
‘ಸುಸ್ಥಿರ ಮಾಸಿಕ ಆರೈಕೆಯನ್ನು ಸಬಲೀಕರಿಸುವಿಕೆ’ ಕಾರ್ಯಗಾರ
Tuesday, February 25, 2025
ಮಂಗಳೂರು: ಸೇಂಟ್ ಅಲೋಶಿಯಸ್ (ಡೀಮ್ಡ್ ಟು ಬಿ ಯೂನಿವರ್ಸಿಟಿ)ನ ಪತ್ರಿಕೋದ್ಯಮ ಮತ್ತು ಸಮಾಜ ಮಾಧ್ಯಮ ಸ್ನಾತಕೋತ್ತರ ಅಧ್ಯಯನ ವಿಭಾಗ, ಮಂಗಳೂರಿನ ಸ್ವರ್ಣಪ್ರಾಣ ವೆಲ್ಬೀಯಿಂಗ್ ಇನ್ಸ್ಟಿಟ್ಯೂಟ್ ಸಹಯೋಗದೊಂದಿಗೆ ಫೆ.25 ರಂದು ‘ಸುಸ್ಥಿರ ಮಾಸಿಕ ಆರೈಕೆಯನ್ನು ಸಬಲೀಕರಿಸುವಿಕೆ’ ಎಂಬ ಕಾರ್ಯಗಾರ ಮಂಗಳೂರಿನ ಡೊಂಗರ್ಕೆರಿಯಲ್ಲಿರುವ ಕನರಾ ಹೈಸ್ಕೂಲಿನಲ್ಲಿ ನಡೆಸಿತು.
ಮುಖ್ಯ ಅತಿಥಿಯಾಗಿ ಶಿಲ್ಪಾ ಶಾಸ್ತ್ರಿ ಭಾಗವಹಿಸಿ ಮಾತನಾಡಿ, ಪರಿಸರ ಸ್ನೇಹಿ ಮಾಸಿಕ ಉತ್ಪನ್ನಗಳು, ಸರಿಯಾದ ಸ್ಯಾನಿಟರಿ ವಿಲೇವಾರಿ ವಿಧಾನಗಳು ಮತ್ತು ಮಾಸಿಕತೆಯ ಕಳಂಕವನ್ನು ಮುರಿಯುವ ಬಗ್ಗೆ ತಿಳಿಸಿದರು.
ಸೇಂಟ್ ಅಲೋಶಿಯಸ್ (ಡೀಮ್ಡ್ ಟು ಬಿ ಯೂನಿವರ್ಸಿಟಿ)ನ ಪತ್ರಿಕೋದ್ಯಮ ಮತ್ತು ಸಮಾಜ ಮಾಧ್ಯಮ ವಿಭಾಗದ ವಿದ್ಯಾರ್ಥಿಗಳಾದ ತಪಸ್ವಿ ವಾಚನಿ ಮತ್ತು ನೇಹಾ ಅವರು, ಭಾವ್ಯ ಶೆಟ್ಟಿ ಅವರ ಮಾರ್ಗದರ್ಶನದಲ್ಲಿ ಈ ಕಾರ್ಯಕ್ರಮವನ್ನು ಸಂಘಟಿಸಿದರು.
ರೀಮಾ ಕಾರ್ಯಕ್ರಮವನ್ನು ನಿರ್ವಹಿಸಿದರು. ನೇಹಾ ಸ್ವಾಗತಿಸಿ, ತಪಸ್ವಿ ವಾಚನಿ ವಂದಿಸಿದರು. ಕಾರ್ಯಕ್ರಮದಲ್ಲಿ 6ನೇ ತರಗತಿಯಿಂದ 9ನೇ ತರಗತಿಯ 90 ವಿದ್ಯಾರ್ಥಿಗಳು ಭಾಗವಹಿಸಿದ್ದರು.