ಅಶೋಕ್ ಕುಮಾರ್ ರೈ ಮನವಿಗೆ ಸಚಿವರು ಸೂಕ್ತ ಸ್ಪಂದನೆ ನೀಡಿದರು.
ಪುತ್ತೂರಿನ ಬಸ್ ನಿಲ್ದಾಣದ ಬಳಿ ಲೋಕೋಪಯೋಗಿ ಇಲಾಖೆಗೆ ಸೇರಿದ ಜಾಗವಿದ್ದು, ಅದು ಬಹಳ ವರ್ಷದಿಂದ ಹಾಗೇ ಉಳಿದುಕೊಂಡಿದೆ. ಇದರಲ್ಲಿ ಕಮರ್ಷಿಯಲ್ ಕಾಂಪ್ಲೆಕ್ಸ್ ನಿರ್ಮಾಣವಾದಲ್ಲಿ ಇಲಾಖೆಗೂ ಹಣಕಾಸಿನ ನೆರವು ಆಗಲಿದ್ದು, ಸರ್ಕಾರಕ್ಕೂ ಪ್ರಯೋಜನವಾಗಲಿದೆ ಎಂದು ಶಾಸಕರು ಗಮನಕ್ಕೆ ತಂದರು. ಈ ಬಗ್ಗೆ ಕೂಡಲೇ ಕ್ರಮಕೈಗೊಳ್ಳುವಂತೆ ಸಚಿವರು ಇಲಾಖೆ ಎಂಜಿನಿಯರ್‌ಗೆ ಸೂಚನೆ ನೀಡಿದರು. ಇದಲ್ಲದೆ, ಪುತ್ತೂರಿಗೆ ಎರಡು ಹಂತದಲ್ಲಿ ರಿಂಗ್ ರಸ್ತೆ ನಿರ್ಮಾಣಕ್ಕೆ ಅನುದಾ ನ, ಹಾರಾಡಿಯಲ್ಲಿ ರೈಲ್ವೆ ಅಂಡರ್‌ಪಾಸ್ ಅಗಲೀಕರಣಕ್ಕೆ ಅನುದಾನ, ಪುತ್ತೂರಲ್ಲಿ ಹೆಲಿಪ್ಯಾಡ್ ಅಭಿವೃದ್ಧಿಗೆ ನೆರವು ನೀಡುವುದಾಗಿ ಸಚಿವರು ತಿಳಿಸಿದರು.