
15 ದಿನಗಳ ಕೃತಕ ಆಭರಣ ತಯಾರಿಕೆ ತರಬೇತಿ ಸಮಾರೋಪ
ಮೂಡುಬಿದಿರೆ: ಬ್ಯಾಂಕ್ ಒಫ್ ಬರೋಡ ಪ್ರವರ್ತಿತ, ವಿಜಯ ಗ್ರಾಮೀಣ ಅಭಿವೃದ್ಧಿ ಪ್ರತಿಷ್ಟಾನ (ರಿ.) ಮಂಗಳೂರು, ಭಾರತೀಯ ವಿಕಾಸ ಟ್ರಸ್ಟ್ ಮಣಿಪಾಲ ಹಾಗೂ ವಿಚೀಸ್ ಕೌಶಲ್ಯ ತರಬೇತಿ ಕೇಂದ್ರ ಮೂಡಬಿದ್ರಿ ಇವುಗಳ ಸಹಯೋಗದಲ್ಲಿ ವಿಚಿಸ್ ಕೌಶಲ್ಯ ತರಬೇತಿ ಕೇಂದ್ರ ಮೂಡುಬಿದಿರೆ ಇಲ್ಲಿ ಕಳೆದ 15 ದಿನಗಳಿಂದ ನಡೆಯುತ್ತಿದ್ದ ಕೃತಕ ಆಭರಣ ತಯಾರಿ ತರಬೇತಿಯು ಬುಧವಾರ ಸಮಾಪ್ತಿಗೊಂಡಿತು.
ವಿಜಯ ಗ್ರಾಮೀಣ ಅಭಿವೃದ್ಧಿ ಪ್ರತಿಷ್ಠಾನ (ರಿ) ಮಂಗಳೂರು ಇದರ ಮುಖ್ಯ ಕಾರ್ಯನಿವ೯ಹಣಾಧಿಕಾರಿ ವಿಶ್ವನಾಥ್ ರೈ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ ಮಹಿಳೆಯರು ಇಂತಹ ತರಬೇತಿ ಪಡೆದು ಬ್ಯಾಂಕ್ ಹಾಗೂ ಸರ್ಕಾರದ ಯೋಜನೆಗಳ ಪ್ರಯೋಜನ ಪಡೆದು ಮಾರುಕಟ್ಟೆಯಲ್ಲಿ ತಮ್ಮ ಉತ್ಪನ್ನಗಳಿಗೆ ಬೇಡಿಕೆ ಹೆಚ್ಚಿಸಿ ಆದಾಯ ದ್ವಿಗುಣಗೊಳಿಸಲು ಕರೆ ನೀಡಿದ ಅವರು ತರಬೇತಿ ಪಡೆದ ಮಹಿಳೆಯರ ಕೌಶಲ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.
ಭಾರತೀಯ ವಿಕಾಸ ಟ್ರಸ್ಟ್ ಮಣಿಪಾಲ ಇದರ ಕಾರ್ಯಕ್ರಮ ವ್ಯವಸ್ಥಾಪಕ ಜೀವನ್ ಕೊಲ್ಯ ಇವರು ಸ್ವ ಉದ್ಯೋಗದ ಮಹತ್ವ ಹಾಗೂ ಬ್ಯಾಂಕ್ ನ ಸಾಲ ಸೌಲಭ್ಯ ಪಡೆದು ಮಹಿಳೆಯರು ಹೇಗೆ ಉದ್ದಿಮೆದಾರರಾಗಬಹುದು ಎಂಬುದನ್ನು ವಿವರಿಸಿದರು . ಈ ಸಂದರ್ಭದಲ್ಲಿ ಬ್ಯಾಂಕ್ ಒಫ್ ಬರೋಡ ಮೂಡುಬಿದಿರೆ ಶಾಖೆಯ ವ್ಯವಸ್ಥಾಪಕರಾದ ಸುರೇಶ್, ಸಹಾಯಕ ವ್ಯವಸ್ಥಾಪಕಾರದ ಪ್ರೇಮ್ ಕುಮಾರ್, ಸಂಪನ್ಮೂಲ ವ್ಯಕ್ತಿಗಳಾದ ಶುಭಲಕ್ಷ್ಮೀ ಇವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ತರಬೇತಿ ಪಡೆದ ಮಹಿಳೆಯರು ತಮ್ಮ ಅನಿಸಿಕೆ ವ್ಯಕ್ತಪಡಿಸಿದರು. ವಿಚೀಸ್ ತರಬೇತಿ ಕೇಂದ್ರದ ದೀಪ್ತಿ ಕಾರ್ಕಳ ಸ್ವಾಗತಿಸಿದರು. ಸೌಮ್ಯಾ ಕಾರ್ಯಕ್ರಮ ನಿರೂಪಿಸಿದರು. ಭವ್ಯಶ್ರೀ ವಂದಿಸಿದರು.
ಮೂಡುಬಿದಿರೆ ಹಾಗೂ ಸುತ್ತ ಮುತ್ತಲಿನ ಪಂಚಾಯತ್ ವ್ಯಾಪ್ತಿಯ ಸುಮಾರು 25 ಮಹಿಳೆಯರು ತರಬೇತಿಯಲ್ಲಿ ಯಶಸ್ವಿಯಾಗಿ ಭಾಗವಹಿಸಿ ಪ್ರಮಾಣ ಪತ್ರ ಪಡೆದರು.