
ನ್ಯಾಯಾಧೀಶರ ಮನೆಯಲ್ಲಿ ಕಳವಿಗೆ ಯತ್ನ
Wednesday, February 5, 2025
ಮಂಗಳೂರು: ಕಿನ್ನಿಗೋಳಿ ಪಕ್ಷಿಕೆರೆ ಸಮೀಪದ ಕೊಯ್ಕುಡೆ ಬಳಿ ನ್ಯಾಯಾಧೀಶರ ಮನೆಗೆ ನುಗ್ಗಿದ ಕಳ್ಳರು ಕಳ್ಳತನಕ್ಕೆ ಯತ್ನಿಸಿ ಏನೂ ಸಿಗದೆ ಬರಿಗೈ ಯಲ್ಲಿ ವಾಪಸಾಗಿದ್ದಾರೆ
ಬೆಂಗಳೂರಿನಲ್ಲಿ ನ್ಯಾಯಾಧೀಶರಾಗಿರುವ ಮುಮ್ತಾಜ್ ರವರು ಮೂಲತಃ ಹಳೆಯಂಗಡಿ ಕಿನ್ನಿಗೋಳಿ ಹೆದ್ದಾರಿಯ ಪಕ್ಷಿಕೆರೆ ಕೊಯ್ಕುಡೆ ಬಳಿಯ "ಅತಿಜಾ"ಬಹು ಮಹಡಿ ಕಟ್ಟಡದಲ್ಲಿ ಮನೆಯಲ್ಲಿ ಯಾರೂ ಇಲ್ಲದ ವೇಳೆ ಈ ಘಟನೆ ನಡೆದಿದೆ
ಕಳ್ಳರು ಮನೆಯ ಎದುರಿನ ಬಾಗಿಲ ಲಾಕ್ ನ್ನು ಭಾರವಾದ ಸಾಧನದಿಂದ ಒಡೆದು ಒಳಗೆ ನಾಲ್ಕು ಕಪಾಟಿನಲ್ಲಿರುವ ಬಟ್ಟೆ ಬರೆಗಳನ್ನು ಎಳೆದು ಚಲ್ಲಾ ಪಿಲ್ಲಿ ಮಾಡಿ ಜಾಲಾಡಿದ್ದು ಏನೂ ಸಿಗದೆ ಬರಿಗೈಯಲ್ಲಿ ವಾಪಾಸಾಗಿದ್ದಾರೆ ಕಳ್ಳರು ಮನೆಯ ಸಿಸಿ ಕ್ಯಾಮೆರಾ ವನ್ನು ಬೇರೆ ಕಡೆಗೆ ತಿರುಗಿಸಿದ್ದು ವ್ಯವಸ್ಥಿತ ರೀತಿಯಲ್ಲಿ ಕಳ್ಳತನಕ್ಕೆ ಯತ್ನಿಸಿದ್ದಾರೆ ನ್ಯಾಯಾಧೀಶರಾದ ಮುಮ್ತಾಜ್ ರವರು ಬೆಂಗಳೂರಿನಲ್ಲಿ ವಾಸ್ತವ್ಯವಿದ್ದು ೧೫ ದಿನಗಳಿಗೊಮ್ಮೆ ಮನೆ ಕಡೆ ಬಂದು ಹೋಗುತ್ತಿದ್ದರು ಎಂದು ಸ್ಥಳೀಯರು ತಿಳಿಸಿದ್ದಾರೆ.