
ಕಾವೂರು ವರ್ಡ್ ನಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ಡಾ. ಭರತ್ ಶೆಟ್ಟಿ ಗುದ್ದಲಿ ಪೂಜೆ
Wednesday, February 26, 2025
ಮಂಗಳೂರು: ಕಾವೂರು 18 ವಾರ್ಡ್ ವ್ಯಾಪ್ತಿಯಲ್ಲಿ ಮಂಗಳೂರು ಮಹಾನಗರ ಪಾಲಿಕೆಯ ಅನುದಾನದಲ್ಲಿ ಸುಮಾರು 57 ಲಕ್ಷ ರೂ. ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳಾದ ಆಕಾಶಭವನ ಮುಖ್ಯರಸ್ತೆ ಡಾಮರು ಅಭಿವೃದ್ಧಿ, ಸೂಜಿಕಲ್ ಗುಡ್ಡೆ ಒಳಚರಂಡಿಯ ಅಭಿವೃದ್ಧಿ ಮತ್ತು ಕಾಫಿಗುಡ್ಡೆಯಲ್ಲಿ ನೂತನವಾಗಿ ನಿರ್ಮಾಣವಾಗಿರುವ ಸರಕಾರಿ ಬಾವಿಯ ಲೋಕಾರ್ಪಣೆಯನ್ನು ಶಾಸಕ ಡಾ. ವೈ. ಭರತ್ ಶೆಟ್ಟಿ ನೆರವೇರಿಸಿದರು.
ಮೇಯರ್ ಮನೋಜ್ ಕುಮಾರ್, ಮ.ನ.ಪಾ. ಸದಸ್ಯೆ ಗಾಯತ್ರಿ ಎ. ರಾವ್ ಮಂಗಳೂರು ಉತ್ತರ ಮಂಡಲ ಉಪಾಧ್ಯಕ್ಷ ಆನಂದ, ಪಾಂಗಳ ವಾರ್ಡ್ ಬಿಜೆಪಿ ಅಧ್ಯಕ್ಷ ಕೊರಗಪ್ಪ ಶೆಟ್ಟಿ ಆಕಾಶಭವನ, ಕಾರ್ಯದರ್ಶಿ ಜಗದೀಶ್ ಅಂಚನ್, ಬಿಜೆಪಿ ಉತ್ತರಮಂಡಲ ಯುವ ಮೋರ್ಚಾ ಅಧ್ಯಕ್ಷ ರಕ್ಷಿತ್ ಪೂಜಾರಿ, ಬೂತ್ ಅಧ್ಯಕ್ಷರುಗಳಾದ ದಿವಾಕರ್ ಪೂಜಾರಿ, ಸಚಿನ್ ಶೆಟ್ಟಿ, ಕಾರ್ಯದರ್ಶಿಗಳಾದ ಪ್ರಶಾಂತ್ ಪೂಜಾರಿ, ಸಂದೀಪ್ ಶೆಟ್ಟಿ ವಾರ್ಡ್ ಪ್ರಮುಖರಾದ ಜಯ ನಾಯ್ಕ್, ಚೇತನ್ ಕುಲಾಲ್, ಸ್ಥಳೀಯ ನಿವಾಸಿಗಳು, ನಾಗರಿಕರು, ಬಿಜೆಪಿ ಕಾರ್ಯಕರ್ತರು ಉಪಸ್ಥಿತರಿದ್ದರು.