ಗಂಗೆ-ಯಮುನೆ ಹಾಗೂ ಗುಪ್ತಗಾಮಿನಿಯಾಗಿ ಪ್ರವಹಿಸುವ ಸರಸ್ವತಿಯು ಸಂಧಿಸುವ ತ್ರಿವೇಣಿ ಸಂಗಮದಲ್ಲಿ ಮಿಂದೆದ್ದದ್ದು ನನ್ನ ಬದುಕಿನ ಅವಿಸ್ಮರಣೀಯ ಘಳಿಗೆ: ಶಾಸಕ ಕಾಮತ್

ಗಂಗೆ-ಯಮುನೆ ಹಾಗೂ ಗುಪ್ತಗಾಮಿನಿಯಾಗಿ ಪ್ರವಹಿಸುವ ಸರಸ್ವತಿಯು ಸಂಧಿಸುವ ತ್ರಿವೇಣಿ ಸಂಗಮದಲ್ಲಿ ಮಿಂದೆದ್ದದ್ದು ನನ್ನ ಬದುಕಿನ ಅವಿಸ್ಮರಣೀಯ ಘಳಿಗೆ: ಶಾಸಕ ಕಾಮತ್


ಮಂಗಳೂರು: ಸಹಸ್ರಾರು ಸಾಧು-ಸಂತರ, ಮಹಾನ್ ಯೋಗಿಗಳ, ಶ್ರೇಷ್ಠ ತಪಸ್ವಿಗಳ ಆಶೀರ್ವಾದದಿಂದ ವೇದಭೂಮಿ ಪ್ರಯಾಗ್ ರಾಜ್ ನಲ್ಲಿ ನಡೆಯುತ್ತಿರುವ ಮಹಾಕುಂಭಮೇಳದಲ್ಲಿ ಭಾಗವಹಿಸಿ ಗಂಗೆ-ಯಮುನೆ ಹಾಗೂ ಗುಪ್ತಗಾಮಿನಿಯಾಗಿ ಪ್ರವಹಿಸುವ ಸರಸ್ವತಿಯು ಸಂಧಿಸುವ ತ್ರಿವೇಣಿ ಸಂಗಮದಲ್ಲಿ ಮಿಂದೆದ್ದದ್ದು ನನ್ನ ಬದುಕಿನ ಅವಿಸ್ಮರಣೀಯ ಘಳಿಗೆ, ಹರ್ ಹರ್ ಗಂಗೆ ಎಂದು ಶಾಸಕ ವೇದವ್ಯಾಸ ಕಾಮತ್ ಅವರು ಗಂಗೆಗೆ ನಮಿಸಿದರು.


ಕಾಶೀ ಮಠಾಧೀಶರಾದ ಪರಮ ಪೂಜ್ಯ ಶ್ರೀಮದ್ ಸಂಯಮೀಂದ್ರ ತೀರ್ಥ ಸ್ವಾಮೀಜಿಯವರ ದಿವ್ಯ ಉಪಸ್ಥಿತಿಯಲ್ಲೇ ಸಂಗಮದ ಪವಿತ್ರ ಸ್ನಾನಕ್ಕೆ ಅವಕಾಶ ಒದಗಿ ಬಂದದ್ದು ನಮ್ಮ ಪಾಲಿನ ಇನ್ನೊಂದು ಸೌಭಾಗ್ಯ. ಇಂತಹ ಮಹಾಕುಂಭಮೇಳವನ್ನು ಅದ್ಭುತವಾಗಿ ಆಯೋಜನೆ ಮಾಡಿ, ಸಮಸ್ತ ದೇಶದ ಭಕ್ತಕೋಟಿಯನ್ನು ಒಗ್ಗೂಡಿಸಿದ್ದು ಮಾತ್ರವಲ್ಲದೇ, ಇಡೀ ಜಗತ್ತನ್ನೇ ಸನಾತನ ಧರ್ಮದ ಕಡೆಗೆ ತಿರುಗಿ ನೋಡುವಂತೆ ಮಾಡಿದ ಉತ್ತರ ಪ್ರದೇಶದ ಮುಖ್ಯಮಂತ್ರಿಗಳಾದ ಯೋಗಿ ಆದಿತ್ಯನಾಥ್ ಜೀ ಹಾಗೂ ದೇಶದ ಹೆಮ್ಮೆಯ ಪ್ರಧಾನಿಗಳಾದ ಶ್ರೀ ನರೇಂದ್ರ ಮೋದಿಜಿ ಯವರಿಗೆ ದೇಶವಾಸಿಗಳ ಪರವಾಗಿ ಶತಕೋಟಿ ನಮನಗಳು ಎಂದು ಶಾಸಕರು ಹರ್ಷ ವ್ಯಕ್ತಪಡಿಸಿದರು.



Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article