
ಗಡುವಾಡು ಶ್ರೀ ದೈವರಾಜ ಕೋರ್ದಬ್ಬು ದೈವಸ್ಥಾನದ ಮೇಲ್ಛಾವಣೆಯ ಕಾಮಗಾರಿಗೆ ಶಾಸಕ ಕಾಮತ್ ಗುದ್ದಲಿಪೂಜೆ
Friday, February 21, 2025
ಮಂಗಳೂರು: ಮಂಗಳೂರು ನಗರ ದಕ್ಷಿಣ ವಿಧಾನಸಭಾ ಕ್ಷೇತ್ರದ ಪದವು ಪೂರ್ವ 36ನೇ ವಾರ್ಡಿನ ಬೂತ್ ಸಂಖ್ಯೆ 37ರ ಗಡುವಾಡು ಶ್ರೀ ದೈವರಾಜ ಕೋರ್ದಬ್ಬು ದೈವಸ್ಥಾನದ ಮೇಲ್ಛಾವಣೆಯ ಕಾಮಗಾರಿಯ ಗುದ್ದಲಿ ಪೂಜೆಯನ್ನು ಶಾಸಕ ವೇದವ್ಯಾಸ ಕಾಮತ್ ಅವರ ನೇತೃತ್ವದಲ್ಲಿ ನೆರವೇರಿಸಲಾಯಿತು.
ಬಳಿಕ ಅವರು ಮಾತನಾಡಿ, ಇಲ್ಲಿಗೊಂದು ಸುಸಜ್ಜಿತ ಮೇಲ್ಛಾವಣೆಯ ಅಗತ್ಯವಿದ್ದು ಇದೀಗ ಶಾಸಕರ ಅನುದಾನದಲ್ಲಿ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗಿದೆ. ಇದರ ಸದುಪಯೋಗ ಶ್ರೀ ಕ್ಷೇತ್ರಕ್ಕೆ ಬರುವ ಸಕಲ ಭಕ್ತಾಧಿಗಳಿಗೆ ಸಿಗಲಿ ಎಂಬುದೇ ಆಶಯ ಎಂದು ಹೇಳಿದರು.
ಈ ಸಂದರ್ಭದಲ್ಲಿ ಮಹೇಶ್ ಜೋಗಿ, ಕಿರಣ್ ರೈ, ಸುಜನ್ ದಾಸ್ ಕುಡುಪು, ಹರಿಣಿ ಪ್ರೇಮ್, ಅಶ್ವಿನ್ ಕುಲಶೇಖರ, ಚೇತನ್, ಧನಂಜಯ್, ಸುಶಾಂತ್ ಪೂಜಾರಿ, ಮೊದಲಾದವರು ಉಪಸ್ಥಿತರಿದ್ದರು