
ಚಾಲಕನಿಗೆ ಅಪಸ್ಮಾರ: ಡಿವೈಡರ್ ಏರಿದ ಲಾರಿ
Wednesday, February 12, 2025
ಮಂಗಳೂರು:ಲಾರಿ ಚಲಾಯಿಸುತ್ತಿದ್ದ ವೇಳೆ ಚಾಲಕನಿಗೆ ಮೂರ್ಛೆ ರೋಗ(ಫಿಟ್ಸ್) ಕಾಣಿಸಿಕೊಂಡಿದ್ದರಿಂದ ಲಾರಿಯು ಡಿವೈಡರ್ ಮೇಲೇರಿ ಸುಮಾರು 100 ಮೀ. ದೂರ ಚಲಿಸಿ ನಿಂತ ಘಟನೆ ರಾಷ್ಟ್ರೀಯ ಹೆದ್ದಾರಿ 75ರ ಬಂಟ್ವಾಳ ತುಂಬೆ ಸಮೀಪ ಇಂದು ಬೆಳಗ್ಗೆ ನಡೆದಿದೆ.
ಬೆಳಗ್ಗೆ 7.45ರ ಸುಮಾರಿಗೆ ಈ ಘಟನೆ ನಡೆದಿದೆ. ಬೆಂಗಳೂರಿನ ಕಡೆಯಿಂದ ಮಂಗಳೂರಿನತ್ತ ತೆರಳುತ್ತಿದ್ದ ಲಾರಿ ತುಂಬೆ ಬಳಿ ತಲುಪಿದಾಗ ಚಾಲಕನಿಗೆ ಫಿಟ್ಸ್ ಸಮಸ್ಯೆ ಕಾಣಿಸಿಕೊಂಡಿದೆ. ಇದರಿಂದ ನಿಯಂತ್ರಣ ತಪ್ಪಿದ ಲಾರಿ ರಾಷ್ಟ್ರೀಯ ಹೆದ್ದಾರಿಯ ಡಿವೈಡರ್ ಮೇಲೇರಿದೆ. ಲಾರಿಯು ಡಿವೈಡರ್ ಮೇಲೆ ಸುಮಾರು 100 ಮೀ. ದೂರ ಚಲಿಸಿ ನಿಂತಿದೆ. ಈ ವೇಳೆ ರಸ್ತೆ ಸೂಚನಾ ಫಲಕಕ್ಕೆ ಹಾನಿಯಾಗಿರುವುದು ಬಿಟ್ಟರೆ ಉಳಿದಂತೆ ಯಾವುದೇ ಹಾನಿ ಸಂಭವಿಸಿಲ್ಲ. ಲಾರಿಯ ಸೀಟಿನಲ್ಲಿ ಕುಸಿದ ಸ್ಥಿತಿಯಲ್ಲಿದ್ದ ಚಾಲಕನನ್ನು ಗಮನಿಸಿದ ಸ್ಥಳೀಯರು ಆತನನ್ನು ತುಂಬೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ.