
ಮೂಡುಬಿದಿರೆ: ಪಾಡ್ಯಾರು ಶಾಲೆಯಲ್ಲಿ ಕ್ಲಸ್ಟರ್ ಮಟ್ಟದ ಕಲಿಕಾ ಹಬ್ಬ
Wednesday, February 12, 2025
ಮೂಡುಬಿದಿರೆ: ಇಲ್ಲಿನ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಪಾಡ್ಯಾರು ಇಲ್ಲಿ ಬೆಳುವಾಯಿ ಕ್ಲಸ್ಟರ್ ಮಟ್ಟದ ಕಲಿಕೆಯಲ್ಲಿ ಹಿಂದುಳಿದಿರುವ ಮಕ್ಕಳಿಗಾಗಿ ಇಲಾಖೆ ನಿರ್ದೇಶನದಂತೆ ಕಲಿಕಾ ಹಬ್ಬವನ್ನು ಹಮ್ಮಿಕೊಳ್ಳಲಾಯಿತು.
ದ.ಕ ಜಿಲ್ಲಾ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷ ಡಾ. ಅಕ್ಷತಾ ಆದರ್ಶ್ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಮಕ್ಕಳು ಕಲಿಕೆಯೊಂದಿಗೆ ಪರಾಮರ್ಶಿಸುವ ಗುಣವನ್ನು ಹೊಂದಿರಬೇಕು ಎಂದರು.
ಪಡುಮಾರ್ನಾಡು ಗ್ರಾಮ ಪಂಚಾಯತ್ ಅಧ್ಯಕ್ಷ ವಾಸುದೇವ ಭಟ್ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು.
ಪಂಚಾಯತ್ ಸದಸ್ಯ ನಿತಿನ್ ಮತ್ತು ಟೆಸ್ಲಿನ ಶಾಲಾ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಲಲಿತ, ಶಿಕ್ಷಣ ಸಂಯೋಜಕಿ ಸ್ಮಿತಾ ಮಿರಾಂದ ಸಮನ್ವಯಾಧಿಕಾರಿ ಸೌಮ್ಯ ಎನ್‌ಪಿಎಸ್ ಸಂಘದ ರಾಜ್ಯ ಸಹ ಕಾರ್ಯದರ್ಶಿ ಮೋಹನ್ ಕೊಳವಳ್ಳಿ ಮತ್ತಿತರರು ಉಪಸ್ಥಿತರಿದ್ದರು.
ಸ್ಮಿತಾ ಮಿರಂದ ಸ್ವಾಗತಿಸಿದರು. ಶಾಲಾ ಮುಖ್ಯ ಶಿಕ್ಷಕ ಪ್ರಸನ್ನ ವಿ. ಶೆಣೈ ಕಾಯ೯ಕ್ರಮ ನಿರೂಪಿಸಿದರು. ಸೌಮ್ಯ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಸಿಆರ್‌ಪಿ ದಿನಕರ್ ವಂದಿಸಿದರು. ಏಳು ವಿವಿಧ ವಿಭಾಗಗಳಲ್ಲಿ ಸ್ಪರ್ಧೆಗಳು ನಡೆದು ಬಹುಮಾನ ವಿತರಿಸಲಾಯಿತು. 11 ಶಾಲೆಗಳ ಒಂದರಿಂದ ಐದನೇ ತರಗತಿಯ ವಿದ್ಯಾರ್ಥಿಗಳೊಂದಿಗೆ ಪೋಷಕರು ಶಿಕ್ಷಕರು ಸೇರಿ ಸುಮಾರು 200 ಮಂದಿ ಹಾಜರಿದ್ದರು.