
‘ಮಿಸ್ ಕರಾವಳಿ’ಯಾಗಿ ಧ್ವನಿ ಶೆಟ್ಟಿ
Sunday, February 23, 2025
ಮೂಡುಬಿದಿರೆ: ಮೂಡುಬಿದಿರೆಯ ಸ್ವಾಮಿ ಸ್ಟ್ರೆಂತ್ ಟ್ರೈನಿಂಗ್ ಸಂಸ್ಥೆಯ ಆಶ್ರಯದಲ್ಲಿ ನಡೆದ ‘ಮಿಸ್ಟರ್ ಆಂಡ್ ಮಿಸ್ ಕರಾವಳಿ’ ಸ್ಪರ್ಧೆಯಲ್ಲಿ 12 ರಿಂದ 17 ವರ್ಷ ವಯೋಮಿತಿಯೊಳಗಿನ ಸ್ಪರ್ಧೆಯಲ್ಲಿ ಮೂಡುಬಿದಿರೆಯ ಧನ್ವಿ ಶೆಟ್ಟಿ ವಿನ್ನರ್ ಆಗಿ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾಳೆ.
ಶನಿವಾರ ಮೂಡುಬಿದಿರೆಯ ಸಮಾಜ ಮಂದಿರದಲ್ಲಿ ಈ ಸ್ಪರ್ಧೆ ನಡೆದಿದ್ದು ಕರಾವಳಿಯ ಹಲವಾರು ಮಂದಿ ಸ್ಪರ್ಧಿಗಳು ಭಾಗವಹಿಸಿದ್ದರು.
ಮೂರು ವಿಭಾಗಗಳಲ್ಲಿ ಸ್ಪರ್ಧೆ ನಡೆದಿದ್ದು 12-17 ವಯೋಮಿತಿಯ ಸ್ಪರ್ಧೆಯಲ್ಲಿ ಧನ್ವಿ ಶೆಟ್ಟಿ ವಿನ್ನರ್ ಆಗಿದ್ದಾರೆ.
ಮೂಡುಬಿದಿರೆಯ ಧರ್ಮರಾಜ್-ಚಂದ್ರಿಕಾ ದಂಪತಿಯ ಪುತ್ರಿಯಾಗಿರುವ ಧನ್ವಿ ಈ ಹಿಂದೆ ವಿವಿಧ ಸ್ಪರ್ಧೆಗಳಲ್ಲಿ ಹಲವು ಬಹುಮಾನಗಳನ್ನು ಪಡೆದಿರುವ ಪ್ರತಿಭಾನ್ವಿತೆ. ಮೂಡುಬಿದಿರೆ ರೋಟರಿ ಆಂಗ್ಲ ಮಾಧ್ಯಮ ಶಾಲೆಯ ೬ನೇ ತರಗತಿಯ ವಿದ್ಯಾರ್ಥಿನಿ.