
ಟ್ರಕ್ ವಾಹನ ಹಸ್ತಾಂತರ
Monday, February 3, 2025
ಮಂಗಳೂರು: ಸ್ವಚ್ಛ ಭಾರತ್ ಮಿಷನ್ (ಗ್ರಾ) ಯೋಜನೆಯಡಿ ನಿರ್ಮಾಣವಾದ 7 ಟನ್ ಒಣ ತ್ಯಾಜ್ಯ ವಿಂಗಡಿಸುವ ಸಾಮಾರ್ಥ್ಯದ ಪುತ್ತೂರು ತಾಲೂಕಿನ ಕೆದಂಬಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ನಿರ್ಮಾಣವಾದ ಎಂಆರ್‌ಎಫ್ ಘಟಕಕ್ಕೆ ಕೆನರಾ ಬ್ಯಾಂಕ್ ಸಿಎಸ್‌ಆರ್ ನಿಧಿಯಡಿ ಟ್ರಕ್ ವಾಹನವನ್ನು ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಆನಂದ ಕೆ. ಅವರಿಗೆ ಕೆನರಾ ಬ್ಯಾಂಕ್ ಶಾಖೆಯ ಜನರಲ್ ಮಾನೇಜರ್ ಸುಧಾಕರ್ ಕೊಟ್ಟಾರಿ ಹಸ್ತಾಂತರಿಸಿದರು.
ಎಲ್‌ಡಿಎಂ ಕವಿತಾ ಶೆಟ್ಟಿ, ಸ್ವಚ್ಛ ಭಾರತ್ ಮಿಷನ್ (ಗ್ರಾ) ಜಿಲ್ಲಾ ಸಮಾಲೋಚಕರು ಉಪಸ್ಥಿತರಿದ್ದರು.