
ಅಶೋಕ್ ಹೇಳಿಕೆಗೆ ತಲೆ, ಬಾಲ ಇಲ್ಲ: ಸಚಿವ ದಿನೇಶ್ ಗುಂಡೂರಾವ್
Saturday, February 15, 2025
ಮಂಗಳೂರು: ನವೆಂಬರ್‌ನಲ್ಲಿ ಸರಕಾರ ಪತನವಾಗುತ್ತೆ ಎಂಬ ಆರ್.ಅಶೋಕ್ ಭವಿಷ್ಯವಾಣಿ ನುಡಿದಿದ್ದಾರೆ. ಅವರ ಹೇಳಿಕೆಗೆ ತಲೆನೂ ಇಲ್ಲ, ಬಾಲನೂ ಇಲ್ಲ. ಅವರ ಪಕ್ಷದವರೇ ಅವರನ್ನು ವಿರೋಧ ಪಕ್ಷದ ನಾಯಕ ಸ್ಥಾನದಿಂದ ಇಳಿಸಲು ಹೊರಟಿದ್ದಾರೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.
ನಗರದಲ್ಲಿ ಇಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ವಿರೋಧ ಪಕ್ಷದ ನಾಯಕರು ಹೇಳಿಕೆ ಕೊಡಬೇಕು ಎಂದು ಕೊಡುತ್ತಿದ್ದಾರೆ ಅವರ ಪಕ್ಷದಲ್ಲೇ ಅವರಿಗೆ ಯಾವ ರೀತಿ ಪ್ರಾತಿನಿಧ್ಯ ಸಿಗುತ್ತಿದೆ ಎಂದು. ಗೊತ್ತಿಲ್ಲ. ಆರ್. ಅಶೋಕ್ ಎಲ್ಲೂ ತೂಕವಾಗಿ ಮಾತನಾಡುತ್ತಿಲ್ಲ ಸುಮ್ಮನೆ ಹಗುರವಾಗಿ ಏನೇನು ಟೀಕೆ ಮಾಡುತ್ತಾರೆ ಡಿಸೆಂಬರ್, ನವೆಂಬರ್ ಇವೆಲ್ಲ ಯಾರೂ ಒಪ್ಪುವ ಮಾತಲ್ಲ
ಮುಂದೆ ಚುನಾವಣೆಯಾಗಲಿ ಯಾರು ಅಧಿಕಾರಕ್ಕೆ ಬರುತ್ತಾರೆ ಎಂದು ಅವಾಗ ನೋಡೋಣ ಎಂದರು.